ಕಾಗವಾಡ

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಶ್ರೀಮಂತ ಚಾಲನೆ

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಶ್ರೀಮಂತ ಚಾಲನೆ

ಲೋಕದರ್ಶನ ವರದಿ

ಕಾಗವಾಡ ಜುಲೈ 14:  ಕಾಗವಾಡ ಮತಕ್ಷೇತ್ರ ವ್ಯಾಪ್ತಿಯ ಶಿರಗುಪ್ಪಿ-ಶೇಡಬಾಳ, ಲೋಕುರ-ನರವಾಡ ಗ್ರಾಮಗಳ ಮಧ್ಯದ ರಸ್ತೆ ಅಭಿವೃದ್ಧಿಗಾಗಿ 3.20 ಕೋಟಿರೂ. ವೆಚ್ಚದಲ್ಲಿ ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲ ಇವರು ಗುದಲಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು. ಮಂಗಳವಾರರಂದು ಕಾಗವಾಡ ಶಾಸಕರು ಹಾಗೂ ಸಚಿವ ಶ್ರೀಮಂತ ಪಾಟೀಲ ಇವರು ವಿಶೇಷ ಪ್ರಯತ್ನಿಸಿ, ಪ್ರವಾಹದಿಂದ ಹಾಳಾದ ರಸ್ತೆ ಅಭಿವೃದ್ಧಿಗಾಗಿ5054 ಯೋಜನೆಯಡಿಯಲ್ಲಿ 3.20 ಕೋಟಿ ರೂ. ವೆಚ್ಚದಲ್ಲಿ ಶಿರಗುಪ್ಪಿ-ಶೇಡಬಾಳ, ಲೋಕುರ-ನರವಾಡ ಮಾರ್ಗದಲ್ಲಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಕಳೆದ ಅನೇಕ ವರ್ಷಗಳಿಂದ ಶಿರಗುಪ್ಪಿ-ಶೇಡಬಾಳ ರಸ್ತೆ ಹದಿಗೆಟ್ಟಿದ್ದು, ಇಲ್ಲಿಯ ಜನರಿಗೆ ಸಂಚರಿಸಲು ಕಷ್ಟವಾಗುತ್ತಿತ್ತು. 9 ಕಿ.ಮೀ ಅಂತರದ ರಸ್ತೆ ಅಭಿವೃದ್ಧಿಗಾಗಿ ರಾಜ್ಯ ಸಕರ್ಾರದಿಂದ 5054 ಯೋಜನೆಯಡಿಯಲ್ಲಿ 2 ಕೋಟಿ ಅನುದಾನ ಮಂಜೂರುಗೊಳಿಸಿಕೊಂಡಿದ್ದೇನೆ. ಇನ್ನೂಳಿದ ರಸ್ತೆಗಾಗಿ ಪ್ರಧಾನಮಂತ್ರಿ ರಸ್ತೆ ಅಭಿವೃದ್ಧಿಯೋಜನೆಯಲ್ಲಿ ಅನುದಾನ ಮಂಜೂರುಗೊಳಿಸಿ, ಪೂರ್ಣಗೊಳಿಸುತ್ತೇನೆ ಎಂದರು.

ಇದೇ ರೀತಿ ಲೋಕರು-ನರವಾಡ ಮಧ್ಯದ ರಸ್ತೆ ಅಭಿವೃದ್ಧಿಗಾಗಿ 5054 ಯೋಜನೆಯಡಿಯಲ್ಲಿ 1.20 ಕೋಟಿ ರೂ. ಅನುದಾನ ಮಂಜೂರುಗೊಳಿಸಿಕೊಂಡಿದ್ದೇನೆ. ಶೀಘ್ರದಲ್ಲಿ ಈ ಮಾರ್ಗದ ರಸ್ತೆ ಗುಣಮಟ್ಟದಾಗಿ ನಿಮರ್ಿಸಲು ಗುತ್ತಿಗೆ ದಾರರಿಗೆ, ಅಭಿಯಂತರಿಗೆ ಸೂಚನೆ ನೀಡಿದರು. ಲೋಕುರ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪೂಜೆ ಸಲ್ಲಿಸಲು ಆಗಮಿಸಿದ್ದ ಸಚಿವರನ್ನು ಪಟಾಕಿ ಸಿಡಿಸಿ, ಸಿಹಿ ಹಂಚಿ, ಸ್ವಾಗತಿಸಿ ಬರಮಾಡಿಕೊಂಡರು.

ಶಿರಗುಪ್ಪಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅಥಣಿ ಪಿಎಲ್ಡಿ ಬ್ಯಾಂಕ್ಅಧ್ಯಕ್ಷ ಶೀತಲ ಪಾಟೀಲ, ನ್ಯಾಯವಾದಿ ಅಭಯ ಕುಮಾರ ಅಕಿವಾಟೆ, ಆರ್.ಎಸ್.ಪಾಟೀಲ, ಶಿವಾನಂದ ಪಾಟೀಲ, ರಾಮಗೌಡಾ ಪಾಟೀಲ, ಸುಭಾಷ ಮೋನೆ, ಅಶೋಕ ಕಾತ್ರಾಳೆ, ಬೊಮ್ಮನ್ನಾ ಚೌಗುಲೆ, ಅಭಿಯಂತರಾದ ಪ್ರವೀಣ ಪಾಟೀಲ, ಸೇರಿದಂತೆ ಅನೇಕರು ಇದ್ದರು.

ಲೋಕುರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ಸುಧಾಕರ ಭಗತ್, ರಾಮು ಭಗತ್, ಶಂಕರ ಮಮದಾಪುರೆ, ಬಾಳು ಮಾಲಗಾಂವೆ, ಗುತ್ತಿಗೆದಾರರಾದ ನಾನಾಸಾಹೇಬ ಅವತಾಡೆ, ಜಯಸಿಂಗ ಭಗತ್, ಪಂಚಾಯತಿ ರಾಜ್ಯಇಲಾಖೆಯ ಅಭಿಯಂತರಾದ ಎಂ.ಎಸ್.ಮೇತ್ರಿ, ಪ್ರಶಾಂತ ಗಂಗಧರ, ಸೇರಿದಂತೆ ಅನೇಕರು ಇದ್ದರು.

ಸುದ್ದಿ ಓದಿ