ಇಂಡಿ

ಸಾರ್ವಜನಿಕರು ಆಮ್ಆದ್ಮಿ ಪಕ್ಷವನ್ನು ಬೆಂಬಲಿಸಿ: ಸೋಲಾಪುರ್

ಸಾರ್ವಜನಿಕರು ಆಮ್ಆದ್ಮಿ ಪಕ್ಷವನ್ನು ಬೆಂಬಲಿಸಿ: ಸೋಲಾಪುರ್
ಪಟ್ಟಣದ ಸಿಂದಗಿ ರಸ್ತೆಯ ಶಾಂತೇಶ್ವರ ಮಂಗಲ ಕಾರ್ಯದಲ್ಲಿ ಆಮ್ಆದ್ಮಿ ಪಕ್ಷದ ವತಿಯಿಂದ ಹಮ್ಮಿಕೊಂಡ ಇಂಡಿ ವಿಧಾನಸಭಾ ಮತಕ್ಷ

ಇಂಡಿ: ಭ್ರಷ್ಟಾಚಾರ ಮುಕ್ತ ಸರ್ಕಾರ ನಿರ್ಮಾಣ ಆಮ್ ಆದ್ಮಿ ಪಕ್ಷದ ಗುರಿಯಾಗಿದೆ. ಹೀಗಾಗಿ ಸಾರ್ವಜನಿಕರು ಆಮ್ಆದ್ಮಿ ಪಕ್ಷವನ್ನು ಬೆಂಬಲಿಸಿ ಈ ಬಾರಿ ಚುನಾವಣೆಯಲ್ಲಿ ಆರಿಸಿ ತರಬೇಕು ಎಂದು ಆಮ್ಆದ್ಮಿ ಪಕ್ಷದ ವಿಜಯಪೂರ ಜಿಲ್ಲಾ ವೀಕ್ಷಕ ಭೋಗೇಶ್ ಸೋಲಾಪುರ್ ಹೇಳಿದರು.

ಭಾನುವಾರ ಪಟ್ಟಣದ ಸಿಂದಗಿ ರಸ್ತೆಯ ಶಾಂತೇಶ್ವರ ಮಂಗಲ ಕಾರ್ಯದಲ್ಲಿ ಆಮ್ಆದ್ಮಿ ಪಕ್ಷದ ವತಿಯಿಂದ ಹಮ್ಮಿಕೊಂಡ ಇಂಡಿ ವಿಧಾನಸಭಾ ಮತಕ್ಷೇತ್ರದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಆಮ್ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ರವರು ಮೊದಲಿಗೆ ದೆಹಲಿಯಲ್ಲಿ ಪಕ್ಷವನ್ನು ಗಟ್ಟಿಗೊಳಿಸಿ ದೆಹಲಿಯ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಿ ದೆಹಲಿ ಜನರಿಗೆ ಉಚಿತ ನೀರು, ವಿದ್ಯುತ್, ಶಿಕ್ಷಣ, ಆರೋಗ್ಯ ಸೇರಿದಂತೆ ಮಹಿಳೆಯರಿಗೆ ಸಾರಿಗೆ ವ್ಯವಸ್ಥೆ ಸಹ ಉಚಿತವಾಗಿ ನೀಡಿದ್ದಾರೆ. ಇದಲ್ಲದೆ ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಮೂಲಕ ದೆಹಲಿಯ ಜನರ ಮನ ಗೆದ್ದ ಪರಿಣಾಮ ಈಗ ಪಂಜಾಬ್ ನಲ್ಲಿಯೂ ಸಹ 117ರಲ್ಲಿ 92 ಅಭ್ಯಥರ್ಿಗಳು ಆಮ್ಆದ್ಮಿ ಪಕ್ಷದಿಂದ ಜಯಭೇರಿಯಾಗಿ ಪಂಜಾಬ್ನ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಅಲ್ಲಿಯೂ ಸಹ ದೆಹಲಿಯ ಮಾದರಿಯಲ್ಲಿ ಆಡಳಿನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕೇಜ್ರೀವಾಲ್ ಅವರ ಆಡಳಿತಕ್ಕೆ ಮನಸೋತ ದೇಶದ ಜನರು ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ಇಂಡಿ ವಿಧಾನಸಭಾ ಕ್ಷೇತ್ರದಿಂದಲೂ ಸಹ ಅಭ್ಯಥರ್ಿಯನ್ನು ಕಣಕ್ಕಿಳಿಸಲಿದ್ದು ಈಗಾಗಲೇ ತಾಲೂಕಿನ ಬಹುತೇಕ ಗ್ರಾಮಗಳಿಗೆ ಪಕ್ಷದ ಸೇವಾಕಾಂಕ್ಷಿಗಳು ಭೇಟಿ ನೀಡಿ ಪಕ್ಷದ ಪ್ರಚಾರ ನಡೆಸಿ, ದೆಹಲಿ ಸರಕಾರದ ಹಾಗೂ ಕೇಜ್ರೀವಾಲ್ ಅವರ ಆಡಳಿತ ವೈಖರಿಯ ಬಗ್ಗೆ ತಿಳಿಸುತ್ತಿದ್ದಾರೆ ಎಂದರು.

ರಾಜ್ಯದ 224 ಮತಕ್ಷೇತ್ರದಲ್ಲಿಯೂ ಸಹ ಆಮ್ಆದ್ಮಿ ಪಕ್ಷದ ಅಭ್ಯಥರ್ಿಗಳು ಕಣಕ್ಕಿಳಿಯಲಿದ್ದು, ಆಮ್ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.

ಸೇವಾಕಾಂಕ್ಷಿಗಳಾದ ಜಕ್ಕಪ್ಪ ಕುಂಬಾರ, ಡಾ. ಗೋಪಾಲ್ ಪಾಟೀಲ್, ಪಕ್ಷದ ಮುಖಂಡ ಶ್ರೀಮಂತ ಬಾರಿಕಾಯಿ, ರಾಜೇಶ್ವರಿ ಮೋರೆ, ಜಗದೀಶ್ ಕಲ್ಮನಿ, ಇನ್ನಿತರರು ಮಾತನಾಡಿದರು.

ಪೂರ್ವ ಸಿದ್ಧತಾ ಸಭೆಯಲ್ಲಿ ಎರಡು ನೂರಕ್ಕಿಂತ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು.

ಜನವರಿ 31 ರಂದು ಇಂಡಿ ನಗರದಲ್ಲಿ ಆಮ್ ಆದ್ಮಿ ಪಕ್ಷದ 500ಕ್ಕೂ ಹೆಚ್ಚು ಕಾರ್ಯಕರ್ತರಿಂದ ಬೈಕ್ ರ್ಯಾಲಿ ಸಹ ನಡೆಸಲಾಗುವುದೆಂದು ಸೇವಾಕಾಂಕ್ಷಿಗಳಾದ ಗೋಪಾಲ ಪಾಟೀಲ್ ಹಾಗೂ ಜಕ್ಕಪ್ಪ ಕುಂಬಾರ ತಿಳಿಸಿದರು.

ವೇದಿಕೆಯಲ್ಲಿ ಕಲ್ಲಪ್ಪ ಘಂಟಿ ಸೇರಿದಂತೆ ಪಕ್ಷದ ಮುಖಂಡರು ಇದ್ದರು.


ಸುದ್ದಿ ಓದಿ