ಮಹಿಳಾ ಜ್ಞಾನವಿಕಾಸ ತಾಲೂಕ ಮಟ್ಟದ ವಿಚಾರಗೋಷ್ಠಿ ಮಹಿಳೆಯರು ಭಾವೈಕ್ಯತೆ- ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಹೊಂದಿರಬೇಕು - ಎಫ್. ಐ. ಇಂಗಳಗಿ
ಮಹಿಳಾ ಜ್ಞಾನವಿಕಾಸ ತಾಲೂಕ ಮಟ್ಟದ ವಿಚಾರಗೋಷ್ಠಿ ಮಹಿಳೆಯರು ಭಾವೈಕ್ಯತೆ- ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಹೊಂದಿರಬೇಕು - ಎಫ್. ಐ. ಇಂಗಳಗಿ
ರಾಣೇಬೆನ್ನೂರು 14: ಭಾರತೀಯ ಸಂಸ್ಕೃತಿಯಲ್ಲಿರುವ ಮಹಿಳೆ, ನೆಲ, ದೇಶ, ಭಾಷೆಯ ಸಂಸ್ಕೃತಿ,ಸಂಸ್ಕಾರ ಆಚಾರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸುಸಂಸ್ಕೃತ ಜೀವನ ಸಾಗಿಸಲು ಆರ್ಥಿಕ ಸಭಲತೆ ಇಂದಿನ ಅಗತ್ಯವಿದೆ ಎಂದು ನಗರಸಭೆ ಪೌರಾಯುಕ್ತ ಎಫ್. ಐ. ಇಂಗಳಗಿ ಹೇಳಿದರು. ಅವರು ಗುರುವಾರ ನೆಹರು ಮಾರ್ಕೆಟ್ ವರ್ತಕರ ಭವನದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ. ಟ್ರಸ್ಟ್, ತಾಲೂಕ ಯೋಜನಾ ಕಚೇರಿ ವಲಯ 1, ಮತ್ತು 2 ಅಡಿಯಲ್ಲಿ ಏರಿ್ಡಸಲಾಗಿದ್ದ, ತಾಲೂಕಾ ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಭಾರತೀಯ ಮಹಿಳೆ ವೇದ ಇತಿಹಾಸಕಾಲದಿಂದಲೂ, ತಾನು ತನ್ನ ಕುಟುಂಬ, ನೆರೆ,ಹೊರೆ ಬಂಧು-ಬಳಗ ಮಕ್ಕಳು ಎನ್ನುವ ಕುಟುಂಬ ಭದ್ರತೆಯ ವ್ಯವಸ್ಥೆಯಲ್ಲಿ ಸಾಗಿ ಬಂದಿದ್ದಾಳೆ. ಸಹನೆಗೆ ಮತ್ತೊಂದು ಹೆಸರೇ ಹೆಣ್ಣು ಅದೇ ಹೆಣ್ಣು ಇಂದು ಆಧುನಿಕ ವ್ಯವಸ್ಥೆ, ಪಾಚ್ಚಿಮಾತ್ಯ ಸಂಸ್ಕೃತಿಯ ಭರಾಟೆಯಲ್ಲಿ ಜೀವನ ಸಾಗಿಸುತ್ತಿದ್ದಾಳೆ. ಪುರುಷಪ್ರಧಾನ ಸಮಾಜದಲ್ಲಿ, ಇಂದಿನ ಆಧುನಿಕ ಮಹಿಳೆ, ಎಲ್ಲ ಕ್ಷೇತ್ರಗಳಲ್ಲಿ ತನ್ನನ್ನೆ ತಾನು ತೊಡಗಿಸಿಕೊಂಡು, ಸಮಾನತೆ ಮೆರೆಯುತ್ತಿರುವುದು ದೇಶದ, ನಾಡಿನ , ಶೈಕ್ಷಣಿಕ,ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಯ ಸಂಕೇತವಾಗಿದೆ ಎಂದರು. ಸಮಗ್ರ ಕುಟುಂಬ ನಿರ್ವಹಣೆಯ ಹೊಣೆ ಹೊತ್ತಿರುವ ಮಹಿಳೆ, ತಮ್ಮ ಮಕ್ಕಳ ಬಗ್ಗೆ ಇಂದು ಅತ್ಯಂತ ಜಾಗ್ರತೆ ವಹಿಸದೆ ಹೋದರೆ, ಭವಿಷ್ಯದಲ್ಲಿ ಮಕ್ಕಳ ವಿಕಾರತೆಗೆ, ತಾವೇ ಕಾರಣರಾಗ ಬೇಕಾಗುತ್ತದೆ ಎಂದು ಮೊಬೈಲ್ ಸಾಧಕ ಮತ್ತು ಬಾದಕ ಕುರಿತು ಸಾಧ್ಯಂತವಾಗಿ ಮಾತನಾಡಿದರು. ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ,ಧಾರವಾಡ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ದಯಾಶೀಲ ಅವರು, ಕ್ಷೇತ್ರದ ಧರ್ಮಾಧಿಕಾರಿಗಳು, ತಮ್ಮ ದೂರ ದೃಷ್ಟಿ, ವೈಚಾರಿಕ ಚಿಂತನೆ, ಸಾಮಾಜಿಕ ಕಳಕಳಿಯಿಂದ, ವಿಮರ್ಶಾತ್ಮಕವಾಗಿ ಮಹಿಳೆಯರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಸಬಲೀಕರಣದ ಹಿನ್ನೆಲೆಯಲ್ಲಿ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಕಳೆದ 4 ದಶಕಗಳ ಹಿಂದೆ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಆರಂಭವಾದ ಸದುದ್ದೇಶದ ಈ ಯೋಜನೆ, ನಾಡಿನಾದ್ಯಂತ ಅತ್ಯಂತ ಯಶಸ್ವಿಯಾಗಿ ಸಾಗಿದೆ. ಗಾಂಧೀಜಿ ಕಂಡ ರಾಮ ರಾಜ್ಯದ ಕನಸು ಇಂದಿನ ಮಹಿಳೆ ಆರ್ಥಿಕ ಸಬಲತೆಯಿಂದ ನನಸಾಗಿಸಲು ಮುಂದಾಗಿದ್ದಾಳೆ ಎಂದರು ಪ್ರಸ್ತುತ ಅವಿಭಕ್ತ ಕುಟುಂಬ ಇಂದು ವಿಭಕ್ತವಾಗಿದೆ ನಾನು, ನನ್ನ ಗಂಡ, ನನ್ನ ಮಕ್ಕಳು ಇಷ್ಟಕ್ಕೆ ಸೀಮಿತವಾಗಿದ್ದೇವೆ ಇಂತಹ ಸಂದರ್ಭದಲ್ಲಿ ಜೀವನ ನಿರ್ವಹಣೆ ಕಷ್ಟಸಾಧ್ಯ. ಆದರೂ ಯಾರಿಗೂ ಕೈ ಓಡ್ಡದೆ ಸ್ವತಂತ್ರ ಜೀವನ ನಡೆಸಲು, ಪರಿಪೂರ್ಣ ಸಮರ್ಥಳಾಗಿರುವುದು ಈ ಯೋಜನೆಯಿಂದ ಸಾಧ್ಯವಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ, ಜಿಲ್ಲಾ ಯೋಜನಾಧಿಕಾರಿ ಶಿವರಾಯ ಪ್ರಭು ಅವರು,ಧಾರ್ಮಿಕ ನೆಲೆಗಟ್ಟಿನಲ್ಲಿ ಮಹಿಳೆಯರ ಜ್ಞಾನ ವಿಕಾಶತೆಗೆ, ಮತ್ತಷ್ಟು ತಿಳುವಳಿಕೆಗಾಗಿ ಹಲವು ವಿಷಯಗಳೊಂದಿಗೆ ಇಂತಹ ಸಾಮುದಾಯಕ ಕಾರ್ಯಕ್ರಮಗಳು ಆಯೋಜಿಸಲಾಗುತ್ತದೆ ಎಂದರು. ಯೋಜನೆಯಲ್ಲಿರುವ ಪಾಲುದಾರ ಸದಸ್ಯರು ಕೇವಲ ಸಾಲ ಪಡೆಯಲು, ಮರುಪಾವತಿ ಮಾಡಲು,ಮಾತ್ರ ಸೀಮಿತವಾಗಬಾರದು. ಅದಕ್ಕಾಗಿ ವ್ಯವಹಾರ ನಿರ್ವಹಣೆ, ಸಾಧಕ ಬಾದಕ, ಮತ್ತು ಜ್ಞಾನ ವಿಕಾಸತೆ ನೀಡುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಸಾಧ್ಯಂತವಾಗಿ ವಿವರಿಸಿದರು. ಮಕ್ಕಳಲ್ಲಿ ಸಂಸ್ಕೃತಿ ಸಂಕಾರ ಬೆಳೆಸುವಲ್ಲಿ ಪೋಷಕರ ಪಾತ್ರ ವಿಷಯ ಕುರಿತು ಭಾರತೀಯ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಅರ್ಚನಾ ಆನಂದ ತೀರ್ಥ ಮಠದ ಅವರು ವಿಶೇಷ ಉಪನ್ಯಾಸ ನೀಡಿದರು. ಒಕ್ಕೂಟದ ಅಧ್ಯಕ್ಷ ಶ್ರೀಮತಿ ವಿಜಯಾ ಬಣಕಾರ ಅವರು ಅಧ್ಯಕ್ಷತೆ ವಹಿಸಿದ್ದರು. ರಾಜಕೀಯ ಯುವ ಮುಖಂಡ ಮಂಜುನಾಥ ಗೌಡ ಶಿವಣ್ಣನವರ ಅವರು ಯೋಜನೆಯ ಪ್ರಯೋಜನ ಕುರಿತಂತೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಧಾರವಾಡ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮಧ ವಿಭಾಗಾಧಿಕಾರಿ ಶ್ರೀಮತಿ ಮಲ್ಲಿಕಾ, ಉಪಸ್ಥಿತರಿದ್ದರು. ಶ್ರೀಮತಿ ಯಶೋಧಾ ಬೆನಕನಕೊಂಡ ಪ್ರಾರ್ಥಿಸಿದರು. ವಲಯ 1 ರ ಯೋಜನಾಧಿಕಾರಿ ಮಂಜುನಾಥ್ ಎಂ.ಪಿ, ಸ್ವಾಗತಿಸಿದರು. ಅನಂತ ಕರೆಣ್ಣನವರ ನಿರೂಪಿಸಿ, ವಲಯ 2, ರ ಯೋಜನಾಧಿಕಾರಿ ಮಂಜುನಾಥಗೌಡ ಎಂ. ವಂದಿಸಿದರು. ನಂತರ ಯೋಜನೆಯ ನೂರಾರು ಮಹಿಳೆಯರು ನಿರೂಪಿಸಿದ, ಜನಪದ ಸಂಸ್ಕೃತಿ ಪ್ರತಿ ಬಿಂಬಿತ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ರಂಜಿಸಿದರು.