ರಾಣೆಬೆನ್ನೂರ

ಗದಗ-ಹೊನ್ನಾಳಿ ರಸ್ತೆಗೆ ಕೆಳಸೇತುವೆ ಇಲ್ಲದೆ 150 ಪೂಟ್ ರಿಂಗ್‌ರೋಡ ಮಾಡಲು ಪ್ರತಿಭಟನಾಕಾರರ ಒತ್ತಾಯ

ಗದಗ-ಹೊನ್ನಾಳಿ ರಸ್ತೆಗೆ ಕೆಳಸೇತುವೆ ಇಲ್ಲದೆ 150 ಪೂಟ್ ರಿಂಗ್‌ರೋಡ ಮಾಡಲು ಪ್ರತಿಭಟನಾಕಾರರ ಒತ್ತಾಯ

ಗದಗ-ಹೊನ್ನಾಳಿ ರಸ್ತೆಗೆ ಕೆಳಸೇತುವೆ ಇಲ್ಲದೆ 150 ಪೂಟ್ ರಿಂಗ್‌ರೋಡ ಮಾಡಲು ಪ್ರತಿಭಟನಾಕಾರರ ಒತ್ತಾಯ 

ರಾಣೇಬೆನ್ನೂರ 03: ರಾಣೇಬೆನ್ನೂರಿನ ಹೊರವಲಯದಲ್ಲಿ ಕೂನಬೇವು ರಸ್ತೆಗೆ ಅಡ್ಡಲಾಗಿ ಹಾದುಹೋಗುತ್ತಿರುವ ಗದಗ-ಹೊನ್ನಾಳಿ ರಾಷ್ಟ್ರೀಯ ಹೆದ್ದಾರಿ ‘57’ ರ ಕೂನಬೇವು ರಸ್ತೆಯನ್ನು ದಾಟಿಹೋಗುವ ಸ್ಥಳದಲ್ಲಿ ಸಾರ್ವಜನಿಕರು ಮತ್ತು ಹೋರಾಟಗಾರರ ಬೇಡಿಕೆಯಂತೆ ರಸ್ತೆ ನಿರ್ಮಾಣವಾಗುತ್ತಿಲ್ಲ. ವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿದರೆ ರಸ್ತೆ ಅಪಘಾತಗಳಾಗುವುದಿಲ್ಲ. ಅದನ್ನು ಬಿಟ್ಟು ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿದರೆ ರಸ್ತೆ ಕ್ರಾಸಿಂಗ್ ಹತ್ತಿರ ದಿನನಿತ್ಯ ರಸ್ತೆ ಅಪಘಾತಗಳಾಗಿ ಅನೇಕ ಸಾವು ನೋವುಗಳಾಗುತ್ತವೆ. ಸಾರ್ವಜನಿಕರ ವಾಹನಗಳ ಸುಗಮ ಸಂಚಾರಕ್ಕೆ ಈ ಸ್ಥಳದಲ್ಲಿ ಸುಸಜ್ಜಿತ ಅಂಡರ್‌ಬ್ರಿಡ್ಜ್‌ ಆಗಬೇಕು. ಇಲ್ಲವೆ 150 ಪೂಟು ರಿಂಗ್ ರಸ್ತೆ ನಿರ್ಮಿಸಬೇಕೆಂದು ಒತ್ತಾಯಿಸಿ ಈ ಸ್ಥಳದಲ್ಲಿ ಕೂನಬೇವು ಗ್ರಾಮಸ್ಥರು ಸೇರಿದಂತೆ ರೇಲ್ವೆ ಮೇಲ್ಸೇತುವೆ ನಿರ್ಮಾಣ ಹೋರಾಟ ಸಮಿತಿಯವರು 3-4 ಬಾರಿ ಪ್ರತಿಭಟನೆ ಮಾಡಿ ಕಳೆದ ‘2’ ತಿಂಗಳಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು.  

