ಸರಕಾರದ ವಿರುದ್ಧ ಅಬ್ಯರ್ಥಿಗಳ ಆಕ್ರೋಶ ಸಚಿವ ಲಾಡ ಮೂಲಕ ಸರಕಾರಕ್ಕೆ ಮನವಿ
ಸರಕಾರದ ವಿರುದ್ಧ ಅಬ್ಯರ್ಥಿಗಳ ಆಕ್ರೋಶ ಸಚಿವ ಲಾಡ ಮೂಲಕ ಸರಕಾರಕ್ಕೆ ಮನವಿ
ಧಾರವಾಡ 04 : ಕೆ.ಇ.ಎ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಹಾಗೂ ಸರಕಾರದ ವಿರುದ್ಧ ಹರಿಹಾಯುತ್ತಿರುವ ಸಂಘದ ವಿದ್ಯಾರ್ಥಿಗಳು ಕಾರ್ಮಿಕ ಸಚಿವರು ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸಂತೋಷ ಲಾಡಗೆ ಈ ಪರೀಕ್ಷಾ ಗೋಂದಲ ಶೀಘ್ರವೇ ಬಗೆಹರಿಸುವಲ್ಲಿ ಸಚಿವರು ಮತ್ತು ಶೋಷಿತರ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಪ್ರಮಾಣಿಕ ಪ್ರಯತ್ನ ಮಾಡಬೇಕೆಂದು ಅಬ್ಯರ್ಥಿ, ವಿದ್ಯಾರ್ಥಿ ಕಿರಣ ಗೌಡರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ತರಾತುರಿಯಲ್ಲಿ ಪರಿಕ್ಷೆಗಳನ್ನು ನಡೆಸಲಾಗಿದೆ. ಸಮಯದ ಅವಕಾಶ ಕೊಟ್ಟಿಲ್ಲ. ನಾಮಕೆವಾಸ್ತೆ ಅಬ್ಯರ್ಥಿಗಳ ತಪಾಸಣೆ ಮಾಡಲಾಗಿದೆ. ಹಲವು ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ.ಕೆಮೆರಾಗಳು ಕಾರ್ಯನಿರ್ವಹಿಸಿಲ್ಲ. ಶೇಕಡಾ 50 ರಷ್ಟು ಹೋಲಿಕೆ ಇರುವ ವ್ಯಕ್ತಿಗಳು ಪರೀಕ್ಷಗೆ ಹಾಜರಾಗಿ ಮೂಲ ಅಬ್ಯರ್ಥಿ ಪರವಾಗಿ ಪರೀಕ್ಷೆ ಬರೆದಿರುವ ಶಂಕೆ. ಪ್ರಶ್ನೆಪತ್ರಿಕೆಗಳಲ್ಲಿ ಗೋಂದಲ. ಕೆ.ಇ.ಎ.ಗೂ ಕಂಪ್ಲೇಂಟ ಮಾಡಿದರೂ ನಿಷ್ಕಾಳಜಿ, ಯಾವುದೇ ರೀತಿಯಲ್ಲಿ ಸ್ಪಂದನೆ ದೊರೆಯುತ್ತಿಲ್ಲ. ಮಿಂಚಂಚೆ ಮಾಡಿದರೂ ಪ್ರತ್ಯೂತ್ತರ ಕೊಡುತ್ತಿಲ್ಲ. ಬಯೋಮೆಟ್ರಿಕ್ ಪದ್ಧತಿ ಅಳವಡಿಸುತ್ತಿಲ್ಲ. ಇವೆಲ್ಲವುಗಳ ಕಾರಣ ಅಕ್ರಮದ ವಾಸನೆ ಗ್ಯಾರೆಂಟಿ ಎಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ಧಾರವಾಡ ಘಟಕದ ವಿದ್ಯಾರ್ಥಿಗಳು ನೋವನ್ನು ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಸಂತೋಷ ಲಾಡ, ವಿದ್ಯಾರ್ಥಿಗಳ ಜೊತೆ ಕಣ್ಣುಮುಚ್ಚಾಲೆ ಆಟ ಆಡುವ ಸಂಸ್ಕೃತಿಯು ಕಾಂಗ್ರೇಸ್ ಪಕ್ಷದ್ದಲ್ಲ. ಏನು ಎಲ್ಲಿ ತಪ್ಪಾಗಿದೆ ಎಂಬುದನ್ನು ನೋಡುತ್ತೇವೆ. ವಿದ್ಯಾರ್ಥಿಗಳು ಗೋಂದಲಕ್ಕೆ ಒಳಗಾಗಬಾರದು. ಸರಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ಪದ್ಧತಿಯನ್ನು ಅಳವಡಿಕೆಗೆ ಪ್ರಸ್ತಾಪಿಸುತ್ತೇನೆಂದು ಸಚಿವ ಲಾಡ್ ಭರವಸೆ ನೀಡಿದರು.
