ರಾಣೆಬೆನ್ನೂರ

ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಕ್ವಿಜ್ ಪರಿಣಾಮಕಾರಿ: ನಿಜಲಿಂಗಪ್ಪ

ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಕ್ವಿಜ್ ಪರಿಣಾಮಕಾರಿ: ನಿಜಲಿಂಗಪ್ಪ

ರಾಣೇಬೆನ್ನೂರು26: ಕ್ವಿಜ್ ಎಂದರೆ ಕೇವಲ ಕಂಠಪಾಠ ಮಾಡುವುದು ಎಂದಲ್ಲ. ಮನೋರಂಜನಾ ದೃಷ್ಠಿಯನ್ನಿಟ್ಟುಕೊಂಡು ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ತುಂಬಾ ಪರಿಣಾಮಕಾರಿ ಎಂದು ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ ಹೇಳಿದರು. 

 ಹಾವೇರಿ  ತಾಲ್ಲೂಕಿನ ಅಗಡಿ ಗ್ರಾಮದಲ್ಲಿ ಸ್ಪೂರ್ತಿ ವಿದ್ಯಾ ಕುಟೀರ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಅಂಗವಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ಕರ್ನಾಟಕ ದರ್ಶನ ಮುಕ್ತ ರಸಪ್ರಶ್ನೆ ಸ್ಪರ್ಧೆಯನ್ನು ಒಂದು ಸುತ್ತ ಪ್ರಶ್ನೆಗಳನ್ನು ಕೇಳುವುದರ ಮೂಲಕ ಉದ್ಘಾಟಿಸಿ  ಮಾತನಾಡಿದರು. 

ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಕರು ಪಠ್ಯದ ಜೊತೆಗೆ ಜ್ಞಾನಾಭಿವೃದ್ಧಿಗೆ ಸಾಮಾನ್ಯ ಜ್ಞಾನ ಅತ್ಯವಶ್ಯ. ವರ್ತಮಾನ ಪತ್ರಿಕೆಗಳು ಹಾಗೂ ಪಠ್ಯಕ್ಕೆ ಪೂರಕ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು .ಮಾಸ್ತಿ ತಂಡದ ಚಂದ್ರು ಪರಾರಿ, ಮಂಜುನಾಥ ಕಡೇಮನಿ ಪ್ರಥಮ, ಕುವೆಂಪು ತಂಡದ ಹನುಮಂತ ಕಾಟೇನಹಳ್ಳಿ, ಬಸವರಾಜ ಯಾತಗಿ ದ್ವಿತೀಯ, ಕಾರಂತ ತಂಡದ ಕವಿತಾ ಬಿಳಿಕುದರಿ, ಸೌಮ್ಯ ಕಮತರ ತೃತೀಯ ಹಾಗೂ ಗೋಕಾಕ್ ತಂಡದ ಶ್ರೀಕಾಂತ ಸಣ್ಣಮನಿ, ಪ್ರಶಾಂತ ಕರ್ಜಗಿ, ಬೇಂದ್ರ ತಂಡದ ಮಿನಾಜ್ ನದಾಫ್, ತನುಜಾ ಡೊಳೆ ಸಮಾಧಾನಕರ ಸ್ಥಾನ ಪಡೆದರು. ವಿಜೇತರಿಗೆ ನಗದು, ಪ್ರಶಸ್ತಿ ಪತ್ರ ಹಾಗೂ ಪುಸ್ತಕಗಳನ್ನು ನೀಡಲಾಯಿತು. 

ಸ್ಪರ್ಧೆಯಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು 19 ತಂಡಗಳಲ್ಲಿ ಪಾಲ್ಗೊಂಡಿದ್ದರು. 15 ಅಂಕಗಳ ಲಿಖಿತ ಸ್ಪರ್ಧೆ ನಡೆಸಿ ಅಂತಿಮವಾಗಿ ಹೆಚ್ಚು ಅಂಕಗಳನ್ನು ಪಡೆದ 5 ತಂಡಗಳನ್ನು ಮೌಖಿಕ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು. ದೃಶ್ಯ, ಶ್ರವಣ ಸುತ್ತುಗಳಲ್ಲಿ ವೈವಿಧ್ಯಮಯ ಪ್ರಶ್ನಾವಳಿಗಳು ಸ್ಪರ್ಧಾಳುಗಳಲ್ಲಿ ಕುತೂಹಲ, ಆಸಕ್ತಿ ಮೂಡಿಸಿದವು. ಸ್ಪರ್ಧಾ ಪರೀಕ್ಷೆಗಳಿಗೆ ನಮಗೆ ತುಂಬಾ ಸಹಾಯವಾಯಿತು ಎಂದು ಸ್ಪರ್ಧಾಳುಗಳು ತಮ್ಮ ಅನಿಸಿಕೆ ಹಂಚಿಕೊಂಡರು. ಶಂಕರ ಚಿಕ್ಕಳ್ಳಿ, ಕೆ.ಎಸ್. ಮರಳಿಹಳ್ಳಿ, ಎಂ..ಎಂ. ಮುಲ್ಲಾ ಹಾಗೂ ಪಾರ್ವತಿ ಪಾಟೀಲ ಗುರುಗಳು ನಿರ್ಣಾಯಕರಾಗಿ ಪಾಲ್ಗೊಂಡಿದ್ದರು. 

ಸುದ್ದಿ ಓದಿ