ಕಾಗವಾಡ

ಸಮ್ಮೇದ ಶಿಖರಜಿ ಪ್ರವಾಸಿ ತಾಣ

ಸಮ್ಮೇದ ಶಿಖರಜಿ ಪ್ರವಾಸಿ ತಾಣ

ಲೋಕದರ್ಶನ ವರದಿ

ಜಾರ್ಖಂಡ ರಾಜ್ಯ ಕೇಂದ್ರ ಸರ್ಕಾರದ ಕಾರ್ಯವೈಖರಿ ಖಂಡಿಸಿ ಇಂದು ಪ್ರತಿಭಟನೆ

ಶೇಡಬಾಳ 20: ಜೈನ ಧರ್ಮಿಯರ ತೀರ್ಥಕ್ಷೇತ್ರವಾದ ಸಮ್ಮೇದ ಶಿಖರಜಿಯನ್ನು ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಲು ಹೊರಟಿರುವ ಜಾರ್ಖಂಡ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಖಂಡಿಸಿ ಬರುವ ಬುಧವಾರ ದಿ. 21 ರಂದು ಮುಂಜಾನೆ 10 ಗಂಟೆಗೆ ಕಾಗವಾಡ ತಾಲೂಕಿನ ಸಮಸ್ತ ಜೈನ ಬಾಂಧವರು ಪ್ರತಿಭಟನಾ ರ್ಯಾಲಿಯ ಮೂಲಕ ಕಾಗವಾಡ ತಹಶೀಲ್ದಾರ ಕಾರ್ಯಾಲಯಕ್ಕೆ ತೆರಳಿ ಮನವಿ ಪತ್ರ ಅರ್ಪಿಸಲಿದ್ದಾರೆ ಎಂದು ಉಗಾರ ಬುದ್ರುಕ ಪದ್ಮಾವತಿ ಮಂದಿರದ ಧರ್ಮಾಧಿಕಾರಿಗಳಾದ ಶೀತಲಗೌಡ ಪಾಟೀಲ ಹೇಳಿದರು.

ಅವರು ಸೋಮವಾರ ದಿ. 19 ರಂದು ಉಗಾರ ಬುದ್ರುಕ ಗ್ರಾಮದ ಪದ್ಮಾವತಿ ದೇವಿಯ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಜೈನ ಸಮುದಾಯದ ಪವಿತ್ರ ತೀರ್ಥ ಕ್ಷೇತ್ರ ಸಮ್ಮೇದ ಶಿಖರಜಿಯನ್ನು ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಲು ಹೊರಟಿರುವ ಕೇಂದ್ರ ಹಾಗೂ ಜಾರ್ಖಂಡ ಸರ್ಕಾರದ ಕಾರ್ಯ ಖಂಡಿನೀಯವಾಗಿದೆ. ಜೈನ ಧರ್ಮದ 20 ತೀರ್ಥಂಕರು ಮತ್ತು ಕೋಟ್ಯಾಂತರ ಸಂಖ್ಯೆಯಲ್ಲಿ ಜೈನ ಸಾಧು, ಸಂತರು ಮೋಕ್ಷ ಪಡೆದಿರುವ ಪವಿತ್ರ ತೀರ್ಥಕ್ಷೇತ್ರವಾಗಿದೆ. ಅದನ್ನು ಅಭಿವೃದ್ಧಿ ಪಡಿಸುವ ಹೆಸರಿನಲ್ಲಿ ಪ್ರವಾಸಿ ತಾಣವನ್ನಾಗಿ ಮಾರ್ಪಡಿಸುತ್ತಿರುವ ಕಾರ್ಯವನ್ನು ಕೈಗೊಳ್ಳದಂತೆ ಕೇಂದ್ರ ಹಾಗೂ ಜಾರ್ಖಂಡ ಸಕರ್ಾರದ ಮೇಲೆ ಒತ್ತಡ ಹೇರುವಗೋಸ್ಕರ ಕಾಗವಾಡ ತಹಶೀಲ್ದಾರ ಮೂಲಕ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ, ಜಾರ್ಖಂಡ ಸರ್ಕಾರಕ್ಕೆ ಮನವಿ ಪತ್ರ ಅಪರ್ಿಸಿ ಒತ್ತಾಲಿಸಲಿದ್ದೇವೆ. 

ಕಾಗವಾಡ ಪಟ್ಟಣದ ಶ್ರೀ ಶಾಂತಿಸಾಗರ ಕನ್ನಡ ಮಾಧ್ಯಮ ಶಾಲೆಯ ಆವರಣದಿಂದ ಪ್ರಾರಂಭವಾಗುವ ಈ ಪ್ರತಿಭಟನಾ ರ್ಯಾಲಿಯು ತಹಶೀಲ್ದಾರ ಕಾಯರ್ಾಲಯಕ್ಕೆ ತೆರಳಿ ಅಲ್ಲಿ ತಹಶಿಲ್ದಾರರಿಗೆ ಮನವಿ ಪತ್ರ ಅರ್ಪಿ ಸಲಾಗುವುದು. 

ಕಾರಣ ಕಾಗವಾಡ ತಾಲೂಕಿನ ಸಮಸ್ತ ಜೈನ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರ್ಯಾಲಿಯನ್ನು ಯಶಸ್ವಿಗೊಳಿಸುವಂತೆ ಶೀತಲಗೌಡ ಪಾಟೀಲ ಮನವಿ ಮಾಡಿಕೊಂಡಿದ್ದಾರೆ.

ಈ ಪತ್ರಿಕಾಗೋಷ್ಟಿಯಲ್ಲಿ ಜೈನ ಮುಖಂಡರುಗಳಾದ ಶೀತಲಗೌಡ ಪಾಟೀಲ, ಅಪ್ಪಾಸಾಬ ಚೌಗಲೆ, ಮನೋಹರ ಚೌಗಲೆ, ಅಣ್ಣಾಸಾಬ ನಂದಗಾಂವೆ, ಪದ್ಮಕುಮಾರ ಆಳಪ್ಪನವರ ಸೇರಿದಂತೆ ಅನೇಕರು ಇದ್ದರು 

ಸುದ್ದಿ ಓದಿ