ರಾಣೆಬೆನ್ನೂರ

ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ವಿದ್ಯಾರ್ಥಿಗಳ  ಅತ್ಯುತ್ತಮ ಸಾಧನೆ

ಲೋಕದರ್ಶನ ವರದಿ

ರಾಣೇಬೆನ್ನೂರು 30: ಸಮೀಪದ ಹರಿಹರ ನಗರದ ಹೊರ ವಲಯದ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು  ಸತತ  9ನೇ ಬಾರಿಗೆ ಹರಿಹರ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ  ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಫುಟ್ಬಾಲ್, ಹ್ಯಾಂಡ್ ಬಾಲ್, , ಟೆನಿ ಕೊಯ್ತ್, ಕರಾಟೆ, ಕುಸ್ತಿ, ಜೂಡೋ,ಟೆಕೆವಂಡೋ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. 

   ವಿಜೇತ ಎಲ್ಲಾ ತಂಡದವರಿಗೆ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಫಾದರ್ ಮೇಲ್ವಿನ್ ಜೋಸೆಫ್ ಪಿಂಟು,  ಕಾಲೇಜು ಉನ್ನತಾಧಿಕಾರಿ  ವಂದನೀಯ ಫಾದರ್ ಎರಿಕ್ ಮಥಾಯಸ್ ಎಸ್ ಜೆ, ಪ್ರಾಂಶುಪಾಲರಾದ  ಪುಷ್ಪಲತಾ ಅರಸ್, ಉಪ ಪ್ರಾಂಶುಪಾಲರಾದ ಮೌಸಿನ್ ಉಲ್ಲಾ,  ಪಾಸ್ಕಲ್ ಫೆರ್ನಾಂಡಿಸ್, ಕಾರ್ಯಕ್ರಮ ಸಂಯೋಜಕರಾದ ಮಂಜುನಾಥ ಟಿ ಎಸ್, ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಸಾಧಕ ವಿದ್ಯಾರ್ಥಿಗಳಿಗೆ  ಅಭಿನಂದನೆ ಸಲ್ಲಿಸಿದರು 

ಸುದ್ದಿ ಓದಿ