ರಾವಸಾಹೇಬ ಕುರುಂದವಾಡೆ ನಿಧನ
ಲೋಕದರ್ಶನ ವರದಿ
ಶೇಡಬಾಳ 30: ತಿಕೋಟಾದ ಬಿಎಲ್ಡಿಇ ಸಂಸ್ಥೆಯ ಎ.ಬಿ.ಜತ್ತಿ ಪದವಿಪೂರ್ವ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರು ಹಾಗೂ ಶಿರಗುಪ್ಪಿ ಗ್ರಾಮದ ರಾವಸಾಹೇಬ ಜಿನ್ನಪ್ಪ ಕುರುಂದವಾಡೆ ಇವರು ಬುಧವಾರ ದಿ. 28ರಂದು ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಸಹೋದರರು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.