ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಮಧ್ಯವರ್ಜನ ಶಿಬಿರ
ಲೋಕದರ್ಶನ ವರದಿ
ಶಿಗ್ಗಾವಿ 20: ವ್ಯಸನದಿಂದ ಮುಕ್ತರಾದವರ ಬದುಕು ಹಸನವಾಗುವಲ್ಲಿ ಯಾವ ಸಂದೇಹವೂ ಇಲ್ಲ ಎಂದು ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.
ಪಟ್ಟಣದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸಭಾಭವನದಲ್ಲಿ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮಧ್ಯವ್ಯಸನಿಗಳು ಆರೋಗ್ಯವಾಗಿ ಮತ್ತು ದೈಹಿಕವಾಗಿ ನಾಶಗೊಂಡು ಆರ್ಥಿಕ ತೊಂದರೆಯಿಂದ ನಾಶವಾಗಿ ಮಾನಸಿಕವಾಗಿ ಕುಟುಂಬಸ್ಥರನ್ನು ನರಳುವಂತೆ ಮಾಡಿ ವೈದ್ಯರಿಂದಲೂ ಉಳಿಸಲಾಗದ ಜೀವ ಮತ್ತು ಜೀವನವನ್ನು ಉಳಿಸಿ ಮಾನಸಿಕ ಮತ್ತು ಕೌಟುಂಬಿಕ ನವಜೀವನ ರೂಪಿಸಿ ಲಕ್ಷಾಂತರ ಜನರ ಜೀವ ಉಳಿಸಿ ಸಾವಿರಾರು ಕುಟುಂಬಗಳನ್ನು ನೆಮ್ಮದಿಯಿಂದ ಬದುಕುವಲ್ಲಿ ದಿಟ್ಟ ಸೇವೆ ಮಾಡಿದ ಧರ್ಮಸ್ಥಳ ಧಮರ್ಾಧಿಕಾರಿ ಪೂಜ್ಯಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲುತ್ತದೆ ಎಂದರು.
ಮಾನಸಿಕವಾಗಿ ಅಂಟಿದ ವ್ಯಸನ ರೋಗವನ್ನು ಮನ ಪರಿವರ್ತನೆ ಮಾಡಿ ಅವರ ಬದುಕನ್ನು ಹಸನ ಮಾಡುವುದು ಕಷ್ಟದ ಕೆಲಸ ಆದರೂ ಅದನ್ನು ಸವಾಲಾಗಿ ಸ್ವೀಕರಿಸಿ ನಮ್ಮ ಶಿಗ್ಗಾವಿಯಲ್ಲಿ 90 ಜನರನ್ನು ಮದ್ಯದಿಂದ ಮುಕ್ತಿ ಮಾಡಿದ ತಮ್ಮ ಧರ್ಮ ಶಕ್ತಿಗೆ ನಮ್ಮೆಲ್ಲರ ಪವಿತ್ರ ಭಕ್ತಿ ಪ್ರಣಾಮಗಳನ್ನು ಸಲ್ಲಿಸುತ್ತೇವೆ ಎಂದರು.
ಜನಜಾಗೃತಿ ರಾಜ್ಯಾಧ್ಯಕ್ಷ ರಾಜಣ್ಣ ಕೊರವಿ ಮಾತನಾಡಿ ಮನ ಪರಿವರ್ತನೆಗೆ ಇನ್ನೊಂದು ಹೆಸರೇ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇವರು ಹೇಳಿದ ಮಾತು ಅಲ್ಲ ಅದು ಸಾಕ್ಷಾತ್ ಮಂಜುನಾಥೇಶ್ವರ ಹೇಳಿದ ವಚನ ಎಂದು ಪರಿಪಾಲಿಸಿ ಹತ್ತಾರು ವರ್ಷದಿಂದ ಬಿಡದ ಮಧ್ಯೆ ವ್ಯಸನಿಗಳು ಮುಕ್ತರಾಗಿ ಮಾನವೀಯತೆಯಿಂದ ಬದುಕುವುದೇ ನಿಜವಾದ ಪರಿವರ್ತನೆ ಎಂದರು.
ಜಿಲ್ಲಾ ಅಧ್ಯಕ್ಷ ಮುತ್ತಣ್ಣ ಎಲಿಗಾರ್ ನಿರ್ದೇಶಕ ದುಗ್ಗೇಗೌಡರು ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಸದಸ್ಯರಾದ ಸಂಗೀತಾ ವಾಲ್ಮೀಕಿ, ವಸಂತಾ ಬಾಗೂರ್,ಮೋಹನ್ ಮೆಣಸಿನಕಾಯಿ. ಕೆನರಾ ಬ್ಯಾಂಕ್ ಮ್ಯಾನೇಜರ್ ಕಿರಣ ಪಾಟೀಲ್. ನಿರ್ದೇಶಕರಾದ ನಾಗರಾಜ ಶೆಟ್ಟಿ. ಉಮಾ. ಸಮಾಜ ಸೇವಕ ಶಶಿಧರ ಎಲಿಗಾರ. ಇನ್ನು ಅನೇಕ ಮಹನೀಯರು ಶಿಬಿರಾರ್ಥಿಗಳು ನೂರಾರು ಜನ ಅವರ ಕುಟುಂಬಸ್ಥರು ಹಾಜರಿದ್ದರು