ಕೆ ಎಲ್ ಪಾಟೀಲರಿಗೆ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ
ಕೆ ಎಲ್ ಪಾಟೀಲರಿಗೆ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ
ಧಾರವಾಡ 21 : ತಮಗೆ ಒಲಿದು ಬಂದಿದ್ದ ನ್ಯಾಯಾಧೀಶ ಹುದ್ದೆ ಬಿಟ್ಟು ಕೊಟ್ಟು ರಡ್ಡಿ ಬ್ಯಾಂಕ ಮೂಲಕ ಸಹಕಾರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಇತ್ತೀಚಿಗೆ ಶತಮಾನೋತ್ಸವ ಸಂಭ್ರಮ ಆಚರಿಸಿಕೊಂಡ ರಡ್ಡಿ ಸಹಕಾರ ಬ್ಯಾಂಕಿನ ಅಧ್ಯಕ್ಷರಾಗಿ 1998 ರಿಂದ ಸತತ 26 ವರ್ಷಗಳಿಂದ ಅವಿರತವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೂರು ದಶಕಗಳಿಂದ ಸಹಕಾರಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಇಲ್ಲಿನ ಪ್ರತಿಷ್ಠಿತರಡ್ಡಿ ಸಹಕಾರ ಬ್ಯಾಂಕಿನಅಧ್ಯಕ್ಷರಾದ ಕೆ ಎಲ್ ಪಾಟೀಲರಿಗೆರಾಜ್ಯ ಸರ್ಕಾರದ ಸಹಕಾರಕ್ಷೇತ್ರದ ಪ್ರತಿಷ್ಠಿತ ‘ಸಹಕಾರರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ. ಕೆಂಚನಗೌಡ ಲಿಂಗನಗೌಡ ಪಾಟೀಲ ಅವರು 1991 ರಿಂದರಡ್ಡಿ ಸಹಕಾರ ಬ್ಯಾಂಕಿನ ನಿರ್ದೇಶಕರಾಗಿ ಹಾಗೂ 1998 ರಿಂದ ಬ್ಯಾಂಕಿನ ಅಧ್ಯಕ್ಷರಾಗಿ ಸತತ 26 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಹೊಸ ದೆಹಲಿಯ ಕೋ-ಆಫ್ರೇಟಿವ್ ಬ್ಯಾಂಕ ಆಫ್ ಇಂಡಿಯಾ(ಅಓಃಋ)ದ ನಿರ್ದೇಶಕರಾಗಿದ್ದಾರೆ ಮತ್ತು ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ದಾರೂಢ ಟ್ರಸ್ಟ ಕಮೀಟಿಯ ಟ್ರಸ್ಟಿಯಾಗಿಯೂ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.ಸಹಕಾರ ಕ್ಷೇತ್ರದ ದಿಗ್ಗಜರ ಕುಟುಂಬದಿಂದ ಬಂದಿರುವ ಕೆ ಎಲ್ ಪಾಟೀಲರ ಮೇಲೆ ಹಿರಿಯ ಸಹಕಾರಿಗಳಾದ ಆರ್ ವಾಯ್ ಹುಲಕೋಟಿ, ಸಹಕಾರರಂಗದ ಭೀಷ್ಮ ಕೆ ಎಚ್ ಪಾಟೀಲ ಹಾಗೂ ಕೆ ಎಸ್ ಪಾಟೀಲರ ಪ್ರಭಾವವಿದೆ.
1952 ನವೆಂಬರ್ 22 ರಂದು ಜನಿಸಿರುವ ಕೆ ಎಲ್ ಪಾಟೀಲರು ಬಿ.ಎ,ಎಲ್.ಎಲ್.ಬಿ ಪದವೀಧರರು, ಬೆಳಗಾವಿ, ಧಾರವಾಡದಲ್ಲಿ ಶಿಕ್ಷಣ ಪಡೆದುಧಾರವಾಡದಲ್ಲಿ ವಕೀಲ ವೃತ್ತಿ ಆರಂಭಿಸಿ ನೆಲೆ ನಿಂತರು. ದಕ್ಷ ಆಡಳಿತಕ್ಕೆ ಹೆಸರಾಗಿರುವ ಕೆ ಎಲ್ ಪಾಟೀಲರ ನೇತೃತ್ವದಲ್ಲಿರಡ್ಡಿ ಸಹಕಾರ ಬ್ಯಾಂಕು ಪಟ್ಟಣ ಸಹಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರತಿಷ್ಠಿತ ಬ್ಯಾಂಕೆಂದು ಗುರುತಿಸಿಕೊಂಡಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಕರ್ನಾಟಕ ಸರ್ಕಾರ ಕೊಡ ಮಾಡುವ ಸಹಕಾರರತ್ನ ಪ್ರಶಸ್ತಿಗೆ ಭಾಜನಾಗಿರುವ ರಡ್ಡಿ ಸಹಕಾರ ಬ್ಯಾಂಕಿನ ಅಧ್ಯಕ್ಷ ಹಾಗೂ ಖ್ಯಾತ ವಕೀಲರಾದ ಕೆ ಎಲ್ ಪಾಟೀಲರಿಗೆ ಹಿರಿಯ ಸಹಕಾರಿಗಳು, ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.