ಧಾರವಾಡ - ಹುಬ್ಬಳ್ಳಿ

ಸಿಸಿಐ ಮೂಲಕ ಹತ್ತಿ ಖರೀದಿ ಕೇಂದ್ರವನ್ನು ಪ್ರಾರಂಬಿಸಲು ಜೋಶಿ ಅವರಿಗೆ ಮನವಿ

ಸಿಸಿಐ ಮೂಲಕ ಹತ್ತಿ ಖರೀದಿ ಕೇಂದ್ರವನ್ನು ಪ್ರಾರಂಬಿಸಲು ಜೋಶಿ ಅವರಿಗೆ ಮನವಿ


ಸಿಸಿಐ ಮೂಲಕ ಹತ್ತಿ ಖರೀದಿ ಕೇಂದ್ರವನ್ನು ಪ್ರಾರಂಬಿಸಲು ಜೋಶಿ ಅವರಿಗೆ ಮನವಿ 

ಹುಬ್ಬಳ್ಳಿ 03: ನವಲಗುಂದ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲ್ಲೂಕುಗಳಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಬೆಳೆಯನ್ನು ಬೆಳೆದಿದ್ದು ಮಾರುಕಟ್ಟೆಯಲ್ಲಿ ಹತ್ತಿ ಬೆಳೆಯ ದರ ಕುಡಿಯುತ್ತಿರುವುದರಿಂದ ತಕ್ಷಣ ಕೇಂದ್ರ ಸರ್ಕಾರದ ಆದೀನದಲ್ಲಿರುವ ಕಾಟನ್ ಕಾರ​‍್ೋರೆಶನ್ ಆಫ್ ಇಂಡಿಯಾ ಮೂಲಕ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರಿಗೆ ನವಲಗುಂದ ವಿಧಾನಸ ಭಾಕ್ಷೇತ್ರದ ಶಾಸಕಎನ್‌.ಹೆಚ್‌. ಕೋನರಡ್ಡಿ ಮನವಿ ಮಾಡಿದರು. ಅವರುಇಂದು ಹುಬ್ಬಳ್ಳಿಯ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರ ಸರ್ಕಾರಿ ಕಚೇರಿಯ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನವಿ ಸಲ್ಲಿಸಿ ಮಾತನಾಡಿದಅವರು ಈ ಬಾರಿ ರೈತರು ಬೆಳೆದ ಹತ್ತಿಯನ್ನು ರೈತರು ಮಾರುಕಟ್ಟೆಗೆ ಕಳುಹಿಸಿದರೆ ಮಾರುಕಟ್ಟೆಯಲ್ಲಿ ಬಹಳ ಕಡಿಮೆ ದರದಲ್ಲಿ ಹತ್ತಿ ಖರೀದಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ದರ ಕುಸಿದಾಗ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಪ್ರತಿವರ್ಷ ಕಾಟನ್ ಕಾರ​‍್ೋರೇಷನ್ ಆಫ್ ಇಂಡಿಯಾವತಿಯಿಂದ ಬೆಂಬಲ ಬೆಲೆಯಲ್ಲಿ ಹತ್ತಿಬೆಳೆಯನ್ನು ಖರೀದಿಸುತ್ತಾ ಬಂದಿರುತ್ತಾರೆ. ಅದೇ ರೀತಿಯಲ್ಲಿ ತಕ್ಷಣ ಖರಿದಿ ಕೇಂದ್ರದ ಮೂಲಕ ಹತ್ತಿ ಬೆಳೆಯನ್ನು ಖರೀದಿಸುವಂತೆ ಸಂಬಂಧಿಸದವರಿಗೆ ಆದೇಶ ನೀಡಬೇಕೆಂದು ಕೋನರಡ್ಡಿ ಮನವಿ ಮಾಡಿದರು.  

ಈ ಸಂದರ್ಭದಲ್ಲಿ ಕ್ರೆಡಲ್ ಮಾಜಿ ಅಧ್ಯಕ್ಷ ಷಣ್ಮೂಖ ಗುರಿಕಾರ, ತಾ.ಪಂ.ಮಾಜಿ ಉಪಾಧ್ಯಕ್ಷ ಬಸವರಾಜ ಬೀರಣ್ಣವರ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