ಪುಣಾ-ಬೆಂಗಳೂರು ರಸ್ತೆ ಅಗಲೀಕರಣದ ಕಾಮಗಾರಿ ಅಪೂರ್ಣ
ರಾಣೆಬೆನ್ನೂರ:25 ತಾಲೂಕಿನ ಕೋಡಿಯಾಲ ಗ್ರಾಮದ ವಾಲ್ಮಿಕಿ ವೃತ್ತದಿಂದ ತುಂಗಭದ್ರಾ ನದಿಯ ಸೇತುವೆವರೆಗೆ ಪುಣಾ-ಬೆಂಗಳೂರು ರಸ್ತೆಯ ಅಗಲೀಕರಣದ ಕಾಮಗಾರಿ ರಸ್ತೆಯ ಕಾರ್ಯ ಇನ್ನೂ ಅಪೂರ್ಣವಾಗಿ ಉಳಿದಿರುವುದು ಸಾರ್ವಜನಿಕರಗೆ ತುಂಬಾ ನೋವಿನ ಸಂಗತಿಯಾಗಿದೆ.
ರಸ್ತೆಯ ಇಕ್ಕೆಲಗಳ ಚರಂಡಿಗಳನ್ನು ಇನ್ನೂ ಸರಿಯಾಗಿ ಮುಚ್ಚದಿರುವದರಿಂದ ಯಾರಾದರೂ ಬಿದ್ದು ಪ್ರಾಣ ಹಾನಿಯಾಗುವ ಸಂಭವವಿದೆ. ಫೂಟ್ಪಾತ್ ಗಳಲ್ಲಿ ಮಣ್ಣು ತುಂಬದ್ದರಿಂದ ಓಡಾಡುವ ವಾಹನಗಳು ಸ್ವಲ್ಪ ಎಚ್ಚರ ತಪ್ಪಿದರೂ ರಸ್ತೆಯಿಂದ ಜಾರಿ ಗುಂಡಿಗೆ ಬೀಳುವ ಸ್ಥಿತಿ. ಆರು ತಿಂಗಳೆಗಳು ಕಳೆದರೂ ಅಧಿಕಾರಿಗಳು ಇತ್ತಕಡೆ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರ ಆಕ್ರೋಶಕ್ಕೆ ಆರಣವಾಗಿದೆ.
ಅಮೃತ ವರ್ಷಿಣಿ ವಿದ್ಯಾಲಯದ ಎದುರು ಭಾಗದ ಮುಚ್ಚದೇ ಇರುವ ಚರಂಡಿಗಳಿಂದಾಗಿ ಅನಾಹುತವೇನಾದರೂ ಸಂಭವಿಸಿದಲ್ಲಿ ಗ್ರಾಮ ಪಂಚಾಯತಿಯವರೇ ಜವಾಬ್ದಾರಿಯಾಗುತ್ತಾರೆ. ಅಮೃತ ವರ್ಷಿಣಿ ವಿದ್ಯಾಲಯದ ಹಿಂಬಾಗ ಊರಿನ ಎಲ್ಲ ಹೊಲಸು ಬಂದು ಸೇರುವ ಚರಂಡಿ ದುರ್ನಾತದಿಂದ ತುಂಬಿ ರೋಗ-ರುಜಿನಗಳ ತವರೂರಾಗಿದೆ. ಈಗಾಗಲೇ ಗ್ರಾಮಸ್ಥರು ಮತ್ತು ವಾಹನ ಚಾಲಕರು ಅನೇಕ ಬಾರಿ ಮನವಿ ಸಲ್ಲಿಸಿದರೂ ಸಂಭಂಧ ಪಟ್ಟ ಗ್ರಾಮ ಪಂಚಾಯಿತಿ ಸ್ಪಂದಿಸಿಲ್ಲ. ಈಗಲಾದರೂ ಸ್ಪಂದಿಸಬೇಕು ಎಂದು ಗ್ರಾಮಸ್ಥರ ಒತ್ತಾಸೆಯಾಗಿದೆ.