ಯರಗಟ್ಟಿ

ಮಹರ್ಷಿ ವಾಲ್ಮೀಕಿ ಜಯಂತಿ ಅರ್ಥಪೂರ್ಣ ಆಚರಣೆ

ಮಹರ್ಷಿ ವಾಲ್ಮೀಕಿ ಜಯಂತಿ ಅರ್ಥಪೂರ್ಣ ಆಚರಣೆ

ಯರಗಟ್ಟಿ 10: ಪಟ್ಟಣದಲ್ಲಿ ದೇಸಾಯಿ ವಾಡೆಯಲ್ಲಿ ಮಹರ್ಷಿವಾಲ್ಮೀಕಿ ಜಯಂತಿಯನ್ನು ಅಜೀತಕುಮಾರ ದೇಸಾಯಿಅವರ ನಿವಾಸದಲ್ಲಿ ಬಿಜೆಪಿ ಶಕ್ತಿಕೇಂದ್ರದಿಂದ ಹಾಗೂ ಎಸ್ ಟಿ ಮೋರ್ಚಾ  ನೇತೃತ್ವದಲ್ಲಿ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಲಾಯಿತು ಪಟ್ಟಣ ಪಂಚಾಯತ ಸದಸ್ಯ ಅಜೀತ ಕುಮಾರ ದೇಸಾಯಿ ಇವರು ಮಾತನಾಡಿ ಇಂದಿನ ಸರಕಾರದಿಂದ ಒಳ್ಳೆ ಸೌಲಭ್ಯಗಳನ್ನು ನೀಡಲಾಗಿದ್ದು ಎಸ್ಸಿಎಸ್ಟಿ ಸಮುದಾಯದವರು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಮತ್ತು ವಿಧಾನ ಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಅವರು ವಾಲ್ಮೀಕಿ ಭವನ ನಿರ್ಮಾಣಕ್ಕೆ ಅನುದಾನವನ್ನು ನೀಡುತ್ತಾರೆ. ಇವತ್ತಿನ ದಿವಸ ಮಹರ್ಷಿ  ವಾಲ್ಮೀಕಿ ಜಯಂತಿಯನ್ನು ಅತಿ ವಿಜೃಂಭಣೆಯಿಂದ ಮಾಡಲಾಯಿತು ಎಂದು ಹೇಳಿದರು.

ತಾಲೂಕಾ ಬಿಜೆಪಿ ಅಧ್ಯಕ್ಷ ಈರಣ್ಣಾ ಚಂದರಗಿ, ಪರ್ವತಗೌಡ ಪಾಟೀಲ, ಡಾ ಶಂಕರಲಿಂಗಪ್ಪ, ಚಂದ್ರಶೇಖರ ಅಳಗೂಡಿ, ಕುಮಾರ ಜಕಾತಿ ಬಸವರಾಜ ಇಂಚಲ, ಆಯ್. ಡಿ. ಪಾಟೀಲ ಸದಾನಂದ ಪಾಟೀಲ, ಶೇಕಪ್ಪ ಹರಳಿ, ಕಾರ್ಯಕರ್ತರು ಉಪಸ್ಥಿತರಿದ್ದರು.

ಸುದ್ದಿ ಓದಿ