ಅಂಗವಿಕಲ ಮಕ್ಕಳ ಬಗ್ಗೆ ತಾತ್ಸಾರ ಭಾವನೆ ಬೇಡ: ಪಾಟೀಲ
ಶೇಡಬಾಳ 26: ಅಂಗವಿಕಲ ಮಕ್ಕಳ ಬಗ್ಗೆ ತಾತ್ಸಾರ ಭಾವನೆ ಬೇಡ. ಆ ಮಕ್ಕಳು ದೇವರ ಸಮಾನ. ಹುಟ್ಟಿದಾಗಿನಿಂದಲೇ ಅಂಗವಿಕಲತೆ ಹೊಂದಿರುವುದು ಅವರ ತಪ್ಪಲ್ಲ. ವಿಶೇಷ ಅಗತ್ಯತೆವುಳ್ಳ ಮಕ್ಕಳಿಗೆ ಅನುಕಂಪ ಬೇಡ, ಅವಕಾಶ ಕಲ್ಪಿಸಿ. ಅಂತಹವರಿಗೆ ಯೋಗ್ಯ ಉಪಚಾರ ಹಾಗೂ ಸಲಕರಣೆ ನೀಡಿ ಅವರಿಗೆ ಸಮಾಜದಲ್ಲಿ ಸ್ವಾವಲಂಬಿ ಜೀವನ ಸಾಗಿಸಲು ನಾವೆಲ್ಲರೂ ಕಂಕಣಬದ್ಧರಾಗೋಣ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಕರೆ ನೀಡಿದರು.
ನ.25ರಂದು ಕಾಗವಾಡ ಪಟ್ಟಣದ ಸರ್ಕಾರಿ ಮರಾಠಿ ಶಾಲೆಯ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರ ಕಾರ್ಯಾಲಯ ಚಿಕ್ಕೋಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಲಯ ಕಾಗವಾಡ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ 2022 - 23 ನೇ ಸಾಲಿನ 1ರಿಂದ 10ನೇ ತರಗತಿವರೆಗಿನ ವಿಶೇಷ ಅಗತ್ಯತೆವುಳ್ಳ (ಅಘಖಓ) ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಸಮಯದಲ್ಲಿ ಶಾಸಕರು ಮಾತನಾಡಿ 1 ರಿಂದ 10ನೇ ತರಗತಿ ವರೆಗಿನ ವಿಶೇಷ ಅಗತ್ಯತೆವುಳ್ಳ (ಅಘಖಓ) ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರವನ್ನು ನುರಿತ ತಜ್ಞ ವೈದ್ಯರ ತಂಡವು ವೀಕ್ಷಣೆ ಮಾಡಿ ಅವರಿಗೆ ಉಪಚಾರ ನೀಡಲಿದ್ದು, ಇದರ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಹೇಳಿದರು.
ಈ ಶಿಬಿರದಲ್ಲಿ ಪೂರ್ಣ ದೃಷ್ಟಿ ದೋಷ, ಅಲ್ಪ ದೃಷ್ಟಿ ದೋಷ, ಶ್ರವಣ ನ್ಯೂನ್ಯತೆ, ಮಾತು ಮತ್ತು ಸಂಹಣ ತೊಂದರೆ, ದೈಹಿಕ ನ್ಯೂನ್ಯತೆ, ಮಾನಸಿಕ ಖಿನ್ನತೆ, ನಿರ್ಧಿಷ್ಟ ಕಲಿಕೆ ಅಂಗ ವೈಕಲ್ಯ, ಮೆದುಳುವಾತ, ಆಟಿಸಂ, ಬಹು ವಿಕಲತೆ, ಕುಷ್ಟರೋಗ, ಕುಬ್ಜತೆ, ಬುದ್ಧಿನ್ಯೂನ್ಯತೆ, ಮೌಸ ಖಂಡಗಳ ದುರ್ಬಲತೆ, ಧೀರ್ಘಕಾಲ ನರಬಂದಿತ ಸ್ಥಿತಿ, ಬಹು ಸ್ಲೇರೋಸೋಸಿಸ್, ಥಲಸೇಮಿಯಾ, ಹಿಮೋಪಿಲಿಯ, ಸಿಕ್ಕಲ್ ಸೇಲ್ ಡಿಸಸ್, ಆಸಿಡ್ ಅಟ್ಯಾಕ್, ಪಾಕರ್ಿನಸನ್ ಡಿಸೀಸ್ (ನಡುಗುವ ರೋಗ) ವೈದ್ಯಕೀಯ ತಪಾಸಣೆಗೆ ಒಳಪಡುವ ವಿವಿಧ ನ್ಯೂನ್ಯತೆಯುಳ್ಳ ಮಕ್ಕಳನ್ನು ತಪಾಸಿಸಲಾಯಿತು.
ಈ ಸಮಯದಲ್ಲಿ ಕಾಗವಾಡ ತಹಶೀಲ್ದಾರ ರಾಜೇಶ ಬುಲರ್ಿ, ಉಪತಹಶೀಲ್ದಾರ ಅಣ್ಣಾಸಾಬ ಕೋರೆ, ಬಿಇಓ ಎಂ.ಆರ್.ಮುಂಜೆ, ಸಿಡಿಪಿಓ ಸಂಜೀವಕುಮಾರ ಸದಲಗಿ, ಜಿ.ಎಂ.ಸಡ್ಡಿ, ರವೀಂದ್ರ ಖಡಾಖಡಿ, ಸೇರಿದಂತೆ ಹಲವಾರು ಇಲಾಖೆಯ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಶಾಲಾ ಶಿಕ್ಷಕರು, ಶಿಕ್ಷಕಿಯರು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ವಿಶೇಷ ಅಗತ್ಯತೆವುಳ್ಳ ಮಕ್ಕಳು, ಪಾಲಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.