ಕಾಗವಾಡ

ಯುವಕರಲ್ಲಿ ಆಧ್ಯಾತ್ಮೀಕ ಭಾವನೆ ಹೆಚ್ಚಿಸಲು ಪ್ರೇರಣೆ: ಸರಡೆ

ಯುವಕರಲ್ಲಿ ಆಧ್ಯಾತ್ಮೀಕ ಭಾವನೆ ಹೆಚ್ಚಿಸಲು ಪ್ರೇರಣೆ: ಸರಡೆ

ಲೋಕದರ್ಶನ ವರದಿ

ಶೇಡಬಾಳ 4: ಹಬ್ಬ ಹರಿದಿನಗಳು, ಉತ್ಸವಗಳು ನಮ್ಮ ದೇಶದ ಸಂಸ್ಕೃತಿ ಹಾಗೂ ಪರಂಪರೆಯ ಸಂಕೇತವಾಗಿದ್ದು, ಯುವಕರಲ್ಲಿ ಆಧ್ಯಾತ್ಮಕ ಭಾವನೆ ಹೆಚ್ಚಿಸಲು ಪ್ರೇರಣೆಯಾಗಿವೆ ಎಂದು ಶಿರಗುಪ್ಪಿಯ ಅಮೋಲ ಜನಕಲ್ಯಾಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ವಿಶ್ವಹಿಂದೂ ಪರಿಷತ್-ಬಜರಂಗದಳದ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷರಾದ ಡಾ. ಅಮೋಲ ಸರಡೆ ಹೇಳಿದರು.

ಅವರು ರವಿವಾರ ದಿ. 04 ರಂದು ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಗಣೇಶ ಹಬ್ಬದ ಸವಿನೆನಪಿಗಾಗಿ ಮನೆ ಮನೆಗೆ ಸಿಹಿ ಹಂಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಬಾಲಗಂಗಾಧರ ತಿಲಕರು ಯುವಕರಲ್ಲಿ ದೇಶ ಭಕ್ತಿ, ಸಂಘಟನೆ ವೃದ್ಧಿಸುವಗೋಸ್ಕರ ಸಾರ್ವಜನಿಕ ಗಣೇಶೋತ್ಸವನ್ನು ಪ್ರಾರಂಭಿಸಿದರು. ಅವರು ಅಂದು ಪ್ರಾರಂಭಿಸಿದ ಸಾರ್ವಜನಿಕ ಗಣೇಶೋತ್ಸವವು ಭಾರತ ದೇಶದ್ಯಾಂತ ಪ್ರತಿ ಗ್ರಾಮಗಳಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಯುವಕರು ಹೆಚ್ಚಿನ ಪ್ರಮಾಣದಲ್ಲಿ ಧಾರ್ಮಿಕ  ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ದೇಶದ ಅಖಂಡತೆ, ಸಾರ್ವಭೌಮತ್ವ, ಸಹೋದರತ್ವ ಭಾವನೆಯನ್ನು ಬೆಳಿಸಿಕೊಂಡು ಭಾರತಾಂಬೆಯ ಸೇವೆಗೆ ಸದಾ ಸನ್ನದ್ಧಾರಿಗಿರುವಂತೆ ಮನವಿ ಮಾಡಿಕೊಂಡರು. ಸಾರ್ವಜನಿಕರಲ್ಲಿ ಧಾರ್ಮಿಕ  ಭಾವನೆ ವೃದ್ಧಿಸುವ ಗೋಸ್ಕರ ಅಮೋಲ ಜನಕಲ್ಯಾಣ ಫೌಂಡೇಶನ್ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಮಯದಲ್ಲಿ ಅಮೋಲ ಜನಕಲ್ಯಾಣ ಪ್ರತಿಷ್ಠಾನದ ಕಾರ್ಯಕರ್ತರು, ಗಣೇಶ ಮಂಡಳಗಳ ಕಾರ್ಯಕರ್ತರು, ಗ್ರಾಮಸ್ಥರು ಸೇರಿದಂತೆ ನೂರಾರು ಯುವಕರು, ಭಾಗವಹಿಸಿದ್ದರು 

ಸುದ್ದಿ ಓದಿ