ನೂಲ ಹುಣ್ಣಿಮೆ, ಸರ್ವಧರ್ಮ ಸಾಮೂಹಿಕ ಸತ್ಯನಾರಾಯಣ ಪೂಜೆ
ರಾಣೇಬೆನ್ನೂರು 5: ಸಿದ್ದೇಶ್ವರ ನಗರದ ಪದ್ಮಶಾಲಿ ಸಮಾಜದ ಶ್ರೀ ಗುರು ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ನೂಲ ಹುಣ್ಣಿಮೆ ಪ್ರಯುಕ್ತ ಸರ್ವ ಧರ್ಮ ಸಾಮೂಹಿಕ ಸತ್ಯನಾರಾಯಣ ಪೂಜಾ ಧಾರ್ಮಿಕ ಕಾರ್ಯಕ್ರಮವು ಆಯೋಜಿಸಲಾಗಿತ್ತು. ಅಂದು ಮುಂಜಾನೆ ವಿವಿಧ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಶ್ರೀ ಮಾರ್ಕಂಡೇಶ್ವರ ಸ್ವಾಮಿಗೆ, ಅಭಿಷೇಕ, ಬಿಲ್ವಾರ್ಚನೆ, ನವಗ್ರಹ ಅಭಿಷೇಕ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ಸತ್ಯನಾರಾಯಣ ಸ್ವಾಮಿಯ ಪೂಜಾ ಕಾರ್ಯಕ್ರಮದಲ್ಲಿ ಕೊಟ್ರೇಶಪ್ಪ ಸರೋಜಮ್ಮ ಮುತ್ತೇನಹಳ್ಳಿ ಕುಟುಂಬದವರು ಪಾಲ್ಗೊಂಡಿದ್ದರು. ಸಮಾಜದ ಮುಖಂಡರಾದ ಹನುಮಂತಪ್ಪ ಮುಕ್ತೇನಹಳ್ಳಿ, ಮಾರುತಿ ಗರಡಿ ಮನಿ, ಪ್ರವೀಣ್ ಮುಕ್ತೇನಹಳ್ಳಿ, ಪರಶುರಾಮ ಅಗಡಿ, ರಾಮಣ್ಣ ವೈದ್ಯ, ಚನ್ನವೀರಯ್ಯ ಸ್ವಾಮಿ ಹಿರೇಮಠ, ನಾಗರಾಜ ತುಮಕೂರ್, ಪುಟ್ಟಪ್ಪ ಬಾರ್ಕಿ, ಶಂಕ್ರಪ್ಪ ಸಾಳೇರ, ಪ್ರೇಮಾ ಶೆಟ್ಟಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ನಂತರ ಸಾರ್ವಜನಿಕವಾಗಿ ಮಹಾಪ್ರಸಾದ ವಿತರಿಸಲಾಯಿತು.