ರಾಣೆಬೆನ್ನೂರ

ಉತ್ತರದ ಮೀರಾ ದಕ್ಷಿಣದ ಅಕ್ಕಮಹಾದೇವಿ ಸ್ತ್ರೀ ಕುಲದ ವೈರಾಗ್ಯ ನಿಧಿಗಳು: ಹೊನ್ನಾಳಿ ಶ್ರೀಗಳು

ಉತ್ತರದ ಮೀರಾ ದಕ್ಷಿಣದ ಅಕ್ಕಮಹಾದೇವಿ ಸ್ತ್ರೀ ಕುಲದ ವೈರಾಗ್ಯ ನಿಧಿಗಳು: ಹೊನ್ನಾಳಿ ಶ್ರೀಗಳು

ಲೋಕದರ್ಶನ ವರದಿ

ರಾಣೇಬೆನ್ನೂರು 07: ಉತ್ತರದ ಮೀರಾ.ದಕ್ಷಿಣದ ಅಕ್ಕಮಹಾದೇವಿಯರು ಸ್ತ್ರೀ ಕುಲದ ವೈರಾಗ್ಯ ನಿಧಿಗಳು. ಎಂದು. ಷ.ಬ್ರ.ಡಾ. ಒಡೆಯರ್ ಚನ್ನಮಲ್ಲಿಕಾರ್ಜು ನ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.  ಅವರು ಮೃತ್ಯುಂಜಯ  ನಗರದ ಶ್ರೀ ಚನ್ನೇಶ್ವರ ಮಠದಲ್ಲಿ ನಡೆದ ದವನದ ಹುಣ್ಣಿಮೆ ಮಾಸಿಕ ಧರ್ಮ ಸಭೆ  ಬೇಸಿಗೆ ಧಾರ್ಮಿ ಕ ತರಬೇತಿ ಶಿಬಿರದ ಉದ್ಘಾಟನಾ  ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ, ಮಾತನಾಡಿದರು.

      ಭಾರತೀಯ ಧಾರ್ಮಿಕ  ಸಂಸ್ಕೃತಿಯ ಪರಂಪರೆಯಲ್ಲಿ ಉತ್ತರದ ಮಿರಾಭಾಯಿ. ಅವರು ಮೀರಾಕೆ ಪ್ರಭು ಗಿರಿಧರ ಸಾಗರ ಎಂದು ಸ್ತುತಿಸಿದರೆ ಇನ್ನು ದಕ್ಷಿಣದಲ್ಲಿ ಅಕ್ಕಮಹಾದೇವಿ ಅವರು ಶ್ರೀ ಚನ್ನಮ್ಮಲ್ಲಿಕಾರ್ಜುನನ್ನು ಸ್ತುತಿಸುತ್ತ ತಮ್ಮೆಲ್ಲ ಅಭಿಪ್ರಾಯಗಳನ್ನು ಕಾವ್ಯರೂಪದಲ್ಲೇ ಅಭಿವ್ಯಕ್ತಪಡಿಸಿದ್ದಾರೆ. ಅಕ್ಕಮಹಾದೇವಿ ಬದುಕುವುದಾದರೆ ಶ್ರೀ ಚನ್ನಮಲ್ಲಿಕಾರ್ಜು ನನಿಗಾಗಿ ಬದುಕಬೇಕು ಬದುಕನ್ನು ವ್ಯರ್ಥ ಮಾಡಬಾರದು ಚೆನ್ನಮಲ್ಲಿಕಾಜರ್ು ನನೇ ತನ್ನ ಪತಿ ಎನ್ನುತ್ತಾ  ಸುಖದ ಜೀವನವನ್ನು ತ್ಯಾಗ ಮಾಡಿ  ಆದರ್ಶಗಳನ್ನು ಮೆರೆದಿದ್ದಾಳೆ, ಅಕ್ಕಮಹಾದೇವಿಯ ಜೀವನದ ಆದರ್ಶಗಳನ್ನು  ನಾವೆಲ್ಲರೂ ಪಾಲಿಸಬೇಕಾದ ಇಂದಿನ ಅಗತ್ಯವಿದೆ ಎಂದರು. 

