ಸಿರುಗುಪ್ಪ

ಅವಿರೋಧವಾಗಿ ಅಧ್ಯಕ್ಷೆ ಮಹಾಂಕಾಳಮ್ಮ ಆಯ್ಕೆ

ಅವಿರೋಧವಾಗಿ ಅಧ್ಯಕ್ಷೆ ಮಹಾಂಕಾಳಮ್ಮ ಆಯ್ಕೆ

ಸಿರುಗುಪ್ಪ 30: ತಾಲ್ಲೂಕು ಹಾಗಲೂರು ಹೊಸಳ್ಳಿ ಗ್ರಾಮ ಪಂಚಾಯತ್ 19 ಸದಸ್ಯರನ್ನು ಹೊಂದಿರುವ ಅಧ್ಯಕ್ಷೆ ಶಾಂತಮ್ಮ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಆರ್ ಮಹಾಂಕಾಳಮ್ಮ ಒಬ್ಬರೇ ನಾಮ ಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಅವರು ಘೋಷಿಸಿದರು. 

ಶಾಸಕ ಎಂ ಎಸ್ ಸೋಮಲಿಂಗಪ್ಪ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿಡಿಒ ರಮೇಶ್ ನಾಯಕ್, ಗ್ರಾಮ ಪಂಚಾಯತ್ ಸದಸ್ಯರು ಸಾಮಾಜಿಕ ಕಾರ್ಯಕರ್ತ ಸಾಕ್ಷರತಾ ಸದಸ್ಯ ಅಬ್ದುಲ್ ನಬಿ ಅವರು ನೂತನ ಅಧ್ಯಕ್ಷೆ ಆರ್ ಮಹಾಂಕಾಳಮ್ಮ ಅವರ ಯಶಸ್ಸಿಗೆ ದೊರೆತಿರುವ ಗೌರವಕ್ಕೆ ಅಭಿನಂದಿಸಿದ್ದಾರೆ  

ಸುದ್ದಿ ಓದಿ