ಚಿತ್ರ "ಕಿಕ್ 2" ಕ್ಕಾಗಿ ಯಾರೂ ಭೇಟಿಯಾಗಿಲ್ಲ: ದಿಶಾ ಪಟಾನಿ
ಮುಂಬೈ, ಮೇ 8 ಬಾಲಿವುಡ್ನಿರ್ದೇಶಕ ಸಾಜೀದ್ ನಡಿಯಾದವಾಲಾ ಅವರುನಿರ್ಮಿಸುತ್ತಿರುವ "ಕಿಕ್ 2" ಚಿತ್ರದಲ್ಲಿ ಅಭಿನಯಿಸುವಂತೆ ಯಾರೂ ತಮ್ಮಸಂಪರ್ಕಿಸಿಲ್ಲ ಸಿಲ್ಲ ಎಂದು ದಿಶಾ ಪಟಾನಿ ಹೇಳಿದ್ದಾರೆ.
ನಡಿಯಾದವಾಲಾ ಅವರು ಸಲ್ಮಾನ್ ಖಾನ್ ಹಾಗೂ ಜಾಕ್ವೆಲಿನ್ ಅಭಿನಯದ ಸೂಪರ್ ಹಿಟ್ "ಕಿಕ್" ಚಿತ್ರ ನಿಮರ್ಿಸಿದ್ದು, ಇದೀಗ ಸಲ್ಮಾನ್ ಖಾನ್ ಅವರೊಂದಿಗೆ ಮತ್ತೊಮ್ಮೆ "ಕಿಕ್ 2" ಚಿತ್ರಕ್ಕಾಗಿ ಸಿದ್ಧತೆ ನಡೆಸಿದ್ದಾರೆ. ಸದ್ಯ ದಿಶಾ ಪಟಾನಿ ಅವರು ಸಲ್ಮಾನ್ ಖಾನ್ ಜೊತೆ "ಭಾರತ್" ಚಿತ್ರದ ಶೂಟಿಂಗ್ ನಲ್ಲಿ ತೊಡಗಿದ್ದಾರೆ. ದಿಶಾ ಪಟಾನಿ "ಕಿಕ್ 2"ರಲ್ಲಿ ಅಭಿನಯಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಕಿಕ್ 2 ರಲ್ಲಿ ಅಭಿನಯಿಸುವ ಕುರಿತು ಮಾತನಾಡಿದ ದಿಶಾ, ಎಲ್ಲಾ ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ಈ ಚಿತ್ರದಲ್ಲಿ ಅಭಿನಯಿಸುವಂತೆ ನನ್ನನ್ನು ಯಾರೂ ಭೇಟಿ ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ, ಚಿತ್ರದಲ್ಲಿ ಅಭಿನಯಿಸಲು ಉತ್ಸುಕರಾಗಿರುವ ಅವರು, ಸಲ್ಮಾನ್ ಜೊತೆ ಇನ್ನೊಂದು ಚಿತ್ರದಲ್ಲಿ ಕಾಣಲು ಇಚ್ಛಿಸಿದ್ದಾರೆ.
ಸದ್ಯ "ಭಾರತ್" ಚಿತ್ರ ಕುರಿತು ಬಹಳ ಉತ್ಸುಕರಾಗಿದ್ದು, ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸುತ್ತಿರುವುದು ಕನಸು ನನಸಾದಂತಾಗಿದೆ ಎಂದು ಹೇಳಿದ್ದಾರೆ. ಜೂನ್ 5ರಂದು ಬಿಡುಗಡೆಗೊಳ್ಳುತ್ತಿರುವ "ಭಾರತ್" ಚಿತ್ರದಲ್ಲಿ ಸಲ್ಮಾನ್ ಖಾನ್ ಹಾಗೂ ದಿಶಾ ಪಟಾನಿ ಸಹಿತ ಕತ್ರಿನಾ ಕೈಫ್, ಜಾಕಿ ಶ್ರಾಫ್, ತಬ್ಬು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.