ಸಿದ್ದರಾಮಯ್ಯನವರ ಭಾವಚಿತ್ರಕ್ಕೆ ಶಿರಭಿಷೇಕ: ಪಟಾಕಿ ಸಿಡಿಸಿ ಸಂಭ್ರಮ
ಇಂಡಿ: ರಾಜ್ಯ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಇಂಡಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಿದ್ದರಾಮಯ್ಯನವರ ಭಾವಚಿತ್ರಕ್ಕೆ ಶಿರಭಿಷೇಕ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಹಾಲುಮತ ಸಮಾಜದ ಮುಖಂಡ ಜಟ್ಟಪ್ಪ ರವಳಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಕ್ಕೆ ಬಂದಿದ್ದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ ಪಕ್ಷ ಘೋಷಿಸಿದ ಐದು ಗ್ಯಾರಂಟಿಗಳನ್ನು ಸಹ ಕಾಂಗ್ರೆಸ್ ಪಕ್ಷ ಈಡೇರಿಸುತ್ತದೆ ಸಿದ್ದರಾಮಯ್ಯನವರ ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿದ್ದು ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರಿಗೆ ಸಂತಸ ತಂದಿದೆ ಎಂದರು.
ಸಾಯಬಗೌಡ ಪಾಟೀಲ, ಸಿದರಾಯ ಐರೋಡಗಿ, ಭೀರಪ್ಪ ನಾವದಗಿ, ಭೀರಪ್ಪ ಪೂಜಾರಿ, ಯಲ್ಲಪ್ಪ ತಾವರಖೇಡ, ಸತ್ತಾರ ಬಾಗವಾನ, ಹಣಮಂತ ಕೊಡತೆ, ರುಕ್ಮುದ್ದೀನ ತದ್ದೆವಾಡಿ, ಗೋಪಾಲ ಪೂಜಾರಿ, ಯಲ್ಲಾಲಿಂಗ ಜೋತಗೊಂಡ, ನಿಂಗಪ್ಪ ಪೂಜಾರಿ, ಸುಭಾಸ ಅಚ್ಚಿಗಾರ, ಶಾಂತಪ್ಪ ಹಡಪದ, ರಾವುತಪ್ಪ ಆಸಂಗಿಹಾಳ, ಯಮುನಾಜಿ ಸಾಳುಂಕೆ, ಗಂಗಾಧರ ಹಲಸಂಗಿ, ದಾದಾಸಾಬ ಚೌಧರಿ, ನಾಗಪ್ಪ ಸಂಗೋಗಿ, ಮುದಕಪ್ಪ ಪುಜಾರಿ, ಜಟ್ಟೆಪ್ಪ ಪೂಜಾರಿ, ಸಿದ್ದಪ್ಪ ಗುಡ್ಲ, ಜಾಂಗೀರ ಸೌದಾಗಾರ, ಗಿರಿಮಲ್ಲ ಹಿರೆಕುರುಬರ ಸೇರಿದಂತೆ ಅನೇಕ ಕಾಂಗ್ರೇಸಿನ ಕಾರ್ಯಕರ್ತತರು ಇದ್ದರು.