ಕುರುಬ ಸಮಾಜದ ವತಿಯಿಂದ ಭಕ್ತ ಶ್ರೇಷ್ಠ ಕನಕದಾಸರ ಜಯಂತಿ
ಕುರುಬ ಸಮಾಜದ ವತಿಯಿಂದ ಭಕ್ತ ಶ್ರೇಷ್ಠ ಕನಕದಾಸರ ಜಯಂತಿ
ರಾಣಿಬೆನ್ನೂರ 21: ಇಲ್ಲಿನ ಮಿನಿವಿಧಾನ ಸೌಧದಲ್ಲಿ ಸೋಮವಾರ ತಾಲೂಕಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕಾ ಕುರುಬ ಸಮಾಜದ ವತಿಯಿಂದ ಭಕ್ತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ತಹಶೀಲ್ದಾರ ಆರ್.ಎಸ್. ಭಗವಾನ ಭಕ್ತ ಕನಕದಾಸರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಜೋಳಪ್ಪ ಕಸವಾಳ, ಮಂಜುನಾಥ ಗೌಡಶಿವಣ್ಣನವರ, ಷಣ್ಮುಖಪ್ಪ ಕಂಬಳಿ, ಮೃತ್ಯುಂಜಯ ಗುದಿಗೇರ, ಕುಬೇರ್ಪ ಕಂಬಳಿ, ಶ್ರೀನವಾಸ ಸಾವುಕಾರ, ಆನಂದ ಹುಲ್ಬನ್ನಿ ಮತ್ತಿತರರು ಇದ್ದರು.