ರಾಷ್ಟ್ರೀಯ ಕಬಡ್ಡಿ ಕ್ರೀಡಾಕೂಟ: ನಿಟ್ಟೂರ್ ಸೆಂಟ್ರಲ್ ಶಾಲೆ ಪ್ರಥಮ
ರಾಷ್ಟ್ರೀಯ ಕಬಡ್ಡಿ ಕ್ರೀಡಾಕೂಟ: ನಿಟ್ಟೂರ್ ಸೆಂಟ್ರಲ್ ಶಾಲೆ ಪ್ರಥಮ
ರಾಣೇಬೆನ್ನೂರು 25: ಹರಿಯಾಣದ ದತ್ತೂರಿನಲ್ಲಿ ಇತ್ತೀಚೆಗೆ ಜರುಗಿದ ಸಿಬಿಎಸ್‌ಇ ಕಬಡ್ಡಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡು ತಮ್ಮ ಅಪ್ರತಿಮ ಸಾಧನೆ ಮೆರೆದ, ರಾಣೇಬೆನ್ನೂರಿನ ಪ್ರತಿಷ್ಠಿತ ನಿಟ್ಟೂರ್ ಸೆಂಟ್ರಲ್ ಸ್ಕೂಲಿನ ವಿದ್ಯಾರ್ಥಿ ಕ್ರೀಡಾಪಟುಗಳು, ಉತ್ತರ ಪ್ರದೇಶದ ತಂಡವನ್ನು ಸೋಲಿಸುವ ಮೂಲಕ ಪ್ರಥಮ ಸ್ಥಾನ ಗಳಿಸಿ, ಸಾಧನೆ ಮೆರೆದು ನಾಡಿಗೆ ಜಿಲ್ಲೆಗೆ ಮತ್ತು ತಾಲೂಕಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಕಬಡ್ಡಿ ಕ್ರೀಡಾಕೂಟದಲ್ಲಿ ಶಾಲೆಯ ಕ್ರೀಡಾಪಟುಗಳಾದ ಶ್ರೇಷ್ಠ ಟಿ, ಗೌತಮಿ ಎಸ್.ಗುರ್ಪನವರ,
ಚಿಂತನಾ ಎಸ್ ಮರಿಲಿಂಗಣ್ಣನವರ, ನವ್ಯಾ ಮೇಡ್ಲೆರಿ, ಸುಮತಿ ಅಜ್ಜನವರ, ಪಿರಾಂಬಿ ಕಿಲ್ಲೇದಾರ, ಭೂಮಿಕಾ ಕುಸಗೂರ, ಕೃತಜ್ಞ ಗಾಳೇರ, ಚಿನ್ಮಯಿ ಮರಿಗೌಡರ, ಮದಿಹಾ ಕಳ್ಳಾಳ್, ಭೂಮಿಕಾ ಕುಲಕರ್ಣಿ ಮತ್ತಿತರರು ಭಾಗವಹಿಸಿದ್ದರು.
ಸಾಧಕ ವಿದ್ಯಾರ್ಥಿಗಳಿಗೆ ಕಬಡ್ಡಿ ತಂಡದ ತರಬೇತುದಾರ, ದೈಹಿಕ ಶಿಕ್ಷಕ ಪ್ರವೀಣ್ ಎಸ್. ಮ್ಯಾಗಳರ, ದೀಪಾ ಪಾಟೀಲ್, ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ನಿಟ್ಟೂರ, ಆಡಳಿತಾಧಿಕಾರಿ ರವಿ ಹಿರೇಮಠ, ಪ್ರಾಚಾರ್ಯ ಲತಾ ನಿಟ್ಟೂರ, ಉಪ ಪ್ರಾಚಾರ್ಯ ಅಂಜಲಿ ಹರಪನಹಳ್ಳಿ, ಲಕ್ಷ್ಮೀ ನಾಯಕ, ಸೇರಿದಂತೆ ಶಾಲೆಯ ಎಲ್ಲಾ
ಶಿಕ್ಷಕರು ಹಾರ್ದಿಕವಾಗಿ ಅಭಿನಂದಿಸಿ, ಶುಭ ಹಾರೈಸಿದ್ದಾರೆ.