ಅಥಣಿ

ಮೊಮ್ಮಗನೊಂದಿಗೆ ಕಾಲ ಕಳೆದ ಶ್ರೀಮಂತ ಪಾಟೀಲ

ಮೊಮ್ಮಗನೊಂದಿಗೆ ಕಾಲ ಕಳೆದ ಶ್ರೀಮಂತ ಪಾಟೀಲ

ಲೋಕದರ್ಶನ ವರದಿ

ಸಂಬರಗಿ 12: ಕಳೆದ ಒಂದು ತಿಂಗಳನಿಂದ ಕಾಗವಾಡ ವಿಧಾನ ಸಭಾ ಮತಕ್ಷೇತ್ರದಲ್ಲಿ ಹಗಲುರಾತ್ರಿ ಎನ್ನದೇ ಎಡಬಿಡದೇ  ಚುನಾವಣೆ ಪ್ರಚಾರದಲ್ಲಿ ತೊಡಗಿದ್ದು ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲರು ಗುರುವಾರ ಮೊಮ್ಮಗನ ಜೊತೆ ಕೆಲಹೊತ್ತು ಸಮಯ ಕಳದು ನಂತರ ತಮ್ಮ ಸಕ್ಕರೆ ಕಾರ್ಖಾ ನೆಯ ಅತಿಥಿ ಗೃಹದಲ್ಲಿ ತಮ್ಮನ್ನು ಭೇಟಿಯಾಗಲು ಬರುತ್ತಿದ್ದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ರಿಲ್ಯಾಕ್ಸ ಮೂಡನಲ್ಲಿ ಕಾಲ ಕಳೆದರು.

ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗಡಿ ಭಾಗದ ಗ್ರಾಮದ   ಸಂಬರಗಿ, ಖಿಳೇಗಾಂವ, ಶಿರೂರ, ಜಂಬಗಿ, ಜಕಾರಟ್ಟಿ, ಮಧಭಾವಿ, ಅನಂತಪೂರ, ಚಮಕೇರಿ, ಬಾಳಿಗೇರಿ, ಕಿರಣಗಿ, ಹಲವಾರು ಗ್ರಾಮದ ಕಾರ್ಯಕರ್ತರು ಭೇಟಿಯಾಗಿ ತಮ್ಮ ತಮ್ಮ ಗ್ರಾಮದಲ್ಲಿ ನಡೆದ ಮತದಾನ ಮಾಹಿತಿಯನ್ನು ಸಂಪೂರ್ಣವಾಗಿ ವಿವರಸಿದರು. ಹಲವಾರು ಕಾರ್ಯಕರ್ತರು ನಿಮ್ಮ ಗೆಲವು ಖಚಿತ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

             ಈ ವೇಳೆ ಶ್ರೀಮಂತ ಪಾಟೀಲ ಅವರು ಮಾತನಾಡಿ ಕಳೆದ ಐದು ವರ್ಷಗಳಲ್ಲಿ  ಕಾಗವಾಡ ಕ್ಷೇತ್ರದಲ್ಲಿ ಮಾಡಿರುವ ಅಬಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನನಗೆ ಪಕ್ಷಾತೀತವಾಗಿ ಮತ ಹಾಕುವ ಮೂಲಕ ನನಗೆ ಆಶೀರ್ವಾದ ಮಾಡಿದ್ದಾರೆ. ಭಾರಿ ಅಂತರದಿಂದಾ ನನ್ನ ಗೆಲುವೂ ಖಚಿತ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಭಾಹುಸಾಹೇಬ ಜಾಧವ, ನಾನಾಸಾಹೆೇಬ ಅವತಾಡೆ, ಅಪ್ಪಾಸಾಹೆೇಬ ಅವತಾಡೆ, ಆರ್. ಎಮ್.ಪಾಟೀಲ, ಈಶ್ವರ ಕುಂಭಾರೆ, ಅನ್ನಾಗೌಡಾ ಪಾಟೀಲ, ದಾದಾ ಶಿಂದೆ, ಬಾಳು ಹಜಾರೆ, ರವಿ ನಾಗಗೋಳ, ಧರೆಪ್ಪಾ ಹೊನ್ನಾಗೊಳ, ಗೋವಿಂದ ಪಾಟೀಲ, ದತ್ತಾ ಭೋಸಲೆ ಯಶವಂತ ದರೆಕರ, ವಿನಾಯಕ ಪಾಟೀಲ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು 

ಸುದ್ದಿ ಓದಿ