ಸಚಿವರ ಮೂಲಕ ಸರಕಾರಕ್ಕೆ ಮನವಿ ಕೊಟ್ಟ ವಿದ್ಯಾರ್ಥಿ ಕಿರಣ ಗೌಡರ ನಮ್ಮ ಉದಯಕಾಲ ದಿನಪತ್ರಿಕೆಯೊಂದಿಗೆ ಮಾತನಾಡಿ, ರಾಜ್ಯದ ಇತಿಹಾಸದಲ್ಲಿಯೇ ಹಿಂದಿನ ಸರಕಾರದಲ್ಲಿ ಪಿ.ಎಸ್.ಐ ನೇಮಕಾತಿಯ ಬಹುದೊಡ್ಡ ಹಗರಣ ಮಾಸುತ್ತಿಲ್ಲ. ಆರೋಪಿಗಳು ಬಿಂದಾಸ ಆಗಿದ್ದಾರೆ. ಯಾರಿಗೆ ಯಾವ ಮಟ್ಟದ ಶಿಕ್ಷೆ ಆಗಿದೆ ಎಂದು ಸರಕಾರವೆ ಬಹಿರಂಗವಾಗಿ ಉತ್ತರ ಕೊಡಬೇಕಾಗಿದೆ. ಯಾವುದೇ ಇಲಾಖೆಗಳಿರಲಿ ಅಧಿಕಾರಿಗಳು ಅಥವಾ ರೂವಾರಿಗಳು ಸಿಕ್ಕಿಬಿದ್ದಾಗ ಕೆಲದಿನಗಳವರೆಗೆ ಮಾತ್ರ ನಾಮಕೆವಾಸ್ತೆ ತನಿಖೆಗಳು ನಡೆಯುತ್ತವೆ ವಿನಹ ಶಿಕ್ಷೆಗಳು ಕೂಡ ಅಷ್ಟಕ್ಕಷ್ಟೆ. ರಾಜ್ಯ ಅಥವಾ ಕೇಂದ್ರ ತನಿಖಾ ಸಂಸ್ಥೆಗಳಿಂದ ತನಿಖೆಗೊಂಡ ಎಷ್ಟು ಆರೋಪಿಗಳು ಯಾವ ಮಟ್ಟದ ಶಿಕ್ಷೆಗೆ ಗುರಿಯಾಗಿದ್ದಾರೆಂದು ಸರಕಾರವೆ ಬಹಿರಂಗವಾಗಿ ಉತ್ತರ ನೀಡಬೇಕಾದ ಕಾಲಘಟ್ಟದಲ್ಲಿದ್ದೇವೆಂದು ಕಿರಣ ಗೌಡರ ತಮ್ಮ ತೇವುಗಣ್ಣಿನಿಂದಲೆ ಹೇಳಿದರು.
ಆದರೆ ಸರಕಾರದ ಅಥವಾ ಪ್ರಾಧಿಕಾರದ ಇಂತಹ ಅಸಂಬದ್ಧ ಅಥವಾ ನಿಷ್ಕಾಳಜಿಗೆ ಅದ್ವಾನ ಪ್ರಸಂಗಗಳಿಗೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘ ತಕ್ಕ ಉತ್ತರ ಕೊಡಲಿದೆ ಎಂದರು. ಇನ್ನೂ ಮುಂದೆ ಸಹಿಸುವುದಿಲ್ಲ. ನ್ಯಾಯಯುತ ವಿದ್ಯಾರ್ಥಿಗಳ ನ್ಯಾಯಕ್ಕಾಗಿ, ಪರಿಕ್ಷಾ ಪ್ರಾಧಿಕಾರಗಳ ವಿರುದ್ಧ ಶೀಘ್ರವೇ ಪಿ.ಐ.ಎಲ್. ಮಾಡಲಾಗುವುದೆಂದು ಅಬ್ಯರ್ಥಿ ಕಿರಣ ಗೌಡರ ಉದಯಕಾಲಕ್ಕೆ ತಿಳಿಸಿದರು.
ಪರೀಕ್ಷಾ ಹಗರಣಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಮಾಣಿಕ ನಾಯ್ಯ ಕೊಡಿಸುವಲ್ಲಿ ಹಿಂದಿನ ಸರಕಾರಗಳು ವಿಫಲವಾಗಿದ್ದನ್ನು ಇಡೀ ರಾಜ್ಯವೇ ನೋಡಿದೆ. ಆದರೇ ಶೋಷಿತ ವರ್ಗಗಳ ಜನನಾಯಕರೆಂದೆ ಖ್ಯಾತಗೊಂಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೇಸ ಸರಕಾರ ಅದೇಷ್ಟರ ಮಟ್ಟಿಗೆ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುತ್ತದೆ ಎಂಬುದನ್ನು ನೋಡಬೇಕಾಗಿದೆ.