ಸೌಂದತ್ತಿ

ನವರಾತ್ರಿ ಉತ್ಸವದ ಕಾರ್ಯಕ್ರಮಗಳು ಸೀಮೋಲಂಘನೆಯೊಂದಿಗೆ ಮಂಗಲ

ನವರಾತ್ರಿ ಉತ್ಸವದ ಕಾರ್ಯಕ್ರಮಗಳು ಸೀಮೋಲಂಘನೆಯೊಂದಿಗೆ ಮಂಗಲ

ಲೋಕದರ್ಶನ ವರದಿ

ಸವದತ್ತಿ 26: ಪಟ್ಟಣದ ಗಾಂಧಿಚೌಕದ ಲಿಂ.ಬಾಬಣ್ಣ ಹಂಪಣ್ಣವರ ವೇದಿಕೆಯಲ್ಲಿ 43ನೇ ನವರಾತ್ರಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 9ದಿನಗಳ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದು ಮಂಗಳವಾರದಂದು ಸೀಮೋಲಂಘನೆಯೊಂದಿಗೆ ಎಲ್ಲ ಕಾರ್ಯಕ್ರಮಗಳು ಮಂಗಲಗೊಂಡವು.

ಒಂಬತ್ತು ದಿನಗಳವರಗೆ ಪ್ರತಿನಿತ್ಯ ಉಪನ್ಯಾಸ ಮತ್ತು ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ನವರಾತ್ರಿ ಹಬ್ಬಕ್ಕೆ ವಿಶೇಷ ಮೆರಗು ತಂದುಕೊಟ್ಟವು.

ವಿಜಯದಶಮಿಯ ಸೀಮೋಲಂಘನೆಯ ಮೆರವಣಿಗೆಯಲ್ಲಿ ನಾಡದೇವಿ ಭಾವಚಿತ್ರಕ್ಕೆ ಉತ್ಸವ ಸಮಿತಿ ಪದಾಧಿಕಾರಿಗಳು ಮತ್ತು ಗಣ್ಯರಿಂದ  ಸಾಮೂಹಿಕ ಪೂಜೆ ಸಲ್ಲಿಸಿ ಸೀಮೋಲಂಘನಾ ಮೆರವಣಿಗೆಗೆ ಚಾಲನೆ ನೀಡಲಾಯಿತು. 

ಸೀಮೋಲಂಘನೆಯ ಶ್ರೀಶಕ್ತಿ ದೇವಿಯ ಮೆರವಣಿಗೆಯಲ್ಲಿ ನಗರದ ಎಲ್ಲ ದೇವಸ್ಥಾನಗಳ ಪಲ್ಲಕಿಗಳು, ವಿವಿಧ ಮಜಲುಗಳು ತಂಡಗಳು ಭಾಗವಹಿಸಿದ್ದವು. ನಗರದ ಪ್ರಮುಖ ಬೀದಿಗಳಲ್ಲಿ ಸೀಮೋಲಂಘನದ ಮೆರವಣಿಗೆ ಸಂಚರಿಸಿ ಪಟ್ಟಣದ ಗಡಿಭಾಗದಲ್ಲಿ ಬನ್ನಿ ಮುಡಿಯಲಾಯಿತು.

ಉತ್ಸವ ಸಮಿತಿ ಅಧ್ಯಕ್ಷ ಬಸವರಾಜ ಪುರದಗುಡಿ, ಕಾಯರ್ಾಧ್ಯಕ್ಷ ಶಂಕರಗೌಡ ಪಾಟೀಲ, ಉತ್ಸವ ಸಮಿತಿ ಕಾರ್ಯದರ್ಶಿ ಬಸವರಾಜ ಅತ್ತಿಗೇರಿ, ಬಿ.ಎನ್.ಪ್ರಭುನವರ, ಬಸವರಾಜ ಹಂಪಣ್ಣವರ, ಬಸವರಾಜ ಹೂಲಿಕಟ್ಟಿ, ಪ್ರಕಾಶ ಬಾಳೋಜಿ, ಮಹಾಂತೇಶ ಅಮ್ಮಿನಭಾವಿ, ರಾಮಣ್ಣ ರಾಮಪ್ಪನವರ ಹಾಗೂ ಪಟ್ಟಣದ ಗುರು ಹಿರಿಯರು ಸೀಮೋಲಂಘನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು 

ಸುದ್ದಿ ಓದಿ