ಇಂಡಿ

ಮಾರುತೇಶ್ವರ ಜಾತ್ರಾ ಮಹೋತ್ಸವ ಆರಂಭ

ಮಾರುತೇಶ್ವರ ಜಾತ್ರಾ ಮಹೋತ್ಸವ ಆರಂಭ
ಮಾರುತೇಶ್ವರ ಮೂರ್ತಿ

ಇಂಡಿ: ತಾಲೂಕಿನ ಬೋಳೆಗಾಂವ ಗ್ರಾಮದ ಮಾರುತೇಶ್ವರ ಜಾತ್ರಾ ಮಹೋತ್ಸವ ಇದೇ ಡಿ. 3ಶನಿವರರದಿಂದ ಡಿ. 5 ಸೋಮವಾರದವರೆಗೆ ಜರುಗಲಿದೆ.

ಡಿ. 3ರ ಶನಿವಾರ ಬೆಳಿಗ್ಗೆ 10 ಘಂಟೆಗೆ ದೇವಸ್ಥಾನ ಕಳಸಾರೋಹಣ ಹಾಗೂ ಸಪ್ತಾಹದೊಂದಿಗೆ ಮಣಿ ಏರುವುದು, ನಂತರ ಕಬಡ್ಡಿ ಪಂದ್ಯಾವಳಿ ಜರುಗುವುದು,  ತದ ನಂತರ ಭಜನಾ ಕಾರ್ಯಕ್ರಮ ಜರುಗಿತು.

ಡಿ. 4 ಭಾನುವಾರ ಬೆಳಿಗ್ಗೆ 10 ಘಂಟೆಗೆ ಭೀಮಾಜಲದೊಂದಿಗೆ ಸಪ್ತಾಹ ಮಂಗಲಗೊಳ್ಳುವುದು. ತದನಂತರ ಮದ್ಯಾಹ್ನ 12 ಘಂಟೆಗೆ ಎಲೆಪೂಜಾ ಕಟ್ಟುವುದು, ಮದ್ಯಾಹ್ನ 1 ಘಂಟೆಯಿಂದ ರಾತ್ರಿ 8 ಘಂಟೆಯವರೆಗೆ ನೈವೇದ್ಯದೊಂದಿಗೆ ಭಕ್ತರ ಹರಕೆ ತೀರಿಸುವುದು. ಅದೇದಿನ ರಾತ್ರಿ ಗ್ರಾಮದ ಬೀದಿಗಳಲ್ಲಿ ಚಿತ್ರವಿಚಿತ್ರ ಮ,ದ್ದು ಸುಡುತ್ತ ಶೃಂಗಾರಭರಿತ ನಂದಿಕೋಲಿನ ಭವ್ಯ ಮೆರವಣಿಗೆ ನಡೆಯುವುದು. ರಾತ್ರಿ 10 ಘಂಟೆಗೆ ರಸಮಂಜರಿ ಕಾರ್ಯಕ್ರಮ ಜರುಗುವುದು.

ಡಿ. 5 ಸೋಮವಾರ ಮಧ್ಯಾಹ್ನ 3:00 ಘಂಟೆಗೆ ಜಂಗಿ ನಿಕಾಲಿ ಕುಸ್ತಿ ಜುರುಗುವುದು, ರಾತ್ರಿ 10:ಘಂಟೆಗೆ ಮಗಹೋದರೂ ಮಾಂಗಲ್ಯ ಬೇಕು ಅತರ್ಾರ್ಥ ಹೆತ್ತವರ ಹಾಲು ವಿಶವಾಯ್ತು ಎಂಬ ಸಾಮಾಜಿಕ ನಾಟಕ ಜರುಗುವುದು ಎಂದು ಜಾತ್ರಾ ಕಮೀಟಿ ಪ್ರಕಟಣೆ ತಿಳಿಸಿದೆ.


ಸುದ್ದಿ ಓದಿ