ನೂತನ ಶಿಖರ ಕಳಸಾರೋಹಣದ ಮೆರವಣಿಗೆ
ಕಾಗವಾಡ : ಐನಾಪುರ್ ಪಟ್ಟಣದಲ್ಲಿರುವ ಹರಿ ವಿಠ್ಠಲ ಸೇವಾ ಟ್ರಸ್ಟ್ ವತಿಯಿಂದ ವಿಠ್ಠಲ ರುಕ್ಮಿಣಿ ಮಂದಿರದ ನೂತನ ಶಿಖರ ಕಳಸಾರೋಹಣದ ಮೆರವಣಿಗೆ ಜರುಗಿತು.
ದಿ.27ರಂದು ಪಟ್ಟಣದ ಪಿ ಕೆ ಪಿ ಎಸ್ ಬ್ಯಾಂಕ ಆವರಣದಲ್ಲಿ ನೂತನ ಕಳಸಗಳನ್ನು ದಿವ್ಯ ಸಾನಿದ್ಯ ವಹಿಸಿದ ಮೊಳವಾಡದ ಸುಭಾಷ ಮಹಾರಾಜರು ಹಾಗೂ ಬಸವೇಶ್ವರ ಸ್ವಾಮಿಜಿ ವಿಧಿವತಾಗಿ ಪೂಜೆ ಸಲ್ಲಿಸಿ. ಆನೆಯ ಮೇಲೆ ಕಳಸಗಳನ್ನುಯಿಟ್ಟು ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಕುದುರೆ ,ವಿವಿಧ ಕಲಾ ತಂಡಗಳು,ಮತ್ತು ಶಾಲಾ ವಿದ್ಯಾಥರ್ಿನಿಯರು ನೃತ್ಯ ಗೈಯುತ್ತಾ ,ಸುಮಂಗಲಯರು ಕುಂಭ ಹೊತ್ತು, ಸಕಲ ಭಾಗವಹಿಸಿ ಸಕಲ ವಾದ್ಯ ಮೇಳಗಳೊಂದಿಗೆ ಕಳಸಗಳ ಭವ್ಯ ಮೆರವಣಿಗೆ ಪಟ್ಟಣದ ಪ್ರ ಮುಖ ಬೀದಿಗಳಲ್ಲಿ *ಬೋಲಾ ಪುಂಡಲಿಕ ಮಹಾರಾಜಕೀ ಜೈ ಎಂಬ ಜಯ ಘೋಷಣೆ ಕೂಗುತ್ತಾ ಭಕ್ತಾದಿಗಳು ಮಂದಿರಕ್ಕೆ ಕಳಸಗಳನ್ನು ತಲ್ಲುಪಿಸಿದರು. ಮುಖಂಡ ದಾದಾ ಪಾಟೀಲ, ರಾಜೇಂದ್ರ ಪೋತದಾರ, ಡಾ.ಮೋಹನ ಕಾರ್ಚಿ ,ಭರತ ಲೋಂಡೆ, ಸುನೀಲ ಡೊಂಗರೆ, ನೀತಿನ ಕಾಕಡೆ, ವಿಶ್ವನಾಥ ಖಟಾಂವಿ,ಕೇರಿಕಾಯಿ ಸಂತರು.ಸಿದ್ದು ಖಟಾಂವಿ,ಅಣಾಸಾಬ ಜಾಧವ,ರಾಜೇಂದ್ರ ಶೇಡಶ್ಯಾಳೆ,ಹಾಗೂ ಹರಿವಿಠ್ಠಲ ಸೇವಾ ಟ್ರಸ್ಟ್ನ ಎಲ್ಲ ಪಧಾದಿಕಾರಿಗಳು ಇತರರು ಇದ್ದರು