ರಾಷ್ಟ್ರೀಯ ವಿಜ್ಞಾನ ದಿನಾಚರಣೆ ; ವಿಜ್ಞಾನದ ವಸ್ತು ಪ್ರದರ್ಶನ
ಇಂಡಿ 28 : ತಾಲೂಕಿನ ಚಿಕ್ಕಬೇವನೂರ ಗ್ರಾಮದ ಹೆಚ್ಪಿಎಸ್ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಶನಿವಾರ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಮುಖ್ಯ ಗುರುಮಾತೆ ಸರೋಜಿನಿ ಮಾವಿನಮರ ವಿಜ್ಞಾನ ದಿನಾಚರಣೆ ಕುರಿತು ಮಾತನಾಡಿ, ಸಿ.ವಿ. ರಾಮನ್ ಅವರ ರಾಮನ್ ಎಫೆಕ್ಟ್ ಹಾಗೂ ಹಲವು ವಿಜ್ಞಾನಿಗಳ ಜೀವನ ಚರಿತ್ರೆಯನ್ನು ವಿವರಿಸಿದರು. ವಿಜ್ಞಾನದ ವಸ್ತು ಪ್ರದರ್ಶನ ಏರಿ್ಡಸಿ ಆಯ್ದ ವಿಶೇಷ ಪ್ರಯೋಗಕ್ಕೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿ ಕನ್ಯಾಕುಮಾರಿ ಚಾಬುಕಸವಾರ್ ಪ್ರಥಮ ಸ್ಥಾನ, ಸಹನ ವಾಲಿಕಾರ್ ದ್ವಿತೀಯ ಸ್ಥಾನ, ಅಂಜಲಿ ಮೇಲಿನಮನಿ ಹಾಗೂ ಅಕ್ಷತಾ ವಾಲಿಕಾರ ತೃತೀಯ ಸ್ಥಾನ ಗಳಿಸಿದರು. ನಿರ್ಣಾಯಕರಾಗಿ ಆರ್.ಎಂ. ಮುಜಾವರ ಎಸ್.ಎಸ್. ನಿಪ್ಪಾಣಿ ಕಾರ್ಯನಿರ್ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ಎಂ.ಎಸ್. ತಳವಾರ್ ನೆರವೇರಿಸಿದರು. ಎ.ಸಿ. ಆನೆಗುಂದಿ ವಂದಿಸಿದರು.