ಹಿರೇಬಿದರಿ ಕಾರ್ಯಕ್ಷೇತ್ರದಲ್ಲಿ ಧಾರ್ಮಿಕ ಶ್ರದ್ಧಾ ಕಾರ್ಯಕ್ರಮ
ರಾಣೆಬೆನ್ನೂರು 18: ಭಾರತೀಯರು ಆಧ್ಯಾತ್ಮ ಮತ್ತು ಧಾರ್ಮಿಕ ಜೀವಿಗಳು, ಧರ್ಮದ ಅನುಯಾಯಿಗಳಾಗಿರುವ ಮಾನವ ಜನ್ಮ ಸಾರ್ಥಕತೆ ಪಡೆಯಬೇಕಾದರೆ ಕಾರ್ಮಿಕ ಶ್ರದ್ಧಾ ಕೇಂದ್ರಗಳು ಅತ್ಯಂತ ಸ್ವಚ್ಛ ಮತ್ತು ಸುಂದರತೆಯಿಂದ ಕೂಡಿರಬೇಕಾದ ಅಗತ್ಯವಿದೆ ಎಂದು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೆಂಚನಗೌಡ ಪಾಟೀಲ್ ಹೇಳಿದರು.
ತಾಲೂಕಿನ ಅರೆಮಲ್ಲಾಪುರ ವಲಯದ, ಹಿರೇಬಿದರಿ ಕಾರ್ಯಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ, ದೇವಾಲಯಗಳ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ, ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ನಾಗರಿಕರು ಮಾನಸಿಕ ಶಾಂತಿ ನೆಮ್ಮದಿಗಾಗಿ ದೇಗುಲಗಳ ದರ್ಶನಕ್ಕೆ ಆಗಮಿಸುವುದು ಸಂಪ್ರದಾಯ. ಅಲ್ಲಿ, ಸುಚಿತ್ವವಿದ್ದರೆ ಭಕ್ತರು ದರ್ಶನ ಪಡೆದು, ವಿಶ್ರಾಂತಿ ಹೊಂದಿ, ಸಂತೋಷ ಕಾಣಲು ಸಾಧ್ಯವಾಗುವುದು, ಧರ್ಮದರ್ಶಿಗಳು ಇದರ ಕಡೆ ನಿತ್ಯ ಕಾಯಕಯೋಗಿಗಳಾಗಿ ಸೇವಾ ಮುಖಿಯಾಗಬೇಕು ಎಂದರು. ಶಾಲಾ ಮುಖ್ಯ ಶಿಕ್ಷಕಿ ಸರೋಜಿನಿ ಅವರು ಮಾತನಾಡಿ, ಗ್ರಾಮಿಣ ಪ್ರದೇಶದ ದೇವಸ್ಥಾನಗಳು ಮತ್ತು ಮಠ ಮಂದಿರಗಳು ಗ್ರಾಮದ ಬೀದಿಗಳು ಸ್ವಚ್ಛಗೊಳಿಸುವಲ್ಲಿ ಸ್ವಸಹಾಯ ಸಂಘದ ಸದಸ್ಯರು ಮಾದರಿಯಾಗಿದ್ದಾರೆ. ಕ್ಷೇತ್ರವು ಆಯೋಜಿಸುವ ಎಲ್ಲ ರೀತಿಯ ಯೋಜನೆಗಳು, ಮಹಿಳಾ ಸ್ವಾವಲಂಬನೆಯ ಬದುಕಿಗೆ ತುಂಬಾ ಸಹಕಾರಿಯಾಗಿದೆ ಎಂದರು ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕ ರಮೇಶ, ಸೇವಾ ಪ್ರತಿನಿಧಿಗಳು ಮತ್ತು ಸಂಘದ ಸದಸ್ಯರು ಗ್ರಾಮದ ಗಣ್ಯರು ಪಾಲ್ಗೊಂಡಿದ್ದರು.