ಶಿಗ್ಗಾವ್

ಸರ್ವ ಭಾಗ್ಯಗಳಲ್ಲಿ ಆರೋಗ್ಯ ಭಾಗ್ಯ ಆತೀ ಮುಖ್ಯ: ತೆಪ್ಪದ

ಸರ್ವ ಭಾಗ್ಯಗಳಲ್ಲಿ ಆರೋಗ್ಯ ಭಾಗ್ಯ ಆತೀ ಮುಖ್ಯ: ತೆಪ್ಪದ

ಲೋಕದರ್ಶನ ವರದಿ

ಶಿಗ್ಗಾವಿ : ಮಕ್ಕಳ ಆರೋಗ್ಯದ ಬಗ್ಗೆ ಇಂದು ಹೆಚ್ಚು ಕಾಳಜಿ ವಹಿಸುವುದು ಬಹು ಮುಖ್ಯವಾಗಿದ್ದು,  ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸರ್ವ ಭಾಗ್ಯಗಳಲ್ಲಿ ಆರೋಗ್ಯ ಭಾಗ್ಯ ಆತೀ ಮುಖ್ಯವಾದುದು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಗೀತಾಂಜಲಿ ತೆಪ್ಪದ ಹೇಳಿದರು. 

ಪಟ್ಟಣದ ಎಸ್ಬಿಬಿಎಮ್ಡಿ ಶಾಲೆಯಲ್ಲಿ ನಡೆದ ತಾಲೂಕಿನ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಅಧ್ಯಯನ ಮಾಡುತ್ತೀರುವ ಮಕ್ಕಳ ಕಣ್ಣು ತಪಾಸಣೆ ಮಾಡುವ ಉದ್ದೇಶದಿಂದ ಪ್ರತಿ ಶಾಲೆಯ ಒಬ್ಬ ಶಿಕ್ಷಕರಿಗೆ ನೇತ್ರ ತಜ್ಞರಿಂದ ಹಮ್ಮಿಕೊಂಡಿದ್ದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ಬಿಬಿಎಮ್ಡಿ ಶಾಲೆಯ ಪ್ರಾಚಾರ್ಯ ಆರ್ ಎಸ್ ಭಟ್ ಅವರು, ಮಾನವನ ಅಂಗಾಂಗಗಳಲ್ಲಿ ಕಣ್ಣು ಅತೀ ಮಹತ್ವದಾಗಿದೆ ಹಾಗಾಗಿ ಮಕ್ಕಳ ಕಣ್ಣು ತಪಾಸಣೆ ಮಾಡಿ ಅಗತ್ಯ ಸಾಧನ, ಸಲಕರಣೆ ನೀಡಿ ಮಗುವಿನ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ಈ ತರಬೇತಿ ಮಹತ್ವದಾಗಿದೆ ಎಂದು ವಿವರಿಸಿದರು.

ಕಣ್ಣಿನ ವೈದ್ಯೆ ಡಾ. ಅನುರಾಧಾ ಪಾಟೀಲ ಮತ್ತು ರಾಜೇಂದ್ರ ಮುಂಡಾಸದ ಹಾಗೂ ವಿಜಯ ವಾಯ ಬಿ ಶಿಕ್ಷಕರಿಗೆ ಕಣ್ಣುಗಳ ಮತ್ತು ಆರೋಗ್ಯದ ಕುರಿತು ತರಬೇತಿ ನೀಡಿದರು. 

ಹೇಮಪ್ಪ ರೆಡಿ.್ಡಕೆ ಬಿ ಚನ್ನಪ್ಪ. ಎಸ್ ಎಮ್ ಮೀಶಿ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿಜಯ ವಾಯ್ ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಟಿ ಕೆ ಪಾಟೀಲ, ನಾಗಪ್ಪ ಬೆಂತೂರ ಸೇರಿದಂತೆ ತಾಲೂಕಿನ ಶಿಕ್ಷಕರು ಇದ್ದರು 

ಸುದ್ದಿ ಓದಿ