ಇಂಡಿ

ಪಾನ್ ಶಾಪಗಳಲ್ಲಿ ಮದ್ಯ ಮಾರಾಟ ವಿರೋಧಿಸಿ ಪ್ರತಿಭಟನೆ

ಪಾನ್ ಶಾಪಗಳಲ್ಲಿ ಮದ್ಯ ಮಾರಾಟ ವಿರೋಧಿಸಿ ಪ್ರತಿಭಟನೆ
ಜಯ ಕರ್ನಾಟಕ ಸಂಘಟನೆಯಿಂದ ಮದ್ಯ ಮಾರಾಟ ವಿರೋಧಿಸಿ ತಾಲೂಕು ಸೌಧ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ ನಾಗಯ್ಯ ಹಿರೇಮಠರ

ಇಂಡಿ: ತಾಲೂಕಿನ ಹಂಜಗಿ, ನಿಂಬಾಳ ಕೆಡಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕಿರಾಣಿ ಅಂಗಡಿ ಮತ್ತು ಪಾನ್ ಶಾಪಗಳಲ್ಲಿ ಮದ್ಯ ಮಾರಾಟ ವಿರೋಧಿಸಿ ಜಯ ಕರ್ನಾಟಕ  ಸಂಘಟನೆಗಳು ಮಂಗಳವಾರ ಪ್ರತಿಭಟನೆ ನಡೆಸಿದರು. 

ಜಯ ಕರ್ನಾಟಕ  ಜಿಲ್ಲಾ ಅಧ್ಯಕ್ಷ ಮಹೇಶ ನಾಯಕ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೆ ಅವರ ಸಿಬ್ಬಂದಿಗಳು ಮೊದಲೇ ದಾಳಿ ಮಾಡುವ ಸೂಚನೆ ನೀಡಿ ಹೋಗುತ್ತಾರೆ. ಹಳ್ಳಿಗಳ ಕಿರಾಣಿ ಹಾಗೂ ಪಾನ್ಶಾಪ್ಗಳಲ್ಲಿಯೂ ಅಕ್ರಮ ಮದ್ಯ ಸಿಗುತ್ತಿದೆ. ಇದರಿಂದ ಸಾವಿರಾರು ಜನ ಮಕ್ಕಳು ಮಹಿಳೆಯರು ಬೀದಿಪಾಲಾಗಿದ್ದಾರೆ ಎಂದು ಅಬಕಾರಿ ಅಧಿಕಾರಿಗಳ ವಿರುಧ್ಧ ದೂರಿದರು.

ಪ್ರತಿಭಟನೆಯಲ್ಲಿ ಖಾಜು ಪಾಂಡು, ರಿಯಾಜ ಪಾಂಡು, ಪರಸಪ್ಪ ದೊಡಮನಿ, ಸಂತೋಷ ಕಪನಿಂಬರಗಿ, ವಿಜಯ ಮಾದರ, ಸಚೀನ ಹೊಸಮನಿ, ಆಕಾಶ ನಾವಿ, ಬೌರಮ್ಮ ಹರಿಜನ, ಫಾತಿಮಾ ಸಯ್ಯದ, ಶಾಲಿಮಾ ಕರೋಷೆ ಮತ್ತಿತರಿದ್ದರು. 

ತಹಸೀಲ್ದಾರ ನಾಗಯ್ಯ ಹಿರೇಮಠರವರಿಗೆ ಮನವಿ ಸಲ್ಲಿಸಿದರು. ಅದಲ್ಲದೆ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದರು. 

ಇದಕ್ಕೆ  ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಯಾವ ಹಳ್ಳಿ ಮತ್ತು ಯಾರು ಮದ್ಯ ಮಾರಾಟ ಮಾಡುತ್ತಿದ್ದಾರೆ ಲಿಖಿತವಾಗಿ ನನಗೆ ಮಾಹಿತಿ ನೀಡಿ ಎಂದಾಗ ಸಂಘಟಕರು ಹಂಜಗಿ ಗ್ರಾಮದ ಬಗ್ಗೆ ಲಿಖಿತವಾಗಿ ತಿಳಿಸಿದರು. ಕೂಡಲೆ ಸಂಬಂಧಿಸಿದ ಅಬಕಾರಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗೆ ದೂರವಾಣಿ ಕರೆ ಮಾಡಿ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು.

 

 

ಸುದ್ದಿ ಓದಿ