ರಾಣೆಬೆನ್ನೂರ

ಚುನಾವಣೆ ಮುಗಿದಿದೆ ಇನ್ನಾದರೂ ಜಿಲ್ಲಾಧಿಕಾರಿಗಳು ರೈತರ ಬಗ್ಗೆ ಗಮನಹರಿಸಲಿ ರವೀಂದ್ರಗೌಡ ಪಾಟೀಲ ಒತ್ತಾಯ

ಚುನಾವಣೆ ಮುಗಿದಿದೆ ಇನ್ನಾದರೂ ಜಿಲ್ಲಾಧಿಕಾರಿಗಳು ರೈತರ ಬಗ್ಗೆ ಗಮನಹರಿಸಲಿ ರವೀಂದ್ರಗೌಡ  ಪಾಟೀಲ ಒತ್ತಾಯ

ಚುನಾವಣೆ ಮುಗಿದಿದೆ ಇನ್ನಾದರೂ ಜಿಲ್ಲಾಧಿಕಾರಿಗಳು ರೈತರ ಬಗ್ಗೆ ಗಮನಹರಿಸಲಿ ರವೀಂದ್ರಗೌಡ  ಪಾಟೀಲ ಒತ್ತಾಯ  

ರಾಣೇಬೆನ್ನೂರು 21: ಬೆಳೆವಿಮೆ ಬಾಕಿ ಹಣಕ್ಕಾಗಿ ಒತ್ತಾಯಿಸಿ ಜಿಲ್ಲಾದ್ಯಂತ ಎಲ್ಲಾ ಗ್ರಾಪಂಗಳಿಗೆ ಬೀಗ ಜಡಿದು ರೈತರು ಪ್ರತಿಭಟನೆ ಮಾಡುತ್ತಿದ್ದು ಇದುವರೆಗೂ ಜಿಲ್ಲಾಡಳಿತ ಶಿಗ್ಗಾಂವ ಸವಣೂರು ಉಪ ಚುನಾವಣೆಯ ಕಡೆ ಗಮನಹರಿಸಿತೆ ಹೊರತು ರೈತರ ಕಡೆಗೆ ಗಮನ ಹರಿಸಲಿಲ್ಲ. ಈಗ ಚುನಾವಣೆ ಮುಗಿದಿದೆ ಇನ್ನು ಮೇಲಾದರೂ ಜಿಲ್ಲಾಧಿಕಾರಿಗಳು ರೈತರ ಸಮಸ್ಯೆಗಳ ಬಗ್ಗೆ ಗಮನಹರಿಸಿ ರೈತರಿಗೆ ಮಕ್ಮಲ್ ಟೋಪಿ ಹಾಕಲು ಯತ್ನಿಸುತ್ತಿರುವ ರಿಲಾಯನ್ಸ್‌ ಇನ್ಸ್ಯೂರೆನ್ಸ್‌ ಕಂಪನಿಯ ಕಿವಿಹಿಂಡಿ ರೈತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ರೈತ ಮುಖಂಡ ರವೀಂದ್ರಗೌಡ ಎಫ್‌. ಪಾಟೀಲ ಒತ್ತಾಯಿಸಿದರು.  

