ರಾಣೆಬೆನ್ನೂರ

ಕರಾವಳಿ ಬಳಗದಿಂದ ಅ.15ರಂದು "ಶಿವದೂತ ಪಂಜುರ್ಲಿ" ಯಕ್ಷಗಾನ ಪ್ರದರ್ಶನ

ಕರಾವಳಿ ಬಳಗದಿಂದ ಅ.15ರಂದು  "ಶಿವದೂತ ಪಂಜುರ್ಲಿ" ಯಕ್ಷಗಾನ ಪ್ರದರ್ಶನ

 ರಾಣೇಬೆನ್ನೂರು 12: ಇದೇ ಆ.15 ರಂದು ಮಂಗಳವಾರ ನಡೆಯಲಿರುವ ಭಾರತ ಸ್ವಾತಂತ್ರ್ಯದ 77ನೇ ವರ್ಷಾಚರಣೆ ಅಂಗವಾಗಿ, ಇಲ್ಲಿನ  ಕರಾವಳಿ ಬಳಗವು" ಶಿವದೂತ ಮಂಜುರ್ಲಿ  " ಪುಣ್ಯ  ಕತಾನಕ ಯಕ್ಷಗಾನ ಕಥಾ ಪ್ರಸಂಗವು ಆಯೋಜಿಸಿದೆ ಎಂದು ಕರಾವಳಿ ಬಳಗದ ಅಧ್ಯಕ್ಷ ರತ್ನಾಕರ ಟಿ. ಕುಂದಾಪುರ ಹೇಳಿದ್ದಾರೆ.   

  ಈ ಕುರಿತು ಶನಿವಾರ  ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕರಾವಳಿ ಬಳಗವು, ತನ್ನ ವೃತ್ತಿಯ ಜೊತೆಗೆ ಪ್ರತಿ ವರ್ಷವೂ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸೇರಿದಂತೆ ಮತ್ತಿತರ ಜನಪರ ಕಾರ್ಯಗಳನ್ನು ಮಾಡುವುದರ ಮೂಲಕ, ಸಮಾಜ ಸಂಘಟನೆ, ಸಾಮಾಜಿಕ ಸೇವೆ ಮಾಡುವ ಉದ್ದೇಶ ಹೊಂದಿದೆ. ಸಂದರ್ಭದಲ್ಲಿ ಅಂದು ಮುಂಜಾನೆ 10 ಗಂಟೆಗೆ ಸಮಾಜದ ಶೈಕ್ಷಣಿಕ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ನಡೆಯಲಿದೆ. ಪ್ರತಿವರ್ಷದಂತೆ ಈ ವರ್ಷವೂ ಸಹ ಕನ್ನಡ ಕಾಂತಾರ ಚಿತ್ರಕಥೆಯಲ್ಲಿ ಬರುವ ಪಂಜುರ್ಲಿ ಯ ಮಹಾತ್ಮೆಯ ಪುಣ್ಯ ಕಥಾ ನಾಯಕ ಯಕ್ಷಗಾನವು ಆಯೋಜಿಸಲಾಗಿದೆ ಎಂದರು.   

     ನಡೂರು ಮಂದರ್ತಿ  ಮಹಾಗಣಪತಿ ಯಕ್ಷಗಾನ ಮಂಡಳಿಯ ನಾಡಿನ ಪ್ರಸಿದ್ಧ ಯಕ್ಷಗಾನ ಕಲಾವಿದರು ಈ ಮಹತ್ವಪೂರ್ಣ ಪ್ರದರ್ಶನವನ್ನು ನಡೆಸಿಕೊಳ್ಳಲಿದ್ದಾರೆ. ನಗರದ ಮತ್ತು ತಾಲೂಕಿನ ಜನರಿಗೆ ಯಕ್ಷಗಾನವು  ವೀಕ್ಷಿಸಲು ಅವಕಾಶವಿರುತ್ತದೆ. ಮಂಗಳವಾರ ರಾತ್ರಿ 8 ಗಂಟೆಗೆ, ಮೇಡ್ಲೆರಿ ರಸ್ತೆ, ಡಾ. ಆರ್ಬಿ.ಪಾಟೀಲ್ ಆಸ್ಪತ್ರೆ ಹಿಂಭಾಗದಲ್ಲಿರುವ ಕೆ. ಹೆಚ್. ಬಿ.ಕಾಲೋನಿಯ ಕರಾವಳಿ ಬಳಗದ ಸಭಾಭವನದಲ್ಲಿ ನಡೆಯಲಿದ್ದು, ಅಂದು ರಾತ್ರಿ  8 ಗಂಟೆಗೆ ಆರಂಭವಾಗುವ  ಯಕ್ಷಗಾನದ ಉದ್ಘಾಟನೆಗೆ ನಗರದ ಅನೇಕ ಗಣ್ಯರು ಪಾಲ್ಗೊಳ್ಳುವರು ಎಂದು ರತ್ನಾಕರ ಕುಂದಾಪುರ್ ತಿಳಿಸಿದ್ದಾರೆ 

ಸುದ್ದಿ ಓದಿ