ರಾಣೆಬೆನ್ನೂರ

ಕೆಲಸದಿಂದ ವಜಾಗೋಳಿಸಿದ ಪೌರಕಾರ್ಮಿಕನನ್ನು ತೆಗೆದುಕೊಳ್ಳಲು ಪಂಚಾಯಿತಿಗೆ ಬೀಗ ಜಡೆದು ಪ್ರತಿಭಟನೆ

ಕೆಲಸದಿಂದ ವಜಾಗೋಳಿಸಿದ ಪೌರಕಾರ್ಮಿಕನನ್ನು ತೆಗೆದುಕೊಳ್ಳಲು  ಪಂಚಾಯಿತಿಗೆ ಬೀಗ ಜಡೆದು ಪ್ರತಿಭಟನೆ

ಕೆಲಸದಿಂದ ವಜಾಗೋಳಿಸಿದ ಪೌರಕಾರ್ಮಿಕನನ್ನು ತೆಗೆದುಕೊಳ್ಳಲು  ಪಂಚಾಯಿತಿಗೆ ಬೀಗ ಜಡೆದು ಪ್ರತಿಭಟನೆ

ರಾಣಿಬೆನ್ನೂರ 22: ತಾಲೂಕಿನ  ಬಿಲ್ಲಹಳ್ಳಿ ಗ್ರಾಮ ಪಂಚಾಯಿತಿಗೆ ಸ್ಥಳೀಯ ಭೀಮ ಆರ್ಮಿ ಕರ್ನಾಟಕ ಏಕತಾ ಮಿಷನ್ ಪದಾಧಿಕಾರಿಗಳು ಗುರುವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು. 

  ಮಿಷನನ  ಮುಖಂಡ ಮೈಲಪ್ಪ ದಾಸಪ್ಪನವರ ಮಾತನಾಡಿ, ಕಳೆದ 30 ವರ್ಷಗಳಿಂದ  ಬಸಪ್ಪ ಮಲ್ಲಾಡದ ಇವರು ಬಿಲ್ಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪೌರಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಏಕಾಏಕಿ ಇವರನ್ನು ಕೆಲಸದಿಂದ ತೆಗೆದು  ಹಾಕಿದ್ದು ಅಪರಾಧವಾಗಿದೆ. ಕಾರಣವಿಲ್ಲದೆ ಇವರ ಜಾಗಕ್ಕೆ ಇನ್ನೊಬ್ಬರನ್ನು ನೇಮಿಸಿಕೊಂಡಿರುವುದು ನಿಯಮ  ಭಾಹೀರವಾಗಿದೆ ಎಂದವರು ಆರೋಪಿಸಿದ ಅವರು, ಶೀಘ್ರವೇ ಬಸಪ್ಪ ಇವರನ್ನು ಖಾಯಂಗೊಳಿಸಬೇಕು. ಇಲ್ಲವಾದರೆ ಅಹೋರಾತ್ರಿ ಗ್ರಾಪಂ ಎದುರು ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಸಿದರು.   ಪ್ರತಿಭಟನೆ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿ ತಾಪಂ ಇಓ ಇವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು  ಪ್ರತಿಭಟನೆಯಲ್ಲಿ ನವೀನ್ ಮೇನಶಿನಹಾಳ, ಪ್ರವೀಣ ಮುದೇನೂರ, ಭರತ ಪ್ರಜಾರ, ಯಶವಂತ ಕರೆತಿಮ್ಮಣ್ಣನವರು. ಹೊನ್ನಪ್ಪ ಯಲ್ಲಾಪುರ, ಮಂಜಪ್ಪ ಮೈದೂರ, ಧರ್ಮಣ್ಣ ಅಂತರವಳ್ಳಿ  ಸೇರಿ  ಅನೇಕ ದಲಿತ ಮುಖಂಡರು ಇದ್ದರು. 

ಫೋಟೊ:22ಆರ್‌ಎನ್‌ಆರ್03ರಾಣಿಬೆನ್ನೂರ: ತಾಲೂಕಿನ  ಬಿಲ್ಲಹಳ್ಳಿ ಗ್ರಾಮ ಪಂಚಾಯಿತಿಗೆ ಸ್ಥಳೀಯ ಭೀಮ ಆರ್ಮಿ ಕರ್ನಾಟಕ ಏಕತಾ ಮಿಷನ್ ಪದಾಧಿಕಾರಿಗಳು ಗುರುವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು. 


ಸುದ್ದಿ ಓದಿ