ಎಸ್.ಸಿ, ಎಸ್.ಟಿ ನಾಮ ನಿರ್ದೇಶಿತ ಸದಸ್ಯ : ಅಶೋಕ್ ಕಾಳೆ ಆಯ್ಕೆ
ಲೋಕದರ್ಶನ ವರದಿ
ಶಿಗ್ಗಾವಿ 29 : ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ದೌರ್ಜನ್ಯ ನಿಯಂತ್ರಣ ಕಾಯ್ದೆಯ ನಾಮ ನಿರ್ದೇಶಿತ ಸದಸ್ಯರಾಗಿ ಆಶೋಕ ಕಾಳೆ ಆಯ್ಕೆಯಾದರು. ಕನ್ನಡ ಜಾಗೃತಿ ವೇದಿಕೆ ಯುವ ಘಟಕ ಬೆಂಗಳೂರು ಹಾಗೂ ತಾಲೂಕಿನ ಸರ್ವ ಸದಸ್ಯರು ಸೇರಿ ಸನ್ಮಾನಿಸಿ ಗೌರವಿಸಲಾಯಿತು. ಜೀವಿಕ ಜೀತದಾಳು ಹಾವೇರಿ ಜಿಲ್ಲಾ ಸಂಚಾಲಕ ಸುರೇಶ್ ಹರಿಜನ್, ತಾಲೂಕ ಕಾರ್ಯದರ್ಶಿ ಸುರೇಶ್ ಬಡಪ್ಪನವರ, ಮೌಲಾಲಿ ಶೇಕ್ ಅಲಿ, ಸಾಬಿಕ್ ಅಂಬೂರ್, ಕರೆಪ್ಪ ಹರಿಜನ್, ಗೌಸ್ ಅಗಸನಮಟ್ಟಿ, ಪ್ರಶಾಂತ್ ಕೆರೂರು, ಮುಕ್ಬುಲ್ ಯಲ್ಲಾಪುರ, ಪರಶುರಾಮ್ ಈಳಿಗೇರ ಮುಂತಾದವರು ಉಪಸ್ಥಿತರಿದ್ದರು