ಗವಿಮಠದಲ್ಲಿ ಮಾಸಿಕ 184ನೇ ಶಿವಾನುಭವ ಕಾರ್ಯಕ್ರಮ
ಲೋಕದರ್ಶನ ವರದಿ
ಹೂವಿನಹಡಗಲಿ07: ಪಟ್ಟಣದ ಗವಿಮಠದಲ್ಲಿ ಮಾಸಿಕ 184 ನೇ ಶಿವಾನುಭವ ಕಾರ್ಯ ಕ್ರಮ ಜರುಗಿತು. ಮೌನೇಶ ಬಡಿಗೇರ ಮಾತನಾಡಿ ಗವಿಸಿದ್ದೇಶ್ವರರ ಅನುಭಾವದ ವಿಚಾರ ಧಾರೆಗಳು. ನಮ್ಮನ್ನು ಸನ್ಮಾರ್ಗದಲ್ಲಿ ಕೊಂಡಿಯುತ್ತವೆ.ಈ ನೆಲದ ಸೂಗಡಿನಲ್ಲಿ ನೂರಾರು ಸಾಧು-ಸಂತರ ವೇದಾಂತ ಮಾತುಗಳು. ನಿಜಗುಣ ಶಿವಯೋಗಿಗಳ, ಸಿದ್ಧಾರೂಢರ, ಸಾಧುಸಂತರ ಗವಿಸಿದ್ದೇಶ್ವರರ ಅನುಭಾವದ ವಿಚಾರ ಧಾರೆಗಳು. ನಮ್ಮನ್ನು ಸನ್ಮಾರ್ಗದಲ್ಲಿ ಕೊಂಡಿಯುತ್ತವೆ ಎಂದರು.ಗುರುವಿನ ಭಕ್ತಿಯಲ್ಲಿ ತಲ್ಲೀನರಾಗಿ ಆಧ್ಯಾತ್ಮದ ಸವಿಸವಿಯುತ್ತಿದ್ದರೆ ಜೀವನ ಆನಂದಮಯವಾಗುತ್ತದೆ ಹಡಗಲಿಯ ಗವಿಮಠ ಬಡವಬಲ್ಲಿದ ಅನ್ನದೆ ಸಾವಿರಾರು ಜನರ ಅನ್ನ ಪ್ರಸಾದ, ಸಹಭೋಜನದ ಮೆರಗು. ದೀಪಗಳಿಂದ ಕಂಗೊಳಿಸುತ್ತಿದೆ ಎಂದರು. ಉಪನ್ಯಾಸಕಿ ಡಾ, ಸಂಗೀತಾ ಹಿರೇಮಠ ಮುಂಡರಗಿ ಅನ್ನದಾನೀಶ್ವರಮಠ ನೂರಾರು ವರ್ಷಗಳ ಭವ್ಯ ಇತಿಹಾಸ ಭವ್ಯ ಪರಂಪರೆಯನ್ನು ಹೊಂದಿ ಇಂದಿಗೂ ಜನಮಾನಸದಲ್ಲಿ ಭಕ್ತಿ, ಭಾವ, ಅಭಿಮಾನಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಮುನ್ನೇಡೆಯುತ್ತಿರುವ ಮಠವಾಗಿದೆ. ಅದರಲ್ಲೂ ದಾಸೋಹ ಶಿಕ್ಷಣ ಅರಿವು, ಆಧ್ಯಾತ್ಮ ಚಿಂತನೆಯಲ್ಲಿ ನಾಡಿನ ಮಠ ಪರಂಪರೆಯ ಸಂಸ್ಥಾನಗಳಲ್ಲಿ ಒಂದಾದ ಮುಂಡರಗಿಯ ಅನ್ನದಾನೇಶ್ವರಮಠ. ಎಂದರುಕಾರ್ಯಕ್ರಮದಉದ್ಘಾಟನೆಯನ್ನು ತಳಕಲ್ಲಿನ ಗುತ್ತಿಗೆದಾರರಾದ ನಂದಿಹಳ್ಳಿ ಕರಿಬಸಪ್ಪ ನವರು ಸಸಿಗಳಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಹಡಗಲಿ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಡಾ ಹಿರಿಶಾಂತವೀರ ಮಹಾಸ್ವಾಮಿಗಳು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಸುರೇಶ ಇಟಗಿಮಠ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಧಾರವಾಡ, ಆಶೋಕ ಎಸ್ ಗಡಾದ ಉಪನ್ಯಾಸಕರು, ಹರಿಶ್ವರಯ್ಯ ರುದ್ರಯ್ಯ ಹಿರೇಮಠ ನಿವೃತ್ತ ಇಂಜಿನಿಯರ್ ಹುಬ್ಬಳ್ಳಿ ವಿಶ್ವೇಶ್ವರಯ್ಯ ರುದ್ರಯ್ಯ ಹಿರೇಮಠ ಹುಬ್ಬಳ್ಳಿ, ಶಶಿಕಲಾ ತ್ರಿಲೋಚನ ಹಿರೇಮಠ ಹುಬ್ಬಳ್ಳಿ ಗೌರಿಶಂಕರ ರುದ್ರಯ್ಯ ಹಿರೇಮಠ ಹೂವಿನಹಡಗಲಿ ವಿಜಯಕುಮಾರ ರುದ್ರಯ್ಯ ಹಿರೇಮಠ ಹುಬ್ಬಳ್ಳಿ ಚಂದ್ರಮೌಳಿ ಸ್ವಾಮಿ ರುದ್ರಯ್ಯ ಹಿರೇಮಠ ಹೂವಿನಹಗಲಿ ಸೇರಿದಂತೆ ಇತರರು ಭಾಗವಹಿಸಿದ್ದರು. 2023-2024 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗುರುಗಳಿಗೆ. ಭಕ್ತಾದಿಗಳಿಗೆ ಗುರುರಕ್ಷೆಯನ್ನು ಮಠದಿಂದ ನೀಡಿ ಗೌರವಿಸಲಾಯಿತು