ಕಂಪ್ಲಿ

ಮಕ್ಕಳಿಗೆ ಇಸ್ಕಾನ್ ಊಟ ಬರೆವವರೆಗೂ ತಾತ್ಕಾಲಿಕ ಬಿಸಿಊಟ

ಮಕ್ಕಳಿಗೆ ಇಸ್ಕಾನ್ ಊಟ ಬರೆವವರೆಗೂ ತಾತ್ಕಾಲಿಕ ಬಿಸಿಊಟ


  ಮಕ್ಕಳಿಗೆ ಇಸ್ಕಾನ್ ಊಟ ಬರೆವವರೆಗೂ ತಾತ್ಕಾಲಿಕ ಬಿಸಿಊಟ  

ಕಂಪ್ಲಿ 20: ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಸರ್ಕಾರಿ ಹಿರಿಯ ಮತ್ತು ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಹಲ್ಲಿ ಬಿದ್ದಿದ್ದ ಬಿಸಿಊಟದ ಘಟನೆಗೆ ಸಂಬಂಧ ಪೋಷಕರ ಸಮಾಲೋಚನಾ ಸಭೆ ಬುಧವಾರ ಜರುಗಿತು. ಜಿಪಂಯ ಶಿಕ್ಷಣಾಧಿಕಾರಿ ಡಿ.ಕಸ್ತೂರಿ ಮಾತನಾಡಿ, ನ.12ರಂದು ಮೆಟ್ರಿ ಸರ್ಕಾರಿ ಶಾಲೆಯಲ್ಲಿ ಜರುಗಿದ ಬಿಸಿಊಟದಲ್ಲಿ ಹಲ್ಲಿ ಬಿದ್ದ ಪರಿಣಾಮ ಮಕ್ಕಳನ್ನು ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿದ್ರು. ಮತ್ತು 3 ಮಕ್ಕಳನ್ನು ಬಳ್ಳಾರಿ ವಿಮ್ಸ್‌ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಎಲ್ಲಾ ಮಕ್ಕಳು ಆರೋಗ್ಯದಿಂದ ಇದ್ದಾರೆ. ಆದರೆ, ಇಲ್ಲಿನ ಘಟನೆಗೆ ಸಂಬಂಧಿಸಿದಂತೆ ಪೋಷಕರು ಇಲ್ಲಿನ ಬಿಸಿಊಟ ನಿಲ್ಲಿಸಿ, ಇಸ್ಕಾನ್ ಊಟ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ. ಸರ್ಕಾರದ ಬಿಸಿಊಟವನ್ನು ನಿಲ್ಲಿಸಬಾರದು. ಇದಕ್ಕೊಂದು ಪರಿಹಾರ ಕಂಡುಕೊಳ್ಳುವ ಬಗ್ಗೆ ತಿಳಿಸಿ, ಇಸ್ಕಾನ್ ಊಟ ಬರುವವರೆಗೂ ತಾತ್ಕಾಲಿಕವಾಗಿ ಮಕ್ಕಳಿಗೆ ಬಿಸಿಊಟ ಮುಂದುವರಿಸಲು ಪೋಷಕರ ಒಪ್ಪಿಗೆ ಪಡೆಯಲಾಗಿದೆ. ಇಲ್ಲಿನ ಅಡುಗೆದಾರರನ್ನು ತೆಗೆದುಹಾಕಿ, ಬೇರೆಯವರನ್ನು ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದು, ಎಸ್‌ಡಿಎಂಸಿ ಸಭೆಯಲ್ಲಿ ಪೋಷಕರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಅನುಮೋದನೆ ಪಡೆದು, ಕಳುಹಿಸಿಕೊಟ್ಟರೆ, ಅವರನ್ನು ತೆಗೆದು ಹಾಕಿ, ಬದಲಾವಣೆ ಮಾಡಲಾಗುವುದು. ಶಿಕ್ಷಕರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕೆಂದು ತಿಳಿಸಿದರು. ನಂತರ ಸಿಆರ್‌ಪಿ ಹೆಚ್‌.ದೊಡ್ಡಬಸಪ್ಪ ಮಾತನಾಡಿ, ಇಲ್ಲಿ ನಡೆದ ಪೋಷಕರ ಸಮಾಲೋಚನಾ ಸಭೆಯಲ್ಲಿ ಪೋಷಕರನ್ನು ಮನವೊಲಿಸಿ, ತಾತ್ಕಾಲಿಕವಾಗಿ ಮಕ್ಕಳಿಗೆ ಮಧ್ಯಾಹ್ನದ ಆಹಾರ ನೀಡಲು ನಿರ್ಧರಿಸಲಾಗಿದೆ. ಮತ್ತು ಈಗಿನ ಅಡುಗೆದಾರರನ್ನು ಕೈಬಿಟ್ಟು, ಬೇರೆ ಅಡುಗೆದಾರರ ಮೂಲಕ ಗುಣಮಟ್ಟದ ಬಿಸಿಊಟ ಕಲ್ಪಿಸಲಾಗುವುದು. ಇಸ್ಕಾನ್ ಊಟ ಬರುವವೆಗೂ ಬಿಸಿಊಟ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸಕೋಟೆ ಜಗದೀಶ ಮಾತನಾಡಿ, ಇಲ್ಲಿನ ಶಾಲೆಯಲ್ಲಿ ಎರಡನೇ ಬಾರಿಗೆ ಹಲ್ಲಿ ಬಿದ್ದ ಹಿನ್ನಲೆ ವಿಷಪೂರಿತ ಆಹಾರದಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಆದ್ದರಿಂದ ಮಕ್ಕಳಿಗೆ ಪೋಷಕರು ಮನೆಯಿಂದಲೇ ಊಟ ಕಳುಹಿಸುತ್ತಿದ್ದಾರೆ. ಶಾಲೆಯ ಅಡುಗೆ ಕೋಣೆಯಲ್ಲಿ ಸ್ವಚ್ಚತೆ ಇಲ್ಲ. ಅಡುಗೆ ಮಾಡುವ ಪಾತ್ರೆಗಳು ಸಹ ಅಸ್ವಚ್ಚತೆಯಿಂದ ಕೂಡಿರುತ್ತದೆ. ಆದ್ದರಿಂದ ಕೂಡಲೇ ಅಡುಗೆದಾರರನ್ನು ಬದಲಾಯಿಸಬೇಕು. ಇಸ್ಕಾನ್ ಊಟ ಬಂದರೆ, ಮಕ್ಕಳಿಗೆ ಅನುಕೂಲವಾಗುತ್ತದೆ. ಆದ್ದರಿಂದ ಇಸ್ಕಾರ್ ಊಟ ಬರುವವರೆಗೂ ಗುಣಮಟ್ಟದ ಬಿಸಿಊಟ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಜಡೆಪ್ಪ, ದೊಡ್ಡಪ್ಪ, ಎಸ್ಡಿಎಂಸಿ ಸದಸ್ಯರಾದ ನಾಗೇಂದ್ರ, ಸ್ವಾಮಿ, ಹೆಚ್‌.ಉಚ್ಚಪ್ಪ, ಬಿಸಿಊಟದ ಸಹಾಯಕ ನಿರ್ದೇಶಕ ಶಿವನನಾಯಕ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಮುಖ್ಯಗುರುಗಳಾದ ವಿ.ಆರ್‌.ಮೂರ್ತಿ, ಸೋಮಶೇಖರ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