     ಬೇಸಿಗೆಕಾಲ  ಬಂದಿದೆ ಚೆನ್ನೇಶ್ವರ ಮಠದ ಸಂಸ್ಕೃತಿ ಪ್ರಸಾರ ಪರಿಷತ್ತು ಪ್ರತಿ ವರ್ಷದಂತೆ ಈ ವರ್ಷವೂ ಸಹ, ಆಚಾರ ವಿಚಾರ, ಅಯ್ಯಾಚಾರ, ಪೂಜೆ ಪುನಸ್ಕಾರ, ಧರ್ಮ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹಿರಿಯ ಪೂಜ್ಯರು ಹಾಕಿಕೊಟ್ಟಿರುವ ಸತ್ಸಂಪ್ರದಾಯವನ್ನು ಪುನ: ಪ್ರಾರಂಭಿಸಿದ್ದೇವೆ. ಸಮಯ ವ್ಯರ್ಥ ಮಾಡದೇ ಮಕ್ಕಳು ಈ ಬೇಸಿಗೆ ಧಾರ್ಮಿಕ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಬೇಕು ಮತ್ತು ಉದ್ದೇಶಿತ  ಯೋಜನೆಯ ಸದುಪಯೋಗವನ್ನು ಪಡೆಯಲು ಮುಂದಾಗಬೇಕು ಎಂದು ಶ್ರೀಗಳು ಕರೆ ನೀಡಿದರು. 

     ನಿವೃತ್ತ ಉಪನ್ಯಾಸಕಿ    ರೇಣುಕಾ ಸಂಕನಗೌಡರ ಅವರು ವೈರಾಗ್ಯದ ಸಿರಿ ಅಕ್ಕಮಹಾದೇವಿ  ವಿಷಯ ಕುರಿತು, ಸಾಧ್ಯಂತವಾಗಿ ಮಾತನಾಡಿದರು. ಪ್ರಸಾದ ಸೇವಾಕರ್ಥ  ರಾಮಣ್ಣ ಪಾಗಾದರ ಅವರು ಮಾಸಿಕ ಧರ್ಮಸಭೆ ಉದ್ಘಾಟಿಸಿ ಚಾಲನೆ ನೀಡಿದರು. ಕದಳಿ ವೇದಿಕೆ ಮತ್ತು ದಾನೇಶ್ವರಿ ಜಾಗೃತ ಅಕ್ಕನ ಬಳಗದವರು ತೊಟ್ಟಿಲ ಪೂಜೆ ನಾಮಕರಣ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಸಿದರು. ದವನದ ಹುಣ್ಣಿಮೆಯ ಧಾರ್ಮಿಕ ಸೇವ ಕಾರ್ಯವನ್ನು ಲಿಂ. ಲೀಲಾವತಿ ಹಿರೇಮಠ ಮತ್ತು.ಅ.ಸಿ. ಹಿರೇಮಠ ಮತ್ತು ಮಕ್ಕಳು  ಸುನಂದಮ್ಮ ಕುಟುಂಬದವರು ನೆರವೇರಿಸಿದರು. 

   ವೇದಿಕೆಯಲ್ಲಿ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ  ವಿ.ವಿ.ಹರಪನಹಳ್ಳಿ, ಆರ್ಬಿ.ಪಾಟೀಲ್, ಜಗದೀಶ್ ಮಳೆ ಮಠ, ಸುಮಾ ಗೌರಿಶಂಕರ ಸ್ವಾಮಿ ನೆಗಳೂರು ಮಠ, ನಿವೃತ್ತ  ಶಿಕ್ಷಕ ಜೆ.ಎಂ,ಮಠದ, ವೇ.ಮೋ. ಹಾಲಸಿದ್ದಯ್ಯ ಶಾಸ್ತ್ರಿಗಳು, ಸೇರಿದಂತೆ  ಶ್ರೀಮಠದ ಆಡಳಿತ ಮಂಡಳಿ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು. ಶಿಬಿರಾರ್ಥಿ ಗಳ ಪಾಲಕರು ಉಪಸ್ಥಿತರಿದ್ದರು ಸ್ಥಳೀಯ ಕಲಾವಿದರು ಸಂಗೀತ ಸೇವೆ ಸಲ್ಲಿಸಿದರು. ವಿ.ವಿ. ಹರಪನಹಳ್ಳಿ ಸ್ವಾಗತಿಸಿ, ಉಪನ್ಯಾಸಕಿ.ಕಸ್ತೂರಮ್ಮ ಪಾಟೀಲ್ ನಿರೂಪಿಸಿ, ವಂದಿಸಿದರು 

ಸುದ್ದಿ ಓದಿ