ಕುಕನೂರ್

ಕಿಲೋಸ್ಕರ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಸ್ಕೂಲ್ ಬ್ಯಾಗ್ ವಿತರಣೆ

ಕಿಲೋಸ್ಕರ್   ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಸ್ಕೂಲ್ ಬ್ಯಾಗ್ ವಿತರಣೆ

ಕುಕನೂರು : ಕೊಪ್ಪಳ ತಾಲೂಕಿನ ಬೇವಿನಹಳ್ಳಿ ಗ್ರಾಮದ ಕಿಲೋಸ್ಕರ್    ಫೆರಸ್ ಇಂಡಸ್ಟ್ರಿಯಲ್ ಲಿಮಿಟೆಡ್ ಕೆಲಸದಿಂದ ಕುಕನೂರು ಪಟ್ಟಣದ ಅಂಬೇಡ್ಕರ್ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗ್ ವಿತರಣೆ ಮಾಡಲಾಯಿತು.      

  ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿಕ್ಷಣ ಇಲಾಖೆ ಬಿ ಆರ್ ಪಿ ಮಹೇಶ್ ಅಸೂಟಿ ಮಾತನಾಡುತ್ತಾ ಸರ್ಕಾರಿ ಶಾಲೆಯಲ್ಲಿ ಬಹುತೇಕ ಮಕ್ಕಳು ಬಡ ಕುಟುಂಬದಿಂದ ಬಂದಂತ ವಿದ್ಯಾರ್ಥಿಗಳಾಗಿದ್ದರು ಅಂತಹ ಮಕ್ಕಳಿಗೆ ಉಚಿತವಾಗಿ ಉತ್ತಮ ಗುಣಮಟ್ಟದ ಬ್ಯಾಗು ವಿತರಣೆ ಮಾಡುತ್ತಿರುವುದು ನಿಜಕ್ಕೂ ಪ್ರಶಂಸಾರ್ಹವಾಗಿದ್ದು ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಜನಗಳು ಎಂದು ಹೇಳಿದರು.         

ದಾನಿಗಳಿಂದ ಬಂದಂತಹ ಉಚಿತ ಕೊಡುಗೆಗಳನ್ನು ತೆಗೆದುಕೊಂಡು ಉತ್ತಮವಾದ ಶಿಕ್ಷಣ ಪಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದು ವಿದ್ಯಾರ್ಥಿಗಳ ಕರ್ತವ್ಯ ಹಾಗೂ ಪಾಲಕರು ಸಹ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.      

ಪ್ರಮುಖರಾದ ಮರಿಯಪ್ಪ ಅಣ್ಣಿಗೇರಿ, ಅಂದಪ್ಪ ಭಂಡಾರಿ, ಚಂದ್ರಪ್ಪ ಆರು ಬೆರಳಿನ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಹನುಮಂತಪ್ಪ ಆರು ಬೆರಳಿನ, ಕುಕನೂರ್ ಪೊಲೀಸ್ ಠಾಣಾ ಎಎಸ್ಐ ಶರಣಪ್ಪ ಗೋಳರೆಡ್ಡಿ, ಪಟ್ಟಣ ಪಂಚಾಯತಿ ಸದಸ್ಯರಾದ ಪ್ರಶಾಂತ ಆರ್ ಬೆರಳಿನ, ಲಲಿತಮ್ಮ ಎಡಿಯಾಪುರ, ಮುಖಂಡರಾದ ಲಕ್ಷ್ಮಣ ಕಾಳಿ, ಮಂಜುನಾಥ ಮೇದಾರ, ಸಂತೋಷ ಭಂಡಾರಿ, ಶಿಕ್ಷಕರಾದ ಶಿವಪ್ಪ ಈ ಈಬೇರಿ, ಆಶ್ರಿತ್, ರತ್ನಮ್ಮ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು 

ಸುದ್ದಿ ಓದಿ