     ಅವರು ಇಂದು ತಾಲೂಕಿನ ವೈ.ಟಿ. ಹೊನ್ನತ್ತಿ ಗ್ರಾ.ಪಂ.ಗೆ ಸರದಿ ಗ್ರಾ.ಪಂಗಳಿಗೆ ಬೆಳೆವಿಮೆ ಬಾಕಿ ಹಣಕ್ಕಾಗಿ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆ ಪಂಚಾಯಿತಿಗೆ ಬೀಗ ಜಡಿಯುವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು ದಿನಗಳೆದಂತೆ ರೈತರು ಮರೆತು ಹೋಗುತ್ತಾರೆ. ಬೇರೆ ಸಮಸ್ಯೆಗಳ ಕಡೆ ಗಮನಕೊಡುತ್ತಾರೆ ಎನ್ನುವ ಭ್ರಮೆಯಲ್ಲಿ ಜಿಲ್ಲಾಡಳಿತ ಮತ್ತು ಇನ್ಸ್ಯೂರೆನ್ಸ್‌ ಕಂಪನಿ ಇದ್ದರೆ ಆ ವಿಚಾರದಿಂದ ಹೊರಬರಲಿ ಏಕೆಂದರೆ ಚುನಾವಣೆ ನೀತಿ ಸಂಹಿತೆ ಇದೆ ಎಂದು ಕಾನೂನಿಗೆ ಗೌರವಕೊಟ್ಟು ನಾವು ಶಾಂತ ರೀತಿಯಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ಈಗ ಚುನಾವಣೆ ಮುಗಿದಿದೆ. ಜಿಲ್ಲಾಧಿಕಾರಿಳು ರೈತರ ಬಗ್ಗೆ ಗಮನ ಹರಿಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಉಗ್ರ ಸ್ವರೂಪ ತಾಳುತ್ತದೆ ಎಂದು ಪಾಟೀಲರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು. ವೈ.ಟಿ. ಹೊನ್ನತ್ತಿ ಗ್ರಾಮದ ಊರ ಹೊರಗಿನಿಂದ ಒಂದು ಕಿ.ಮೀ. ದೂರದ ವರೆಗೆ ಪ್ರತಿಭಟನಾ ಮೆರವಣಿಗೆಯ ಮೂಲಕ ಗ್ರಾಮ ಪಂಚಾಯಿತಿಗೆ ತೆರಳಿದ ಪ್ರತಿಭಟನಾಕಾರರು ಅಲ್ಲಿ ಕಂದಾಯ ಮತ್ತು ಕೃಷಿ ಅಧಿಕಾರಿಗಳ ಮೂಲಕ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.  

     ಕಂದಾಯ ಇಲಾಖೆಯ ಎಸ್‌.ಎನ್‌. ಕಜ್ಜರಿ ಮತ್ತು ಕೃಷಿ ಇಲಾಖೆ ಜಗದೀಶ ಬಣಕಾರ ಸ್ಥಳಕ್ಕೆ ಧಾವಿಸಿ ಮನವಿ ಸ್ವೀಕರಿಸಿದರು.  

     ಪ್ರತಿಭಟನೆಯಲ್ಲಿ ಗ್ರಾ.ಪಂ. ಸದಸ್ಯ ಹಾಲಪ್ಪ ಕುಲಕರ್ಣಿ, ನಾಗಪ್ಪ ಉಕ್ಕುಂದ, ಪ್ರಕಾಶ ಪೂಜಾರ, ನಾಗಪ್ಪ ಹೊಳಲ, ಹರಿಹರಗೌಡ ಪಾಟೀಲ, ಸುರೇಶ ಪಾಟೀಲ, ಹಾಲೇಶ ಕೆಂಚನಾಯ್ಕರ, ರುದ್ರಗೌಡ ಪಾಟೀಲ, ಹನುಮಂತಪ್ಪ ಓಲೇಕಾರ, ಚಂದ್ರ​‍್ಪ ಬನ್ನಿಹಟ್ಟಿ, ಸುರೇಶ ಹೊನ್ನಚಿಕ್ಕಣ್ಣನವರ, ಲಿಂಗರಾಜ ಪೂಜಾರ, ಗೋವಿಂದ ತಳವಾರ, ನಿಂಗಪ್ಪ ಪೂಜಾರ, ಹನುಮಂತಪ್ಪ ಸುರಣಗಿ, ವಿಜಯ ವಟ್ಲಳ್ಳಿ, ಕರಿಯಪ್ಪ ಕೊವಿ ಮುಂತಾದ ರೈತ ಮುಖಂಡರು ಆಗಮಿಸಿದ್ದರು. ಗ್ರಾಮೀಣ ಠಾಣೆಯ ಎ.ಎಸ್‌.ಐ. ಆರ್‌.ಜೆ. ಹಿರೇಮಠ, ಸಿ.ಬಿ. ಕಡ್ಲೆಪ್ಪನವರ ಸೂಕ್ತ ಪೊಲೀಸ್ ಬಂದೋಬಸ್ತ್‌ ಒದಗಿಸಿದ್ದರು. 


ಸುದ್ದಿ ಓದಿ