ರಾಣೆಬೆನ್ನೂರ

ವಿಮಾ ನೋಂದಣಿ ಅವದಿ ವಿಸ್ತರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪಾಟೀಲ್ ಆಗ್ರಹ

ವಿಮಾ ನೋಂದಣಿ ಅವದಿ ವಿಸ್ತರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪಾಟೀಲ್ ಆಗ್ರಹ

ರಾಣೇಬೆನ್ನೂರು  :ಕೇಂದ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಎಸ್ ಸಿದ್ದರಾಮಯ್ಯ ಅವರು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ವಿಮಾ ನೋಂದಣಿ  ಮಾಡಿಸಲು ಅವಧಿ ವಿಸ್ತರಿಸುವಂತೆ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರ ಗೌಡ ಪಾಟೀಲ್ ಅವರು  ಉಭಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.          ಈ ಕುರಿತು ಸೋಮವಾರ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬೆಳೆ ವಿಮೆ ನೊಂದಣಿ ಕಾರ್ಯದಲ್ಲಿ ಹೊಸ ಹೊಸ ತಾಂತ್ರಿಕತೆ ಅಳವಡಿಕೆಯಾಗಿರುವುದರಿಂದ, ಹಾಗೂ ಕೇಂದ್ರ ಸರ್ಕಾರವು ಬೆಳೆ ವಿಮೆ ತುಂಬಲು ಅವಧಿ ಘೋಷಣೆ ಮಾಡಿದಾಗ ನಿಂದ, ಜಿಲ್ಲೆಯು ಸೇರಿದಂತೆ ರಾಜ್ಯದಾದ್ಯಂತ ಎಡೆಬಿಡದೆ  ನಿರಂತರವಾಗಿ ಮಳೆ ಸುರಿಯುತ್ತಲಿದೆ. ಹೀಗಾಗಿ ನೊಂದಣಿ ಮಾಡಿಸಲು ಅಗತ್ಯ ದಾಖಲಾತಿ ಪೂರೈಸಲು  ರೈತ ಸಮುದಾಯಕ್ಕೆ ಸಮಯವೂ ಸಾಕಾಗಿಲ್ಲ ಎಂದಿದ್ದಾರೆ.  ಈ ಬಾರಿಯ ಬೆಳೆ ವಿಮೆ ಸೌಲಭ್ಯ ಪಡೆಯಲು ಪಹಣಿಯಲ್ಲಿ ಹೆಸರಿರುವ ಪ್ರೊಟ್ಸ್ ನಲ್ಲಿ ನೊಂದಣಿ ಕಡ್ಡಾಯ, ಮತ್ತು ಎಫ್ ಐ ಡಿ ಮಾಡಿಸುವುದು ಸಹ ಕಡ್ಡಾಯವಿದೆ. ಇದನ್ನು ಮಾಡಬೇಕಾದರೆ ಎಲ್ಲ ದಾಖಲಾತಿಗಳು ಅಗತ್ಯವಾಗಿವೆ, ಇದಕ್ಕೆ  ಪ್ರತಿಯೊಬ್ಬರ ಮೊಬೈಲ್ಗೆ ಓಟಿಪಿ ನಂತರವೇ ಐ ಡಿ ರಚನೆಯಾಗುತ್ತದೆ ಸಮಯ ಬೇಕಾಗುತ್ತದೆ ಎಂದಿದ್ದಾರೆ.ಭಾರತ ದೇಶದ ರೈತರು ಇಷ್ಟೊಂದು ಜ್ಞಾನವನ್ನು ತಾಂತ್ರಿಕತೆಯಲ್ಲಿ ಮುಂದೆ ಹೋಗಿಲ್ಲ, ಜ್ಞಾನದ ಕೊರತೆ ಕಾರಣ 75% ರಷ್ಟು ರೈತರು ಸೇವಾ ಕೇಂದ್ರಗಳಿಗೆ, ಕಂಪ್ಯೂಟರ್ ಸೆಂಟರ್ ಗಳಿಗೆ ಅಲೆಯುವುದು ಅನಿವಾರ್ಯವಾಗಿದೆ ಇನ್ನಷ್ಟು ಅವಧಿ ವಿಸ್ತರಿಸಲು ಪಾಟೀಲ್ ಅವರು ಮನವಿ ಮಾಡಿದ್ದಾರೆ.  ಕೇಂದ್ರದಲ್ಲಿ ಪ್ರಧಾನಮಂತ್ರಿಯಾಗಿ ಎರಡನೇ ಬಾರಿ ಅವಧಿಯನ್ನು ಪೂರೈಸುತ್ತಿರುವ ಪ್ರಧಾನ ಮಂತ್ರಿಗಳು ದೇಶವಾಸಿಗಳಿಗೆ ಮನ್ ಕಿ ಬಾತ್ ಹೊರತು  ಪಡಿಸಿ, ಬೇರೆ ಏನನ್ನು  ಮಾಡಲು ಸಾಧ್ಯವಾಗಿಲ್ಲ ರೈತ ಸಮುದಾಯಕ್ಕೆ ಪ್ರಧಾನ ಮಂತ್ರಿಗಳು ನೀಡುವ ಮನ್ ಕಿ ಬಾತ್ನಿಂದ ಹೊಟ್ಟೆ ತುಂಬಲಾರದು, ಅದರ ಬದಲಾಗಿ  ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರೀಯಾ ಯೋಜನೆಗಳನ್ನು ರೂಪಿಸಿ, ಅನುಕೂಲ ಮಾಡಿಕೊಡಬೇಕೆಂದು ಮಾಧ್ಯಮಕ್ಕೆ ನೀಡಿರುವ ಪ್ರಕಟಣೆಯಲ್ಲಿ ಕಿಡಿ ಕಾರಿದ್ದಾರೆ

ಸುದ್ದಿ ಓದಿ