ಸಿರುಗುಪ್ಪ

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ

ಸಿರುಗುಪ್ಪ: ಮನುಷ್ಯನ ಅತಿ ಆಸೆ ಏರುತ್ತಿರುವ ಜನಸಂಖ್ಯೆ ವೈಭವೋಪೇತ ಜೀವನದ ಬಯಕೆಗಳು ಪರಿಸರವನ್ನು ಹಾಳು ಮಾಡುತ್ತಿವೆ ನಮ್ಮ ಸುತ್ತ ಮುತ್ತಲಿನ ನೀರು ಗಾಳಿ ಭೂಮಿ ಎಲ್ಲವೂ ಇಂದು ಅತಿ ಹೆಚ್ಚು ಕಲುಷಿತ ಗೊಳ್ಳುತ್ತಿವೆ ಪರಿಸರ ಪ್ರೇಮಿಗಳು ವಿದ್ಯಾವಂತರು ಸರ್ಕಾರಗಳು ಕಾಲದಿಂದ ಕಾಲಕ್ಕೆ ಅನೇಕ ಕ್ರಮಗಳನ್ನು ಕೈಗೊಂಡು ಪರಿಸರವನ್ನು ಮಾಲಿನ್ಯದಿಂದ ರಕ್ಷಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ ಹಾಗಿದ್ದರೂ ಮಲಿನವಾಗುತ್ತಿರುವ ಪರಿಸರ ಇಂದು ಕೇವಲ ಮನುಕುಲಕ್ಕೆ ಅಷ್ಟೇ ಅಲ್ಲದೆ ಇಡೀ ಜಗತ್ತಿನ ಜೀವ ಸಂಕುಲಕ್ಕೆ  ಮಾರಕವಾಗುತ್ತಲೇ ಇದೆ ಆರೋಗ್ಯಕರ ಜೀವನಕ್ಕೆ ಅತಿ ಅಗತ್ಯಗಳಾದ ಗಾಳಿ ನೀರು ಆಹಾರ ವಿಷಪೂರಿತ ವಾಗುತ್ತಿದೆ ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಮೈಸೂರು ಕರ್ನಾ ಟಕ  ರಾಜ್ಯ ಲೋಕ ಶಿಕ್ಷಣ ನಿರ್ದೇಶನಾಲಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಸದಸ್ಯರು ಸಾಮಾಜಿಕ ಕಾರ್ಯಕರ್ತ ಜನ ಅಭಿಪ್ರಾಯ ಪಟ್ಟರು ನಗರದ ಇಬ್ರಾಹಿಂ ಮಂಜೀಲ್ ನಲ್ಲಿ ಅವರು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ನೆನಪಿಸಿ ಮಾತನಾಡುತ್ತಾ ವಾಯು ಮಾಲಿನ್ಯವನ್ನು  ನಿಯಂತ್ರಿಸಬೇಕಿದೆ ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ಸಿಗುವುದು ಕಷ್ಟ ಇಂದು ಪ್ರಾಪಂಚಿಕ ಮಟ್ಟದಲ್ಲಿ ವಾಯುಮಾಲಿನ್ಯದಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಉಸಿರಾಡಲು ಸ್ವಚ್ಛವಾದ ಗಾಳಿ ಸಿಗುತ್ತದೆಯೋ ಇಲ್ಲವೋ ನಮ್ಮ ಜೀವನ ಸುಖಮಯವಾಗಿರ ಬೇಕೆಂದರೆ ಆರೋಗ್ಯ ಉತ್ತಮವಾಗಿರಬೇಕು ಉತ್ತಮ ಆರೋಗ್ಯಕ್ಕೆ ಉತ್ತಮ ಪರಿಸರದ ಅವಶ್ಯಕತೆ ಇದೆ ಪರಿಸರ ರಕ್ಷಣೆ ಎಲ್ಲರ ಹೊಣೆ ಎಂದು ಅಬ್ದುಲ್ ನಬಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು 

ಸುದ್ದಿ ಓದಿ