ಸಮಗ್ರ ನೀರಾವರಿ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರಿಂದ ಸತ್ಯಾಗ್ರಹ
ಇಂಡಿ: ತಾಲೂಕು ಸಮಗ್ರ ನೀರಾವರಿ ಆಗ್ರಹಿಸಿ ಜೆ.ಡಿ.ಎಸ್ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧ ಎದುರು ನಡೆದ ಧರಣಿ ಸತ್ಯಾಗ್ರಹ ಬುಧವಾರ 7 ನೇ ದಿನದಲ್ಲಿ ಮುಂದುವರೆದಿದೆ.
ಮಿನಿ ವಿಧಾನಸೌಧದ ಧರಣಿ ಸ್ಥಳದಿಂದ ಅಪಾರ ಜನಸಂಖ್ಯೆಯಲ್ಲಿ ಮೆರವಣೆಯಲ್ಲಿ ಪಾದಯಾತ್ರೆಯ ಮೂಲಕ ಕಾರ್ಯಕರ್ತರು ಬಸವೇಶ್ವರ ವೃತ್ತ ತಲುಪಿ ಅಲ್ಲಿ ಒಂದು ಗಂಟೆ ರಾಸ್ತಾರೋಕೊ ನಡೆಸಿದರು.
ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಬಸ್, ವಾಹನ ಮತ್ತು ದ್ವಿ ಚಕ್ರ ಸಂಚಾರ ಸ್ಥಗಿತಗೊಂಡಿದ್ದರಿಂದ ಬೇರೆದಾರಿಯಿಂದ ಹೋಗಲು ಪರದಾಡಬೇಕಾಯಿತು.
ಜೆ.ಡಿ.ಎಸ್ ಮುಖಂಡ ಬಿ.ಡಿ.ಪಾಟೀಲ ಮಾತನಾಡಿ ನೀರಾವರಿ ಯೋಜನೆಗಳಿಗೆ ಅನುದಾನ ನೀಡದೆ ನೆನೆಗುದಿಗೆ ಬಿದ್ದಿವೆ. ಸರಕಾರದ ವಿಳಂಬ, ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಕುಂಠಿತವಾಗಿರುವ ಯೋಜನೆಗಳು, ಕಾಲಮಿತಿ ಮೀರಿವೆ. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂ ಸ್ವಾಧಿನಕ್ಕೆ ಅನುದಾನ ನೀಡದ ರೈತರಿಗೆ ಪರಿಹಾರ ಸಿಕ್ಕಿಲ್ಲ. ತಾಲೂಕಿನಲ್ಲಿ ಜಾರಿಗೆಯಾಗಿರುವ ನೀರಾವರಿ ಯೋಜನೆಗಳನ್ನು ತುರ್ತಾಗಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದರು.
ಜಿಲ್ಲಾ ಜೆ.ಡಿ.ಎಸ್ ಉಪಾಧ್ಯಕ್ಷ ಬಸನಗೌಡ ಮಾಡಗಿ, ತಡವಲಗಾ ಗ್ರಾಮದ ಪೀರಪ್ಪ ಹೊಟಗರ, ಡಾ. ಪದ್ಮರಾಜ ಪೂಜಾರಿ, ಅಲ್ಲು ದಡೆದ, ಮಹಿಬೂಬ ನದಾಫ, ಜಟ್ಟೆಪ್ಪ ಸುರಪುರ, ಹಂಜಗಿ ಗ್ರಾಮದ ಶ್ರೀಶೈಲ ಪಾಯಕರ, ಸಿದ್ದಪ್ಪ ಕೊಟ್ಟಲಗಿ, ಹಣಮಂತ ಹಿರೇಕುರಬರ, ರಜಿಯಾ ಪಾಂಡು, ಇಸ್ಮಾಯಿಲ್ ಕುಣಬಿ, ತಮ್ಮನಗೌಡ ಬಿರಾದಾರ, ಹೊರ್ತಿಯ ಶರಣಗೌಡ ಪಾಟೀಲ, ಶ್ರೀಮಂತ ಪೂಜಾರಿ, ರೂಗಿ ಗ್ರಾಮದ ಸಿಂಧು ಪೂಜಾರಿ, ವಿಠ್ಠಲ ಹಳ್ಳಿ, ಗ್ರಾ.ಪಂ ಸದಸ್ಯ ಮಾಳಪ್ಪ ಹಲಸಂಗಿ, ಅಂಜುಟಗಿಯ ಬಸವರಾಜ ಕವಡಿ, ಸಂಜು ಅಡವಿ, ಶರಣಪ್ಪ ಡೆಂಗಿ, ಸಾಗರ ಹಿರೇಮಠ, ಬಸು ಪೂಜಾರಿ, ವಿಠೋಬಾ ಹೊನಗೊಂಡ, ಮರೆಪ್ಪ ಗಿರಣಿವಡ್ಡರ, ಮಹಿಬೂಬ ಬೇವನೂರ ಮತ್ತಿತರಿದ್ದರು. ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.