ಹೂವಿನ ಹಡಗಲಿ

ರಾಣಿ ಚನ್ನಮ್ಮ ಹೋರಾಟಕ್ಕೆ ಸ್ಪೂರ್ತಿ

ರಾಣಿ ಚನ್ನಮ್ಮ ಹೋರಾಟಕ್ಕೆ ಸ್ಪೂರ್ತಿ

ರಾಣಿ ಚನ್ನಮ್ಮ ಹೋರಾಟಕ್ಕೆ ಸ್ಪೂರ್ತಿ  

ಹೂವಿನ ಹಡಗಲಿ 24: ಬ್ರಿಟಿಷ್ ರ  ವಿರುದ್ಧ ಹೋರಾಡಿ ಒಂದಿಂಚು ನೆಲವನ್ನುಬಿಟ್ಟುಕೊಡದೆ ಪ್ರಜೆಗಳನ್ನು ಸಂರಕ್ಷಿಸಿದ ಕಿತ್ತೂರು ರಾಣಿ ಚನ್ನಮ್ಮ ಹೋರಾಟಕ್ಕೆ ಸ್ಫೂರ್ತಿಯಾಗಿದ್ದಾರೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು. ಇಲ್ಲಿನ ತಾಪಂನ ರಾಜೀವ್ ಗಾಂಧಿ ಸಭಾಂಗಣದಲ್ಲಿ ತಾಲೂಕು ಆಡಳಿತ, ಬಿಸಿಎಂ ಇಲಾಖೆ ಹಾಗೂ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಸಹಯೋಗದಿಂದ ಬುಧವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.  

ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿ ರಾಜ್ಯ ರಕ್ಷಣೆಗೆ ಸ್ವಾಭಿಮಾನದ ಹೋರಾಟ ಮಾಡಿರುವುದು ನಮಗೆಲ್ಲ ಆದರ್ಶ ಎಂದರು. ಪಟ್ಟಣದಲ್ಲಿ ನಿರ್ಮಿಸಿರುವ ಪಂಚಮಸಾಲಿ ಸಮಾಜದ ಸಮುದಾಯ ಭವನ ಮತ್ತು ರಸ್ತೆ ಕಾಮಗಾರಿ ಅಪೂರ್ಣವಾಗಿದೆ. ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಅಧಿಕಾರಿ ಇದಕ್ಕೆ ಬಿಡುಗಡೆಯಾಗಿರುವ 78 ಲಕ್ಷ ರೂ. ಅನುದಾನ ಬೇರೆ ಕಾಮಗಾರಿಗೆ ಬಳಸಿಕೊಂಡು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇಲಾಖೆ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡಲಾಗಿದೆ. ಅಲ್ಲದೆ ಭವನಕ್ಕೆ ಅನುದಾನ ನೀಡಿರುವ ಖಾಸಗಿ ಕಂಪನಿಯವರು ಉಳಿದ ಹಣ ನೀಡಲು ಕೂಡ ಹಿಂದೇಟು ಹಾಕಿದ್ದಾರೆ. ತಾವು ತಮ್ಮ ಸ್ವಂತ ಹಣ ನೀಡಿ ಸಿಸಿ ರಸ್ತೆ ಕಾಮಗಾರಿ ಮುಂದುವರಿಸಲಾಗಿದೆ. ಬಾಕಿ ಉಳಿದಿರುವ ಕಾಮಗಾರಿಗಳ ಪಟ್ಟಿ ಮಾಡಿದ್ದು, ತಿಂಗಳೊಳಗೆ ಎಲ್ಲ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಸಮಾಜದ ಅಭಿವೃದ್ಧಿಗೆ ತಾವು ಸಹಕರಿಸುವುದಾಗಿ ಭರವಸೆ ನೀಡಿದರು. ಮುಖ್ಯ ಶಿಕ್ಷಕ ಎಚ್‌.ಜಿ.ಪಾಟೀಲ್ ಉಪನ್ಯಾಸ ನೀಡಿದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿದರು. ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಕೆ.ಎಸ್‌.ಶಾಂತನಗೌಡ, ಸಮಾಜದ ನೌಕರರ ಸಂಘದ ಅಧ್ಯಕ್ಷ ವಿ.ಬಿ.ಜಗದೀಶ, ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸಿಕೆಎಂ.ಬಸವಲಿಂಗಸ್ವಾಮಿ, ತಾಪಂ ಸಹಾಯಕ ನಿರ್ದೇಶಕ ಹೇಮಾದ್ರಿನಾಯ್ಕ ಬಿಸಿಎಂ ಅಧಿಕಾರಿ ಎಂಪಿಎಂ.ಅಶೋಕ, ಸಮಾಜದ ಮುಖಂಡರು ಇದ್ದರು. ಶಿಕ್ಷಕರಾದ ಬಳ್ಕೊಳ್ಳಿ ವೀರಣ್ಣ, ಚನ್ನವೀರನಗೌಡ, ಯುವರಾಜಗೌಡ ನಿರ್ವಹಿಸಿದರು. 


ಸುದ್ದಿ ಓದಿ