ಯರಗಟ್ಟಿ

ಪುರಾಣ ಪಾರಾಯಣ ಮಂಗಲ

ಪುರಾಣ ಪಾರಾಯಣ ಮಂಗಲ

ಯರಗಟ್ಟಿ 06: ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಪುರಾಣ ಪಾರಾಯಣ ಕಾರ್ಯಕ್ರಮ ಆಯೋಜಿಸಿದ್ದು ಕಳೆದ ಒಂಬತ್ತು ದಿನಗಳ ಕಾಲ ಸಿದ್ದಮನಿ ಅಗಸ್ತ್ಯ ಮಹರ್ಷಿ ಅವರಿಂದ  ಪ್ರವಚನ ನೆರವೇರಿಸಿದರು.

ನಂತರ ಕಾಳಿಕಾದೇವಿಗೆ ವಿಶೇಷ ಪುಷ್ಪಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು ಸುಮಂಗಲೆಯರು ಮತ್ತು ಮಕ್ಕಳು, ಹಣ್ಣು, ಕಾಯಿ, ತುಪ್ಪದ ದೀಪ ಹಚ್ಚುವ ಮೂಲಕ ನವರಾತ್ರಿ ಉತ್ಸವಕ್ಕೆ ಹಾಗೂ ಪುರಾಣ ಪಾರಾಯಣ ಕಾರ್ಯಕ್ರಮಕ್ಕೆ ಮಂಗಲ ಹೇಳಲಾಯಿತು.

ಅಶೋಕ ಜಕಾತಿ, ಮಹಾರುದ್ರಪ್ಪ ಕುಂಬಾರ, ಮಲ್ಲಿಕಾರ್ಜುನ  ಮುನೋಳ್ಳಿ, ವಿಠ್ಠಲ ತಡಸಲೂರ, ವಿ. ಎಂ. ಮರಡಿ, ಕೃಷ್ಣಾ ಕಂಬಾರ, ದೇವೆಂದ್ರ ಬಡಿಗೇರ, ಡಾ. ಕಾಶೀನಾಥ ಅಂಗಡಿ, ನಾಮದೇವಿ ಕಂಬಾರ, ಮುರಳಿ ಬಡಿಗೇರ, ಕಾಳಪ್ಪ ಕಂಬಾರ, ಶ್ರೀಕಾಂತ ಕಂಬಾರ, ಪರಮಾನಂದ ಕಂಬಾರ, ಶಿವರಾಮ ಪತ್ತಾರ ಸೇರಿದಂತೆ ವಿಶ್ವಕರ್ಮ ಸಮಾಜ ಬಾಂಧವರು ಪಟ್ಟಣ ಗುರು ಹಿರಿಯರು, ಮಹಿಳೆಯರು, ಮಕ್ಕಳು ಉಪಸ್ಥಿತರಿದ್ದರು 

ಸುದ್ದಿ ಓದಿ