ಪರಿಪೂರ್ಣತೆಗೆ ಪರಿಶ್ರಮದ ಅವಶ್ಯಕತೆ ಇದೆ: ಸುಶಾಂತ
ಲೋಕದರ್ಶನ ವರದಿ
ರಾಣೇಬೆನ್ನೂರು 25: ಪರಿಪೂರ್ಣತೆ ಪಡೆಯದೇ ಯಶಸ್ಸು ಸಿಗದು, ಪರಿಪೂರ್ಣತೆಗೆ ಪರಿಶ್ರಮದ ಅವಶ್ಯಕತೆ ಇದೆ ಎಂದು ಹುಬ್ಬಳ್ಳಿಯ ಸುಶಾಂತ ಡಾನ್ಸ್ ಅಕ್ಯಾಡೆಮಿಯ ಸುಶಾಂತ ಕುಲಕರ್ಣಿ ಹೇಳಿದರು.
ನಗರದ ಕರ್ನಾಟಕ ಸಂಘದಲ್ಲಿ ಸೋಮವಾರ ಸಂಜೆ ನಡೆದ 87ನೇಯ ವರ್ಷದ ನಾಡಹಬ್ಬ ಕಾರ್ಯಕ್ರಮದ ಒಂಬತ್ತನೆಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ, ಮೊಬೈಲ್ನಲ್ಲಿ ಚಿತ್ರೀಕರಿಸಿ ತಾವು ನಿರ್ಮಿಸಿದ ಕಿರುಚಿತ್ರಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಕುರಿತು ವಿವರಿಸುತ್ತ ಈ ಚಿತ್ರಕ್ಕೆ ದೊರೆತ ಪ್ರಶಸ್ತಿ ನನ್ನದಲ್ಲ ಅದು ಕನ್ನಡ ಭಾಷೆಯ ಚಿತ್ರಕ್ಕೆ ದೊರೆತ ಪ್ರಶಸ್ತಿ ಎಂದು ಭಾಷಾಭಿಮಾನ ಮೆರೆದರು. ವೇದಿಕೆಯಲ್ಲಿ ಅತಿಥಿಯಾಗಿ ಆಗಮಿಸಿದ್ದ ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ ಎಸ್. ಟಿ. ವೇದಮೂರ್ತಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಹಬ್ಬಗಳ ಆಚರಣೆ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಇಂತಹ ಸಂಘಟನೆಗಳು ಹಬ್ಬಗಳ ಮಹತ್ವದ ಅರಿವು ಮೂಡಿಸುತ್ತಿವೆ ಎಂದು ಸಂಘದ ಕಾರ್ಯಕ್ರಮಗಳ ಕುರಿತು ಶ್ಲಾಘಿಸಿದರು. ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ ಎಳೆಹೊಳಿ ಮಾತನಾಡಿ ರಾವಣನನ್ನು ಜಯಿಸಿದ ರಾಮನ ವಿಜಯದ ಸಂಕೇತವಾಗಿ ಇಂದಿಗೂ ವಿಜಯದಶಮಿ ಆಚರಣೆಯಲ್ಲಿದೆ ಎಂದರು. ಹಾಗೂ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ, ನಿರ್ಭಿತವಾಗಿ ವರದಿ ಮಾಡುವ ಮೂಲಕ ಆಡಳಿತ ವ್ಯವಸ್ಥೆಯನ್ನು ಸರಿದಾರಿಗೆ ತರುವ ಶಕ್ತಿ ಪತ್ರಕರ್ತರಿಗಿದೆ ಇದನ್ನು ಕಾಲಕಾಲಕ್ಕೆ ಇವರು ಸಿದ್ದಮಾಡಿ ತೋರಿಸಿದ್ದಾರೆ ಎಂದರು.
ಹುಬ್ಬಳ್ಳಿಯ ಸುಶಾಂತ ಡಾನ್ಸ ಅಕ್ಯಾಡೆಮಿಯ ಸುಶಾಂತ ಕುಲಕಣರ್ಿ ತಂಡದಿಂದ ಭಾರತೀಯ ಮತ್ತು ಪಾಶ್ಚಿಮಾತ್ಯ ಸಂಗೀತಕ್ಕೆ ನೃತ್ಯಮಾಡಿ ಪ್ರೇಕ್ಷಕರನ್ನು ರಂಜಿಸಿದರು.
ಶ್ರೀನಿಧಿ ಶಿರಹಟ್ಟಿ ನಾಡಗೀತೆ ಹಾಡಿದರು, ಶ್ರೀಲಕ್ಷ್ಮೀ ಅಡಿಕೆ ಸ್ವಾಗತಿಸಿ, ಪರಿಚಯಿಸಿದರು,ನಂದನ ಜೋಶಿ ವಂದಿಸಿದರು, ಚಿದಂಬರ ಜೋಶಿ ಕಾರ್ಯಕ್ರಮ ನಿರ್ವಹಿಸಿದರು