      ಮೊನ್ನೆ ದಿವಸ ಶಾಸಕರಾದ ಬಸವರಾಜ ಶಿವಣ್ಣನವರ ಮಧ್ಯಸ್ಥಿಕೆಯಲ್ಲಿ ಹೋರಾಟಗಾರರು, ಗ್ರಾಮಸ್ಥರು, ಗುತ್ತಿಗೆದಾರರು, ತಹಶೀಲ್ದಾರರು, ಅಧಿಕಾರಿಗಳು ಮಧ್ಯ ಸುದೀರ್ಘ ಚರ್ಚೆ ನಡೆದು ಈ ಮೇಲಿನ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಅಂತಿಮವಾಗಿ ಶಾಸಕರಾದ ಬಸವರಾಜ ಶಿವಣ್ಣನವರ ತೀರ್ಮಾನಕ್ಕೆ ನಾವು ಬದ್ಧ ಎಂದು ಹೋರಾಟಗಾರರು ಅನುಮತಿ ನೀಡಿದ ಮೇಲೆ ಶಾಸಕರು ಅಂಡರ್‌ಬ್ರಿಡ್ಜ್‌ ಅಥವಾ ರಿಂಗ್ ರಸ್ತೆಗೆ ಎಸ್ಟಿಮೇಟ್ ಮಾಡಿಸಿ ಯಾವುದಕ್ಕೆ ತಾಂತ್ರಿಕ ಇಲಾಖೆ ಮಂಜೂರು ಕೊಡುತ್ತದೆಯೋ ಅದನ್ನು ಮಾಡೋಣ ಅಲ್ಲಿಯವರೆಗೂ ಈ ಸ್ಥಳದಲ್ಲಿ ಮಾತ್ರ ಕಾಮಗಾರಿ ಸ್ಥಗಿತಗೊಳಿಸಿ ಮುಂದೆ ಕಾಮಗಾರಿ ಮುಂದುವರಿಸಿರಿ ಎಂದು ಗುತ್ತೆಗೆ ಪಡೆದ ಕಂಪನಿ ಮುಖ್ಯಸ್ಥರಿಗೆ ಸೂಚಿಸಿದರು. ಅದಕ್ಕೆ ಅಧಿಕಾರಿಗಳು ತಾಂತ್ರಿಕ ವರ್ಗದವರು ಸಮ್ಮತಿ ಸೂಚಿಸಿದರು.  

     ಈ ಸಂದರ್ಭದಲ್ಲಿ ರೇಲ್ವೆ ಮೇಲ್ಸೇತುವೆ ನಿರ್ಮಾಣ ಹೋರಾಟ ಸಮಿತಿಯ ಅಧ್ಯಕ್ಷರಾದ ರವೀಂದ್ರಗೌಡ ಎಫ್‌. ಪಾಟೀಲ, ತಹಶೀಲ್ದಾರ್ ಹೆಚ್‌.ಕೆ. ಭಗವಾನ ಎಪಿಎಂಸಿ ಮಾಜಿ ಅಧ್ಯಕ್ಷರಾದ ಏಕನಾಥ ಬಾನವಳ್ಳಿ, ಬಸವರಾಜ ಸವಣೂರ, ಮೈಲಾರ​‍್ಪ ಮಾಳಗುಡ್ಡಪ್ಪನವರ, ಮಾಲತೇಶ ಮಾಸಣಗಿ, ಮಲ್ಲಿಕಾರ್ಜುನ ಗಾಣಗೇರ, ಶಿವಣ್ಣ ಬಡಪ್ಪನವರ, ಮೈಲಾರ​‍್ಪ ನೆಗಳೂರು, ಧರ್ಮಣ್ಣ ಲಮಾಣಿ, ಗುತ್ತಿಗೆ ಪಡೆದ ‘ಸದ್ಭವ’ ಕಂಪನಿಯ ಇಂಜಿನಿಯರ್ ದೇವರಾಜ, ಕೆಶಿಪ್ ಅಧಿಕಾರಿಗಳು, ನೂರಾರು ಮಂದಿ ಕೂನಬೇವು ಗ್ರಾಮಸ್ಥರು, ಕಂದಾಯ ಮತ್ತು ಪೊಲೀಸ್ ಇಲಾಖೆಯವರು ಭಾಗವಹಿಸಿದ್ದರು. 


ಸುದ್ದಿ ಓದಿ