ಯರಗಟ್ಟಿ

ಕನ್ನಡವನ್ನು ಬಳಸಿ ಉಳಿಸಿ ಬೆಳೆಸಿ: ಮುರುಘೇಂದ್ರಶ್ರೀ

ಕನ್ನಡವನ್ನು ಬಳಸಿ ಉಳಿಸಿ ಬೆಳೆಸಿ: ಮುರುಘೇಂದ್ರಶ್ರೀ

ಯರಗಟ್ಟಿ 05: ಸಮೀಪದ ಮುನವಳ್ಳಿ ಪಟ್ಟಣದಲ್ಲಿ ಕರ್ನಾಟಕ  ರಾಜ್ಯೋತ್ಸವದ ಅಂಗವಾಗಿ ವಿಡಿಯೋ ಆಲ್ಬಂ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳಲಾಗಿತ್ತು.

ಕರ್ನಾಟಕ ಹಾಗೂ ಕನ್ನಡ ಭಾಷೆ ಹಲವಾರು ಸಮಸ್ಯೆಗಳನ್ನು ಎದುರಿಸಿದರೂ ಮತ್ತಷ್ಟು ಸಮರ್ಥವಾಗಿ ಬೆಳೆಯಬಲ್ಲದು. ಕನ್ನಡ ಬಳಸುವುದರ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದು ಸೋಮಶೇಖರ ಮಠದ ಮುರುಘೇಂದ್ರ ಮಹಾಸ್ವಾಮಿಗಳು ಹೇಳಿದರು. ಅವರು ಸೋಮಶೇಖರ ಮಠದಲ್ಲಿ ಆಯೋಜನೆಗೊಂಡ ಕರ್ನಾಟಕ ರಾಜ್ಯೋತ್ಸವ ಹಾಗೂ ನಾಟ್ಯ ಅಕಾಡೆಮಿಯ ವಿಡಿಯೋ ಆಲ್ಬಂ ಬಿಡುಗಡೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಪನ್ಯಾಸಕ ಆನಂದ ಯಲಿಗಾರ ಮಾತನಾಡಿ ಕನ್ನಡ ಭಾಷೆ ಶ್ರೀಮಂತವಾಗಿದ್ದು ಉಚ್ಛಾರಣೆಯು ವೈಜ್ಞಾನಿಕವಾಗಿದೆ. ಕನ್ನಡ ಬಾಷೆಯ ಉಚ್ಚಾರಣೆಯಿಂದ ದೇಹದಲ್ಲಿ ಹಲವಾರು ಬದಲಾವಣೆಗಳುಂಟಾಗುವವು ಈ ವ್ಯವಸ್ಥೆ ಬೇರೆ ಭಾಷೆಗಳಲ್ಲಿ ಇಲ್ಲ ಎಂದರು.

ಕಸಾಪ ಹೋಬಳಿ ಘಟಕದ ಅಧ್ಯಕ್ಷ ಮೋಹನ ಸರ್ವ್  ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ನಾಟ್ಯ ಡ್ಯಾನ್ಸ್ ಅಕಾಡೆಮಿ ವತಿಯಿಂದ ವಿಡಿಯೋ ಆಲ್ಬಂ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಿ.ಬಿ.ನಾವಲಗಟ್ಟಿ, ಬಿ.ಬಿ.ಹುಲಿಗೊಪ್ಪ, ಗುರುನಾಥ ಪತ್ತಾರ, ವೈ.ಬಿ.ಕಡಕೋಳ, ವೀರಣ್ಣ ಕೊಳಕಿ, ಪ್ರಶಾಂತ ತುಳಜಣ್ಣವರ, ಬಾಳು ಹೊಸಮನಿ, ಅರುಣಗೌಡ ಪಾಟೀಲ, ಶಂಕರ ಗಯ್ಯಾಳಿ, ರಮೇಶ ಮುರಂಕರ, ಸುಧೀರ ವಾಘೇರಿ, ಟಿ.ಎನ್.ಮುರಂಕರ,  ಸುರೇಶ ಜಾವೂರ, ಮಂಜುನಾಥ ಭಂಡಾರಿ, ಮನೋಹರ ನಾಯ್ಕ, ಶಾರದಾ ದ್ಯಾಮನಗೌಡರ, ರಾಜೇಶ್ವರಿ ಬಾಳಿ, ಅನುರಾಧಾ ಬೆಟಗೇರಿ, ವಿಜಯಲಕ್ಷ್ಮೀ ಮುರಂಕರ, ಅಶೋಕ ಸಂಕಣ್ಣವರ, ಸಂತೋಷ ನಲಗೆ, ಶಂಕರ ಅಪ್ಪೋಜಿ, ರುದ್ರಮ್ಮ ಶಿರಸಂಗಿ, ವೈ.ಎಫ್.ಶಾನಭೋಗ, ಗಂಗಾಧರ ಗೊರಾಬಾಳ, ಎಂ.ಎಚ್.ಪಾಟೀಲ, ಮುಕ್ತಾ ಪಶುಪತಿಮಠ, ವಿಜಯ ಸತ್ತಿಗೇರಿ, ಪ್ರೇಮ ಕಲಾಲ, ವೀರೂ ಕಳಸಣ್ಣವರ, ಸಂತೋಷ ಕಳ್ಳಿಮಠ, ರಾಜು ನವಲಗುಂದ, ಶಿವು ಕಾಟಿ, ಮಹೇಶ ಕಳಸಣ್ಣವರ, ಸಚಿನ ಹಳ್ಳೂರ,ಸೇರಿದಂತೆ ಕಸಾಪದ ಪದಾಧಿಕಾರಿಗಳು ಇತರರು ಇದ್ದರು. ಕನ್ನಡ ಸಾಹಿತ್ಯ ಪರಿಷತ್ತು ಮುನವಳ್ಳಿ ಹೋಬಳಿ ಘಟಕ ಹಾಗೂ ಸೋಮಶೇಖರ ಮಠದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು 

ಸುದ್ದಿ ಓದಿ