ರಾಣೆಬೆನ್ನೂರ

ಕುಡಿಯುವ ನೀರಿನಲ್ಲಿ ಕಾಲುವೆ ನೀರು ಮಿಶ್ರಣ: ಹಾವೇರಿ ಗ್ರಾಮದ ನಾಗರಿಕರ ಆಕ್ರೋಶ

ಕುಡಿಯುವ ನೀರಿನಲ್ಲಿ ಕಾಲುವೆ ನೀರು ಮಿಶ್ರಣ: ಹಾವೇರಿ ಗ್ರಾಮದ ನಾಗರಿಕರ ಆಕ್ರೋಶ

ಕುಡಿಯುವ ನೀರಿನಲ್ಲಿ ಕಾಲುವೆ ನೀರು ಮಿಶ್ರಣ: ಹಾವೇರಿ ಗ್ರಾಮದ ನಾಗರಿಕರ ಆಕ್ರೋಶ  

ರಾಣೇಬೆನ್ನೂರು 12: 12ತಾಲ್ಲೂಕಿನ ಹಲಗೇರಿ ಗ್ರಾಮದ ಜನತಾ ಪ್ಲಾಟ್ಗೆ ಪೂರೈಕೆ ಮಾಡುವ ಕುಡಿಯುವ ನೀರಿನಲ್ಲಿ ಕಾಲುವೆ ನೀರು ಮಿಶ್ರಿತವಾಗಿ ಬರುತ್ತಿರುವುದನ್ನು ವಿರೋಧಿಸಿ  ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘಟನೆಯ ಪದಾಧಿಕಾರಿಗಳು ಹಾಗೂ ಜನತಾ ಪ್ಲಾಟ್ ಜನತೆ  ಹಲಗೇರಿ - ತುಮ್ಮಿನಕಟ್ಟಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.15 ದಿನಗಳಿಂದ ಕುಡಿಯುವ ನೀರಿನಲ್ಲಿ ಕಾಲುವೆ ನೀರು ಮಿಶ್ರಿತವಾಗಿ ಸರಬರಾಜು ಆಗುತ್ತಿದೆ. ಕುಡಿಯುವ ನೀರು ವಾಸನೆಯಿಂದ ಕೂಡಿದೆ. ಕಲುಷಿತ ನೀರು ಸೇವನೆಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದರೂ ಇದುವರೆಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಏನೂ ಕ್ರಮ ಕೈಗೊಂಡಿಲ್ಲ. ಕಾರಣ ಇಂದು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದೇವೆ’ ಎಂದು ಪ್ರತಿಭಟನಕಾರರು ತಿಳಿಸಿದರು.ಹಲಗೇರಿ ಗ್ರಾಮೀಣ ಠಾಣೆ ಪಿಎಸ್‌ಐ ಪರಶುರಾಮ ಲಮಾಣಿ ಅವರು ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಪ್ರತಿಭಟನೆಕಾರರ ಜೊತೆ ಮಾತುಕತೆ ನಡೆಸಿದರು. ಒಂದು ವಾರದೊಳಗೆ ಪೈಪಲೈನ್ ದುರಸ್ತಿಗೊಳಿಸಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಕುರಿತು ಪಿಡಿಒ ಭರವಸೆ ನೀಡಿದರು.ಹಲಗೇರಿ ಕರವೇ ಅಧ್ಯಕ್ಷ ಸಂತೋಷ ಕನ್ನಪ್ಪಳವರ, ಸಂಜೀವ ಕನವಳ್ಳಿ, ಕುಮಾರ ನಂದಿತಾವರೆ, ಪ್ರಸನ್ನ ಗೋಪನಾಳ, ಸೋಮಣ್ಣ ಕನ್ನಪ್ಪಳ್ಳವರ,, ಸಂತೋಷ ನೇಸ್ವಿ, ರಾಜು ಚಳಗೇರಿ, ಪಾಪಣ್ಣ ಗೋನಾಳ, ಪ್ರಕಾಶ ಕುಂಬಾರ, ಹನುಮಪ್ಪ, ಮಂಜಪ್ಪ ಕನವಳ್ಳಿ, ಮಂಜುನಾಥ ಕುಡುಪಲಿ, ರವಿ ದಾವಣಗೆರೆ, ಪ್ರಕಾಶ ದಾನಪ್ಪನವರ ಸೇರಿದಂತೆ ಗ್ರಾಮದ ಮತ್ತಿತರರು. ವೇದಿಕೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