ನಾಳೆ ಪೂರ್ವಭಾವಿ ಸಭೆ
ವಿಜಯಪುರ : ಫೆ.01ರಂದು ಮಡಿವಾಳ ಮಾಚಿದೇವರ ಜಯಂತಿಯೂ ಜಿಲ್ಲಾಡಳಿತ ಸಹಯೋಗದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಹಯೋಗದೊಂದಿಗೆ ಆಯೋಜಿಸಲಾಗುವುದು ಇದರ ನಿಮಿತ್ಯವಾಗಿ ಉತ್ತರ ಕರ್ನಾಟಕ ಮಡಿವಾಳರ ಸಂಘದಿಂದ ಜಲನಗರದ ಜೈ ಸಂತೋಷ ಮಾತಾ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆಯೂ ಜ.28ರಂದು ಮಧ್ಯಾಹ್ನ 3 ಘಂಟೆಗೆ ಹಮ್ಮಿಕೊಳ್ಳಲಾಗಿದೆ.
ಆದ ಕಾರಣ ಮಡಿವಾಳ ಸಮಾಜದ ಬಾಂಧವರು ಹಿರಿಯರು ಈ ಪೂರ್ವ ಭಾವಿ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಮೂಲ್ಯ ಸಲಹೆ ಮತ್ತು ಅಭಿಪ್ರಾಯಗಳನ್ನು ತಿಳಿಸಿ ಮಡಿವಾಳ ಮಾಚಿದೇವರ ಜಯಂತಿಯೂ ಅರ್ಥಪೂರ್ಣವಾಗಿ ಆಚರಿಸಲು ಎಲ್ಲರೂ ಮುಂದಾಗೋಣವೆಂದು ನಗರ ಘಟಕದ ಅಧ್ಯಕ್ಷ ಪ್ರಶಾಂತ ಅಗಸರ ಅವರು ಪ್ರಕಟಣೆಗೆ ತಿಳಿಸಿದ್ದಾರೆ