ಆಂಧ್ರ್ರದೇಶದ ರಾಯಚೋಟಿಗೆ ವೀರಭದ್ರ ಭಕ್ತರ ಪಾದಯಾತ್ರೆ
Pilgrimage of Veerabhadra devotees to Rayachoti in Andhra Pradesh
ಆಂಧ್ರ್ರದೇಶದ ರಾಯಚೋಟಿಗೆ ವೀರಭದ್ರ ಭಕ್ತರ ಪಾದಯಾತ್ರೆ
ಧಾರವಾಡ, ಬೆಳಗಾವಿ, ವಿಜಯಪೂರ ಹಾಗೂ ಶಿವಮೊಗ್ಗ ಜಿಲ್ಲೆಗಳ ವೀರಭದ್ರ ದೇವರ ಭಕ್ತರು ಭಾಗಿ ಧಾರವಾಡ 22: ತಾಲೂಕಿನ ಹೆಬ್ಬಳ್ಳಿ ಗ್ರಾಮದ ವೀರಭದ್ರ ದೇವರ ಪುರವಂತ ಸೇವಕ ಮಲ್ಲಿಕಾರ್ಜುನ ಬಳಿಗಾರ ಕಳೆದ 3 ವರ್ಷಗಳಿಂದ ಆಂಧ್ರ್ರದೇಶ ರಾಜ್ಯದ ರಾಯಚೋಟಿ ಕ್ಷೇತ್ರದ ವೀರಭದ್ರ ದೇವರ ದೇವಾಲಯದವರೆಗೆ ಪಾದಯಾತ್ರೆ ನಡೆಸುತ್ತಿದ್ದು, ಈ ಬಾರಿ ಇವರ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳ ಒಟ್ಟು 7 ಜನ ವೀರಭದ್ರ ಭಕ್ತರು ಪಾದಯಾತ್ರೆ ಕೈಕೊಂಡಿದ್ದಾರೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ಸಂಪಗಾಂವ ಗ್ರಾಮದ ಶಿವಪುತ್ರಯ್ಯ ಪೂಜಾರ 2ನೆಯ ಬಾರಿಗೆ ಪಾದಯಾತ್ರೆ ನಡೆಸುತ್ತಿದ್ದು, ಈ ಬಾರಿ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ಕಲ್ಲಯ್ಯ ಚಿಕ್ಕಮಠ, ಶಿವಮೊಗ್ಗ ಜಿಲ್ಲೆಯ ನೇರಲಗಿ ಗ್ರಾಮದ ಎನ್.ಪಿ. ಕೊಟ್ರ್ಪಗೌಡ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಚಂದ್ರಶೇಖರ ಹುನಗುಂದ, ಸುರೇಶ ಹುನಗುಂದ ಹಾಗೂ ರಮೇಶ ಮುಕರ್ತಿಹಾಳ ಈ ಪಾದಯಾತ್ರೆ ತಂಡ ಸೇರಿಕೊಂಡಿದ್ದಾರೆ. ಸುಮಾರು 650 ಕಿ.ಮೀ. ದೂರವನ್ನು ಈ ಪಾದಯಾತ್ರೆ ತಂಡ 15 ರಿಂದ 20 ದಿನಗಳಲ್ಲಿ ಕ್ರಮಿಸಲಿದೆ. “ಪ್ರಾತಃಕಾಲ ಮತ್ತು ಸಾಯಂಕಾಲ ಎಳೆ ಬಿಸಿಲಿನ ಸಮಯವನ್ನು ಕೇಂದ್ರೀಕರಿಸಿ ಶಿವನಾಮ ಮತ್ತು ವೀರಭದ್ರ ದೇವರ ಸಾನ್ನಿಧ್ಯದ ಸ್ಮರಣೆಯೊಂದಿಗೆ ತಮ್ಮ ಪಾದಯಾತ್ರೆ ಯಶಸ್ವಿಯಾಗಿ ನಡೆಯುತ್ತದೆ” ಎಂಬ ವಿಶ್ವಾಸವನ್ನು ಈ ತಂಡದ ನೇತೃತ್ವವಹಿಸಿರುವ ಹೆಬ್ಬಳ್ಳಿ ಗ್ರಾಮದ ಮಲ್ಲಿಕಾರ್ಜುನ ಬಳಿಗಾರ ವ್ಯಕ್ತಪಡಿಸುತ್ತಾರೆ.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 