ಹಾಲಿನ ಪ್ರೋತ್ಸಾಹಧನದಲ್ಲಿಯ ಕಡಿತದ ನಿರ್ಧಾರವನ್ನು ಖಂಡಿಸಿ ಪ್ರತಿಭಟನೆ
ಲೋಕದರ್ಶನ ವರದಿ
ಶಿಗ್ಗಾವಿ 05: ಪಟ್ಟಣದ ಕಿತ್ತೂರಾಣಿ ಚನ್ನಮ್ಮ ಸರ್ಕಲ್ನಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಮಾಡಿರುವ ವಿದ್ಯುತ್ ದರದಲ್ಲಿನ ಹೆಚ್ಚಳ ಮತ್ತು ಹಾಲಿನ ಪ್ರೋತ್ಸಾಹಧನದಲ್ಲಿಯ ಕಡಿತದ ನಿಧರ್ಾರವನ್ನು ಖಂಡಿಸಿ ತಾಲೂಕಾ ಬಿಜೆಪಿ ಮಂಡಳದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ತಾಲೂಕಾ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ಕಾಂಗ್ರೆಸ್ ಸರಕಾರ ರಾಜ್ಯದ ಮತದಾರರಿಗೆ ಸುಳ್ಳು ಬರವಸೆಗಳನ್ನು ಕೊಟ್ಟು ಅನೇಕ ಶರತ್ತುಗಳ ಮೂಲಕ ಐದು ಗ್ಯಾರಂಟಿಗಳನ್ನು ನೀಡಿ, ಮೋಸ ಮಾಡುವ ಮೂಲಕ ಎಲ್ಲರಿಗೂ ಕಿರಿಕಿರಿ ಮಾಡುತ್ತಿದೆ.
ಪ್ರತಿಯೊಬ್ಬರಿಗೂ ವಿದ್ಯುತ್ ಪ್ರೀ ಎಂದು ಹೇಳಿದ್ದ ಕಾಂಗ್ರೇಸ್, ಇಂಧನ ಹೊರೆ ಮೊತ್ತಾ ಎಂದು ಈಗಾ ಪ್ರತಿಯೊಂದು ಯೂನಿಟ್ಗೂ 1 ರೂಪಾಯಿ 39ಪೈಸೆ ಹೆಚ್ಚಿಸಿದೆ, ಮತ್ತು ನಿಗದಿತ ಮೊತ್ತದಲ್ಲಿ ರೂ 10 ಹೆಚ್ಚಿಸಿ ಎಲ್ಲರಿಗೂ ಪಂಗನಾಮ ಹಾಕುವ ಕೆಲಸ ಮಾಡಿದೆ, ಅಲ್ಲದೆ ರೈತರು ಉತ್ಪಾದಿಸುತ್ತಿರುವ ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಕಡಿತ ಮಾಡುವ ಮೂಲಕ ಹೈನುಗಾರಿಕೆ ನಂಬಿ ಜೀವನ ಮಾಡುತ್ತಿದ್ದ ರೈತರಿಗೆ ಅನ್ಯಾಯ ಮಾಡಿದೆ ಅಲ್ಲದೇ ಮನೆಯೋಡತಿಗೆ ಎರಡು ಸಾವಿರ ನೀಡುತ್ತೇವೆ ಎಂದು ಹೇಳಿದ ಸರಕಾರ ಇಂದು ಮನೆ ಒಡೆಯುವ ಕೆಲಸ ಮಾಡುತ್ತಿದೆ, ಪದವೀಧರರಿಗೆ 3 ಸಾವಿರ ಹಣವನ್ನು ಕೊಡುತ್ತೇವೆ ಎಂದು ಹೇಳಿದ ಕಾಂಗ್ರೇಸ್ ಎಲ್ಲಾ ಪಧವೀದರರಿಂದ ಮತ ಹಾಕಿಸಿಕೊಂಡು ಈಗಾ ಕಂಡೀಷನ್ ಹಾಕಿ ಮೋಸ ಮಾಡುತ್ತಿದೆ. ಎಂದರು.
ಪ್ರತಿಭಟನೆಯಲ್ಲಿ ಶಿವಪ್ರಸಾದ ಸುರಗೀಮಠ, ಹನುಮರೆಡ್ಡಿ ನಡುವಿನಮನಿ, ಬಸಪ್ಪ ವಡ್ಡರ, ಕರಿಯಪ್ಪ ಕಟ್ಟಿಮನಿ, ನರಹರಿ ಕಟ್ಟಿ, ಬಸನಗೌಡ್ರ ಮೇಲಿನಮನಿ, ಮಲ್ಲೇಶಪ್ಪಾ ಹರಿಜನ, ಮಂಜುನಾಥ ಬ್ಯಾಹಟ್ಟಿ, ನೀಲವ್ವ ಕಾಲವಾಡ, ರೇಣುಕನಗೌಡ ಪಾಟೀಲ, ಸಂಜನಾ ರಾಯ್ಕರ್, ಕಾಶಿನಾಥ ಕಳ್ಳಿಮನಿ, ಪ್ರಶಾಂತ ಬಡ್ಡಿ, ನಿಂಗನಗೌಡ ಪಾಟೀಲ, ಮುನ್ನಾ ಬಿಸ್ತಿ, ಸಚಿನ ಮಡಿವಾಳರ, ಕಿರಣ ಬಡ್ಡಿ, ಮಲ್ಲಿಕಾಜರ್ುನ ಹಡಪದ, ರವಿ ಬಿಸೆಟ್ಟಿ, ಚೇತನ ಕಲಾಲ ಸೇರಿದಂತೆ ತಾಲೂಕಿನ ಬಿಜೆಪಿಯ ಮುಖಂಡರುಗಳು, ಪದಾಧಿಕಾರಿಗಳು ಪಾಲ್ಗೊಂಡಿದ್ದರು