ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ
ಇಂಡಿ: ತಾಲೂಕಿನ ಆಳೂರ ಗ್ರಾಮದ ಆರಾಧ್ಯ ದೈವ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ ಡಿಸೆಂಬರ್ 1 ರಿಂದ 4 ರವರೆಗೆ ನಡೆಯಲಿದೆ.
ಡಿ. 1 ರಂದು ನಂದಿಕೋಲಿಗೆ ರಾತ್ರಿ 12:00 ಘಂಟೆಯಿಂದ ಬಾಸಿಂಗ್ ಕಟ್ಟುವದು, ನಸುಕಿನಜಾವ 4:00ಘಂಟೆಗೆ ಸಕಲ ವಾಧ್ಯ ವೈಭೋಗಳಿಂದ ನಂದಿಬಸವೇಶ್ವರ ದೇವಸ್ಥಾನಕ್ಕೆ ಬಂದು ತಲುಪುವುದು.
ಡಿ. 2 ರಂದು ಬೆಳಗ್ಗೆ 10:00 ಘಂಟೆಗೆ ಹರದೇಶಿ, ನಾಗೇಶಿ ಡಪ್ಪಿನ ಪದ, ಭಕ್ತರಿಂದ ನೈವೆದ್ಯ, ಅಕ್ಕಿಪೂಜೆ ಕಟ್ಟುವದು. ತದನಂತರ ಬೆಳಗ್ಗೆ 11:00 ಘಂಟೆಗೆ ಧರ್ಮ ಸಭೆ ಜರಗುವುದು. ರಾತ್ರಿ 10:30 ಘಂಟೆಗೆ ಅಲ್ಲಾದಿನ್ ಡ್ರಾಮಾ ಸಿನ್ಸ ತಡವಲಗಾ ಇವರ ಭವ್ಯ ರಂಗ ಸಜ್ಜಿಕೆಯಲ್ಲಿ ಶ್ರೀ ನಂದಿಬಸವೇಶ್ವರ ನಾಟ್ಯ ಸಂಘ ಆಳೂರ ಇವರಿಂದ ಮುಡಿಯೇರದ ಮಲ್ಲಿಗೆ ಸಾಮಾಜಿಕ ನಾಟಕ ನಡೆಯುವುದು.
ಡಿ.3ರಂದು ಬೆಳಗ್ಗೆ 8:00 ಘಂಟೆಗೆ ಶ್ರೀ ನಂದಿಬಸವೇಶ್ವರ ದೇವಸ್ಥಾನದಿಂದ ಸಕಲ ವಾಧ್ಯ ವೈಭೋಗಳಿಂದ ನಂದಿಕೋಲು, ಪುರವಂತರೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ನಡೆದು ನಂತರ ದೇವರ ಗುಡಿಗೆ ತಲುಪುವುದು. ಹಾಗೂ ಭಕ್ತರಿಂದ ಸಾಯಂಕಾಲ 5ಘಂಟೆಗೆ ನಂದಿಕೋಲದ ಭಾಸಿಂಗ ಇಳಿಸುವುದು ಭಕ್ತರಿಂದ ಸಿಡಿಗಾಯಿ ಒಡೆಯುವದು.
ಡಿ. 4 ರಂದು ಮಧ್ಯಾಹ್ನ 1:00 ಘಂಟೆಗೆ ಪ್ರಸಿದ್ದ ಜಂಗಿ ಕುಸ್ತಿಗಳು ಜರಗುವವು. ವಿಶೇಷ ಕುಸ್ತಿ ಪಟುಗಳಿಗೆ ದಿ. ಗುರುಶಾಂತ ರಾ ನಾಟೀಕಾರ ಇವರ ಸ್ಮರಣಾರ್ಥಕ ಬೆಳ್ಳಿ ಖಡಗ ಕೊಡುವುದು. ಸಂಜೆ 7:00 ಘಂಟೆಗೆ ಮಹಾವಿರ ಕೀರಣಗಿ ಹಾಗೂ ನಂದಿಬಸವೇಶ್ವರ ಗೆಳೆಯರ ಬಳಗದಿಂದ ಚಿತ್ರ-ವಿಚಿತ್ರ ಮದ್ದು ಸುಡುವುದು ಭಕ್ತಾದಿಗಳು ನಂದಿಬಸವೇಶ್ವರ ಜಾತ್ರಾಮಹೋತ್ಸವಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗಬೇಕು ಎಂದು ರಾಜಶೇಖರ ನಾಟೀಕಾರ ಪ್ರಕಟಣೆಗೆ ತಿಳಿಸಿದ್ದಾರೆ.